
ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ನಡೆದ ಬೆಟ್ಟದಪುರದಲ್ಲಿ ಡಿ.22ರಂದು ನಡೆಯಲಿರುವ 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು, ಕನ್ನಡ ನಾಡು ನುಡಿಯ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಸಂಬಂಧ ತಾಲೂಕು ಕಸಾಪ ಉತ್ತಮ ಕೆಲಸ ನಿರ್ವಹಿಸಿ ರಾಜ್ಯದಲ್ಲಿ ಮಾದರಿಯಾಗಿರುವುದು ಶ್ಲಾಘನೀಯ, ಈಗಾಗಲೇ ತಾಲೂಕಿನಲ್ಲಿ ಹಲವು ಸಮ್ಮೇಳನಗಳನ್ನು ಆಯೋಜಿಸಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಉತ್ತಮ ಸಹಕಾರದಿಂದ ಯಶಸ್ವಿಗೊಳಿಸಲಾಗಿದೆ, ಅಂತೆಯೇ ಡಿ.22ರಂದು ತಾಲೂಕಿನ ಬೆಟ್ಟದಪುರದಲ್ಲಿ ನಡೆಸಲು ಉದ್ದೇಶಿಸಿರುವ 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಲು ನನ್ನ ಸಂಪೂರ್ಣ ಸಹಕಾರವಿದೆ, ಅಧಿಕಾರಿಗಳು ಹಾಗೂ ಸಾರ್ವಜನಿಕರು ತಮ್ಮ ಕೈಲಾದ ಸಹಕಾರ ನೀಡಿ ಕನ್ನಡ ತೇರನ್ನು ಎಳೆಯುವ ಕಾರ್ಯದಲ್ಲಿ ಭಾಗವಹಿಸುವಂತೆ ಕೋರಿದರು.
ಕಸಾಪ ಅಧ್ಯಕ್ಷ ಗೊರಳ್ಳಿ ಜಗದೀಶ್ ಮಾತನಾಡಿ ಶಾಸಕ ಕೆ.ಮಹದೇವ್ ಅವರು, ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ತಾಲೂಕಿನಲ್ಲಿ ಈ ಹಿಂದೆ ಆಯೋಜಿಸಿದ್ದ ಜಿಲ್ಲಾ ಸಮ್ಮೇಳನ ಯಶಸ್ವಿಯಾಗಿ ಜರುಗಿತು, ಮುಂಬರುವ ಸಮ್ಮೇಳನ ಯಶಸ್ವಿಯಾಗಲು ತಾಲೂಕಿನ ಅಧಿಕಾರಿಗಳ ಉಸ್ತುವಾರಿಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ, ತಮಗೆ ವಹಿಸಿರುವ ಸಮಿತಿಗಳ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸಮ್ಮೇಳನ ಯಶಸ್ವಿಗೊಳಿಸುವಂತೆ ಕೋರಿದರು.
ಇದೇ ವೇಳೆ ಸಮ್ಮೇಳನದ ಲಾಂಛನವನ್ನು ಶಾಸಕ
ಕೆ.ಮಹದೇವ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಇಒ ಡಿ.ಸಿ ಶ್ರುತಿ, ಪುರಸಭಾ ಸದಸ್ಯರಾದ ಪಿ.ಸಿ ಕೃಷ್ಣ, ಪ್ರಕಾಶ್ ಸಿಂಗ್, ಕಸಾಪ ಹಿರಿಯ ಸದಸ್ಯರಾದ ಅಣ್ಣಯ್ಯಶೆಟ್ಟಿ, ಸಿಪಿಐ ಬಿ.ಆರ್ ಪ್ರದೀಪ್, ಎಸ್ಐ ಸಿಯು ಸವಿ, ಲೋಕೋಪಯೋಗಿ ಎಇಇ ನಾಗರಾಜ್, ಬಿಇಓ ರಾಮಾರಾಧ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಅಗ್ನಿಶಾಮಕ ಇಲಾಖಾ ಅಧಿಕಾರಿ ವೆಂಕಟೇಶ್, ಕಸಾಪ ಪದಾಧಿಕಾರಿಗಳಾದ ಕೆ.ಎಸ್ ಮಹದೇವಪ್ಪ, ಶಿಕ್ಷಕ ರಾಜು, ಪಟೇಲ್ ನಟೇಶ್, ಎಸ್.ಮಲ್ಲೇಶ್, ಪ್ರೀತಿ ಅರಸ್, ರಾಜೇಶ್ ನಾಯಕ್ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.