ತಾಲೂಕಿನಲ್ಲಿರುವ ಅನೇಕ ಗ್ರಾಮಾಂತರ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿದ್ದು ಅಂತಹ ಗ್ರಾಮಗಳ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು ಎಂದು ಶಾಸಕ ಕೆ.ಮಹದೇವ್ ಭರವಸೆ ನೀಡಿದರು.

ತಾಲೂಕಿನ ವಿವಿಧೆಡೆ ರೂ.65ಲಕ್ಷ ವೆಚ್ಚದ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿ ಚನ್ನಕಲ್ ಕಾವಲ್ ಗ್ರಾಮದಲ್ಲಿ ಅವರು ಮಾತನಾಡಿದರು, ಗ್ರಾಮಸ್ಥರು ರಸ್ತೆ ಚರಂಡಿ ಅಂಗನವಾಡಿ ದುರಸ್ತಿ  ಒತ್ತುವರಿ ತೆರವು ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆ ಬಗೆಹರಿಸುವಂತೆ ಶಾಸಕರನ್ನು ಕೋರಿದಾಗ ಪ್ರತಿಕ್ರಿಯಿಸಿದ ಅವರು ಗ್ರಾಮದಲ್ಲಿ ಬಾಕಿ ಇರುವ ರಸ್ತೆ ಚರಂಡಿ ಕಾಮಗಳಿಗೆ ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಪಡಿಸಲಾಗುವುದು, ಅಂಗನವಾಡಿ ದುರಸ್ತಿಗೆ ಈಗಾಗಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದುರಸ್ತಿ ಪಡಿಸಲು ಸೂಚನೆ ನೀಡಲಾಗಿದೆ 
ಸ್ಮಶಾನ ಜಾಗಕ್ಕೆ ಎರಡು ಎಕರೆ ಭೂಮಿಯನ್ನು ಗುರುತಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ವಹಿಸಲಾಗಿದೆ ಎಂದರು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ವಹಿಸುವ ಮುಖಾಂತರ ಹಳ್ಳಿಗಳಲ್ಲಿ ನಡೆದ ಕಾಮಗಾರಿಗಳು ದೀರ್ಘ ಕಾಲ ಉತ್ತಮ ನಿರ್ವಹಣೆ ಬರುವಂತೆ ಕಾಪಾಡಿಕೊಳ್ಳಬೇಕು ಎಂದರು. ಇದೇ ವೇಳೆ ಮುತ್ತಿನ ಮುಳ್ಳುಸೋಗೆ ಮತ್ತು ಕಣಗಾಲು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

   ಈ ಸಂದರ್ಭ ಜಿ.ಪಂ ಸದಸ್ಯ ರಾಜೇಂದ್ರ, ತಾ.ಪಂ ಸದಸ್ಯೆ ಜಯಂತಿ ಸೋಮಶೇಖರ್, ಗ್ರಾ.ಪಂ ಅಧ್ಯಕ್ಷ ಸುಂದರೇಶ್, ಸದಸ್ಯರಾದ ಕೌಸರ್, ಸರೋಜಮ್ಮ,  ಅವರ್ತಿ ಗ್ರಾ.ಪಂ ಅಧ್ಯಕ್ಷೆ ಭಾಗ್ಯ ಮುಖಂಡರಾದ ರಾಮನಾಯಕ, ಬಸವನಾಯಕ, ಧನರಾಜ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top