ತಂಬಾಕು ಹರಾಜು ಮಾಟುಕಟ್ಟೆಯಲ್ಲಿ ಬೆಲೆ ದಿಢೀರ್ ಕುಸಿತ ಕಂಡಿದ್ದರಿಂದ ಕಳೆದ ಎರಡು ದಿನಗಳ ಹಿಂದೆ ರೈತರು ಹರಾಜು ಪ್ರಕ್ರಿಯೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ಶಾಸಕ ಕೆ.ಮಹದೇವ್ ಕಗ್ಗಂಡಿ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಬಾರಿ ತಾಲೂಕಿನಾದ್ಯಂತ ಅತಿವೃಷ್ಠಿ ಹಾಗೂ ಅನಾವೃಷ್ಠಿಗೆ ತುತ್ತಾಗಿ ತಾವು ಬೆಳೆದ ತಂಬಾಕು ಬೆಳೆಯ ಗುಣಮಟ್ಟ ಮತ್ತು ಉತ್ಪಾದನೆ ಕುಂಟಿತಗೊಂಡು ರೈತನಷ್ಟ ಅನುಭವಿಸುವಂತಾಗಿದ್ದು, ಈ ಸಂದರ್ಭದಲ್ಲಿ ತಂಬಾಕು ಖರೀದಿಸುವ ಕಂಪನಿಗಳು ರೈತರಿಗೆ ಸೂಕ್ತ ಬೆಲೆ ನೀಡದಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಂಡಳಿಯ ಅಧಿಕಾರಿಗಳು ಮತ್ತು ಕಂಪನಿಗಳು ರೈತರ ಹಿತಕಾಯುವ ನಿಟ್ಟಿನಲ್ಲಿ ಅವರು ಬೆಳೆದ ತಂಬಾಕಿಗೆ ಹರಾಜು ಪ್ರಕ್ರಿಯೆ ಪ್ರಾರಂಭದ ಹಂತದಿಂದ ಕೊನೆಯ ಹಂತದ ವರೆಗೂ ಸರಾಸರಿ ಬೆಲೆಯನ್ನು ನೀಡುವ ಮೂಲಕ ರೈತರನ್ನು ಉಳಿಸುವ ಕೆಲಸ ಮಾಡಬೇಕು ಎಂದರು. ತಂಬಾಕು ಮಂಡಳಿಯಲ್ಲಿ, ರಾಜಕೀಯ ಪ್ರವೇಶ, ಜಾತಿಭೇಧ ಯಾವುದಕ್ಕೂ ಅವಕಾಶ ನೀಡದೆ ಮಾರುಕಟ್ಟೆಯಲ್ಲಿ ಎಲ್ಲಾ ರೈತರಿಗೂ ಸಮರ್ಪಕ ಬೆಲೆ ನೀಡಬೇಕು, ಅದೇ ರೀತಿ ರೈತರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದರು.
ಕೆಲವರು ನಾನು ತಂಬಾಕು ಮಂಡಳಿ ಮತ್ತು ಕಂಪನಿಯೊಂದಿಗೆ ಶಾಮೀಲಾಗಿ ಕಮಿಷನ್ ಪಡೆಯುತ್ತಿದ್ದಾರೆ ಎಂದು ದೂರುತ್ತಿರುವುದು ಸತ್ಯಕ್ಕೆ ದೂರವಾಗಿದೆ ಎಂದರು.
ಪ್ರಾದೇಶಿಕ ತಂಬಾಕು ಮಂಡಳಿಯ ವ್ಯವಸ್ಥಾಪಕ ಕೆ.ವಿ.ತಲಪಸಾಯಿ ಮಾತನಾಡಿ ತಂಬಾಕು ಮಂಡಳಿ ರೈತರ ಶ್ರೇಯೋಭಿವೃದ್ಧಿಗೆ ಬದ್ದವಾಗಿದೆ ಎಂದರು. ರೈತರು ಮಾರುಕಟ್ಟೆಗೆ ತಂಬಾಕು ಬೇಲುಗಳನ್ನು ತರುವ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಹಾಗೂ ಕಡಿಮೆ ಗುಣಮಟ್ಟದ ಮತ್ತು ಮಧ್ಯಮ ಗುಣಮಟ್ಟದ ಬೇಲ್ ಗಳನ್ನು ತರಬೇಕು ಆಗ ಅವರಿಗೆ ನಷ್ಟದ ಪ್ರಮಾಣ ಕಡಿಮೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ತಂಬಾಕು ಮಂಡಳಿಯ ಹರಾಜು ಅಧೀಕ್ಷಕರಾದ ಎಚ್‌.ಕೆ.ಗೋಪಾಲ್‌, ಕೆ.ಎಸ್‌.ಮಂಜುನಾಥ, ಐಟಿಸಿ ಕಂಪನಿಯ ಅಧಿಕಾರಿಗಳಾದ ಪೂರ್ಣೇಶ್, ವಾಸು ಸೇರಿದಂತೆ ಇತರರು ಹಾಜರಿದ್ದರು.
09ಪಿವೈಪಿ01: ಪಿರಿಯಾಪಟ್ಟಣ ತಾಲ್ಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಗೆ ಶಾಸಕ ಕೆ.ಮಹದೇವ್ ಶನಿವಾರ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳ ಸಭೆ ನಡೆಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top