ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ನೂತನವಾಗಿ ಆರಂಭಿಸಿರುವ ತಮ್ಮ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು, ಅಧಿಕಾರಿಗಳು ಜನಸಾಮಾನ್ಯರ ಕುಂದುಕೊರತೆಗಳಿಗೆ ಶೀಘ್ರ ಸ್ಪಂದಿಸಿ ಅವರಿಗೆ ಪರಿಹಾರ ಒದಗಿಸಬೇಕು, ಅವರಿಗೆ ಬೇಕಾಗಿರುವ ದಾಖಲಾತಿಗಳನ್ನು ನೀಡಲು ನಿರ್ಲಕ್ಷ್ಯತನ ಮಾಡಿ ವಿಳಂಬ ಮಾಡದೇ ನಿಗದಿತ ದಿನದೊಳಗೆ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದರು, ತಾಲೂಕು ಆಡಳಿತ ಭವನದಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ಇರುವುದರಿಂದ ಸಾರ್ವಜನಿಕ ಕೆಲಸಗಳಿಗಾಗಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸಿದರೆ ನೇರ ನನ್ನನ್ನು ಸಂಪರ್ಕಿಸಿ ದೂರು ನೀಡಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು, ಪಟ್ಟಣದಲ್ಲಿಯೇ ನನ್ನ ನಿವಾಸವಿರುವುದರಿಂದ ತಾಲೂಕಿನ ಜನತೆಯ ಕುಂದುಕೊರತೆ ನಿವಾರಿಸಲು ದಿನದ 24 ಗಂಟೆಯು ಸದಾ ಸಿದ್ಧ ಎಂಬ ಭರವಸೆ ನೀಡಿದರು.
ತಹಸೀಲ್ದಾರ್ ಶ್ವೇತಾ ಎನ್. ರವೀಂದ್ರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೂತನ ಕಚೇರಿಯಲ್ಲಿ ಶಾಸಕರನ್ನು ಭೇಟಿ ಮಾಡಿ ಅಭಿನಂದನೆ ತಿಳಿಸಿದರು.
ಈ ಸಂದರ್ಭ ಮೈಮೂಲ್ ನಿರ್ದೇಶಕ ಪಿ.ಎಂ ಪ್ರಸನ್ನ ಶಾಸಕರ ಆಪ್ತ ಸಹಾಯಕ ಜಿ.ಸಿ ಮಹದೇವ್, ಪ್ರದೀಪ್, ಜಿ.ಪಂ ಸದಸ್ಯರಾದ ಕೆ.ಎಸ್ ಮಂಜುನಾಥ್, ಜಯಕುಮಾರ್, ತಾ.ಪಂ ಸದಸ್ಯರಾದ ರಂಗಸ್ವಾಮಿ, ಟಿ. ಈರಯ್ಯ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಸಭಾ ಸದಸ್ಯರಾದ ಪಿ.ಸಿ ಕೃಷ್ಣ, ಮಹೇಶ್, ನಿರಂಜನ್, ಪ್ರಕಾಶ್ ಸಿಂಗ್, ಮುಖಂಡರಾದ ಮಾಕೋಡು ಜವರಪ್ಪ, ಮುಷೀರ್ ಖಾನ್, ಅಮ್ಜದ್ ಶರೀಫ್, ಇಲಿಯಾಸ್, ಸಂತೋಷ್, ಪೆಪ್ಸಿ ಕುಮಾರ್, ಚಂದ್ರಶೇಖರಯ್ಯ, ಯತಿರಾಜೇಗೌಡ ಮತ್ತಿತರರು ಇದ್ದರು.