
ಪಟ್ಟಣದ ಬೆಟ್ಟದಪುರ ರಸ್ತೆ ಬಳಿ ತಾಲೂಕು ಗುತ್ತಿಗೆದಾರರ ಸಂಘದ ಕಚೇರಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು, ಕೆಲ ವರ್ಷಗಳಿಂದೀಚೆಗೆ ಬೇರೆ ತಾಲೂಕಿನ ಹಾಗೂ ಹೊರ ಊರುಗಳ ಗುತ್ತಿಗೆದಾರರು ನಮ್ಮ ತಾಲೂಕಿನಲ್ಲಿ ಆನ್ಲೈನ್ ಟೆಂಡರ್ ಮೂಲಕ ಗುತ್ತಿಗೆ ಪಡೆದು ಕೆಲಸ ಮಾಡುವುದರ ಮೂಲಕ ನಮ್ಮ ತಾಲೂಕಿನ ಗುತ್ತಿಗೆದಾರರ ಮೇಲೆ ಪೈಪೋಟಿ ಸಾದಿಸುತ್ತಿರುವುದರ ಜೊತೆಗೆ ಗುಣಮಟ್ಟದ ಕೆಲಸಗಳಿಗೆ ಆದ್ಯತೆ ನೀಡುತ್ತಿಲ್ಲ, ಈ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಸಂಘ ರಚಿಸಿದ್ದು ಮುಂದಿನ ದಿನಗಳಲ್ಲಾದರೂ ಪೈಪೋಟಿಗೆ ಬಿದ್ದು ಇಲಾಖೆ ಸೂಚಿಸಿದ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಟೆಂಡರ್ ಪಡೆಯದೆ ಆದ್ಯತೆ ಅನುಸಾರ ಕರ್ತವ್ಯ ನಿರ್ವಹಿಸಿ ಎಂದರು
ಸಂಘದ ಅಧ್ಯಕ್ಷ ಅಶ್ವತ್ಥ್ ಮಾತನಾಡಿ ಸಂಘ ಈಗಾಗಲೇ 125 ಜನ ಸದಸ್ಯರನ್ನು ಹೊಂದಿದ್ದು ಸಂಘಕ್ಕೆ ನಿವೇಶನ ಮತ್ತು ಕಟ್ಟಡದ ಅವಶ್ಯಕತೆಯ ಸಮಸ್ಯೆ ಪರಿಹರಿಸುವಲ್ಲಿ ಶಾಸಕರು ಸಹಕಾರ ನೀಡಬೇಕು ಎಂದರು.
ಸಂಘದ ಉಪಾಧ್ಯಕ್ಷ ಕೆ.ಜೆ. ವೆಂಕಟೇಶ್ ಮಾತನಾಡಿ ಕಳೆದ ಹತ್ತು ವರ್ಷದಿಂದೀಚೆಗೆ ಸರ್ಕಾರ ಗುತ್ತಿಗೆ ಪಡೆಯಲು ಆನ್ಲೈನ್ ವ್ಯವಸ್ಥೆ ಮಾಡಿದ ನಂತರ ಸ್ಥಳೀಯ ಗುತ್ತಿಗೆದಾರರು ಸಮಸ್ಯೆ ಅನುಭವಿಸುವಂತಾಯಿತು, ಗುಣಮಟ್ಟದ ಕೆಲಸಗಳ ಮೂಲಕ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವಂತೆ ಹೇಳಿದರು.
ಇದೇ ವೇಳೆ ತಾಲೂಕಿನಲ್ಲಿ ಸಂಘ ರಚಿಸಲು ಸಲಹೆ ಮತ್ತು ಮಾರ್ಗದರ್ಶನ ನೀಡಿದ ಲೋಕೋಪಯೋಗಿ ಇಲಾಖೆಯ ಎಇಇ ನಾಗರಾಜ್ ಹಾಗೂ ವಿವಿಧ ಇಲಾಖೆಗಳ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಎಚ್.ಡಿ ಜಗದೀಶ್, ಪ್ರಧಾನ ಕಾರ್ಯದರ್ಶಿ ಕೆ.ಎಸ್ ಕೃಷ್ಣೇಗೌಡ, ಉಪಾಧ್ಯಕ್ಷ ಬಲರಾಮ್, ಕಾರ್ಯದರ್ಶಿ ನವೀನ್, ಖಜಾಂಚಿ ವಸಂತ್, ನಿರ್ದೇಶಕರುಗಳಾದ ದೇವರಾಜ್, ಜಯಣ್ಣ, ಲೋಕೇಶ್, ಅಮೃತೇಶ್, ರಾಜಶೇಖರ್, ಕುಮಾರಸ್ವಾಮಿ, ತಮ್ಮಯ್ಯ, ಸ್ವಾಮಿ, ಕಾವೇರಿ ನಿಗಮ ಅಭಿಯಂತರ ನವೀನ್, ತಾ.ಪಂ ಸದಸ್ಯರಾದ ಈರಯ್ಯ, ಮಲ್ಲಿಕಾರ್ಜುನ್, ಮಾಜಿ ಸದಸ್ಯ ರಘುನಾಥ್ ಸಂಘದ ಪದಾಧಿಕಾರಿಗಳು ಹಾಜರಿದ್ದರು.