ವ್ಯವಸಾಯದ ಜತೆಗೆ ಹೈನುಗಾರಿಕೆಯಂತಹ ಉಪ ಕಸಬುಗಳನ್ನು ಅಳವಡಿಸಿಕೊಂಡು ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಕೆ.ಮಹದೇವ್ ಹೇಳಿದರು.

ತಾಲೂಕಿನ ಕೋಮಲಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಬಿಎಂಸಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು, ಸಂಘದ ಸದಸ್ಯರು ಉತ್ತಮ ಗುಣಮಟ್ಟದ ಹಾಲು ಪೂರೈಕೆಗೆ ಆದ್ಯತೆ ನೀಡಿ ಹೆಚ್ಚು ದರ ಪಡೆಯಬೇಕು, ಶಾಸಕನಾಗಿ ಆಯ್ಕೆಯಾದಾಗಿನಿಂದ ಕ್ಷೇತ್ರದ ಜನತೆಯ ಮನವಿಗಳಿಗೆ ಪೂರಕವಾಗಿ ಸ್ಪಂದಿಸುತ್ತಿದ್ದು ತಾಲೂಕಿನಾದ್ಯಂತ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ, ಕೇವಲ ಒಂದೇ ಗ್ರಾಮದ ಎಲ್ಲ ಸಮಸ್ಯೆಗಳನ್ನು ಏಕಕಾಲದಲ್ಲಿ ಪರಿಹರಿಸಲು ಸಾಧ್ಯವಿಲ್ಲ ತಾಲೂಕಿನ ಎಲ್ಲ ಹಳ್ಳಿಗಳಿಗೂ ಪಕ್ಷಾತೀತವಾಗಿ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ, ತಾಲೂಕಿನ ಅಭಿವೃದ್ಧಿಗಾಗಿ ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದ ಹಣ ವಾಪಸ್ ಆದ್ದರಿಂದ ಅಭಿವೃದ್ಧಿ ಸ್ವಲ್ಪ ಕುಂಠಿತವಾಗಿದ್ದು ಮುಂದಿನ ದಿನಗಳಲ್ಲಿ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುದಾನ ಮಂಜೂರಾತಿಗೆ ಮನವಿ ಸಲ್ಲಿಸುತ್ತೇನೆ, 2008 ರ  ಚುನಾವಣೆಯಲ್ಲಿಯೇ ನಾನು ಶಾಸಕನಾಗಿ ಆಯ್ಕೆಯಾಗಿದ್ದರೆ ಇಲ್ಲಿಯವರೆಗೆ ತಾಲೂಕಿನ ಹಳ್ಳಿಗಳ ಮೂಲಭೂತ ಸೌಕರ್ಯಗಳ ಕೊರತೆಗೆ ಪರಿಹಾರ ದೊರಕಿಸುತ್ತಿದೆ ಎಂದರು.

    ಗ್ರಾಮದ ಮುಖಂಡ ಕೆ.ಪ್ರೇಮ್ ಕುಮಾರ್ ಮಾತನಾಡಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರ ಮರಣ ನಿಧಿ ಪರಿಹಾರ ಧನ ಹೆಚ್ಚಳವಾಗಬೇಕು, ಮೈಮೂಲ್ ರಾಜ್ಯದಲ್ಲಿಯೇ ಅತಿ ಹೆಚ್ಚು ಆದಾಯ ಹೊಂದಿದ್ದು ಉತ್ತರ ರಾಜ್ಯಗಳಿಗೆ ನಮ್ಮವರು ಅಧ್ಯಯನ ಪ್ರವಾಸ ಹೋಗುವ ಬದಲು ಅವರೇ ನಮ್ಮ ಸ್ಥಳಗಳಿಗೆ ಬರುವಂತಾಗಬೇಕು ಈ ನಿಟ್ಟಿನಲ್ಲಿ ಮೈಮುಲ್ ಕಾರ್ಯ ನಿರ್ವಹಿಸುವಂತಾಗಬೇಕು ಎಂದರು.

   ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ ಮಾತನಾಡಿ ನಿರ್ದೇಶಕನಾಗಿ ಆಯ್ಕೆಯಾದಾಗಿನಿಂದ ತಾಲೂಕಿನ ರೈತರ ಪರ ಕೆಲಸ ನಿರ್ವಹಿಸಿ ಹೈನುಗಾರಿಕೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ತಾಲೂಕಿನಿಂದ ಗುಣಮಟ್ಟದ ಹಾಲು ಪೂರೈಕೆಯಾಗುವಂತೆ ಅಗತ್ಯ ಕ್ರಮ ಕೈಗೊಂಡಿದ್ದು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ, ಮುಂದಿನ ದಿನಗಳಲ್ಲಿಯೂ ತಮ್ಮ ಬೆಂಬಲವಿರಲಿ ಎಂದರು.

    ಒಕ್ಕೂಟದ ಪ್ರಭಾರ ವ್ಯವಸ್ಥಾಪಕ ಡಾ.ಎನ್. ಕುಮಾರ್, ಸಂಘದ ಅಧ್ಯಕ್ಷ ಕೃಷ್ಣೇಗೌಡ, ಮಾಜಿ ಗ್ರಾ.ಪಂ ಸದಸ್ಯ ಗಣೇಶ್, ರೈತ ಮುಖಂಡ ಸ್ವಾಮಿಗೌಡ ಮಾತನಾಡಿದರು, ಶಾಸಕರು ಹಾಗೂ ಒಕ್ಕೂಟದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

    ಕಾರ್ಯಕ್ರಮದಲ್ಲಿ ಮೈಮುಲ್ ನಿರ್ದೇಶಕಿ ದ್ರಾಕ್ಷಾಯಿಣಿ ಬಸವರಾಜು, ಜಿ.ಪಂ ಸದಸ್ಯ ಕೆ.ಸಿ ಜಯಕುಮಾರ್, ಒಕ್ಕೂಟದ ಸಹಾಯಕ ವ್ಯವಸ್ಥಾಪಕ ನಾಗೇಶ್ ಕುಮಾರ್, ವಿಸ್ತರಣಾಧಿಕಾರಿಗಳಾದ ನಟರಾಜು, ನಿಶ್ಚಿತ್, ಶ್ರೀಕಾಂತ್, ತುಳಸಿಕುಮಾರ್  ಸಂಘದ ಉಪಾಧ್ಯಕ್ಷ ಮಲ್ಲಯ್ಯ, ನಿರ್ದೇಶಕರುಗಳಾದ ಸಾವಿತ್ರಮ್ಮ, ಅಕ್ಕಯ್ಯಮ್ಮ, ನಿಂಗಮ್ಮ, ಪುಟ್ಟರಾಜು, ಜವರನಾಯಕ, ಜವರೇಗೌಡ, ರಮೇಶ್, ವಸಂತ್ ಕುಮಾರ್, ಗಣೇಶ್, ಸತೀಶ್, ಮಂಜೇಗೌಡ, ಸಿಇಒ ದಿಲೀಪ್, ಸಿಬ್ಬಂದಿ ಶೇಖರ್, ಚಂದ್ರೇಗೌಡ, ಪರಮೇಶ್, ಪಿಡಿಒ ಶಿವನಗೌಡ ಕೊರೇಗೌಡ್ರು, ಗ್ರಾಮದ ಯಜಮಾನರು, ಮುಖಂಡರು, ಸಂಘದ ಸದಸ್ಯರುಗಳು ಹಾಜರಿದ್ದರು.     

Leave a Comment

Your email address will not be published. Required fields are marked *

error: Content is protected !!
Scroll to Top