ಗುತ್ತಿಗೆದಾರರು ಗುಣಮಟ್ಟದ ಕೆಲಸಗಳಿಗೆ ಆದ್ಯತೆ ನೀಡಿ ಕಾಮಗಾರಿಗಳು ದೀರ್ಘಕಾಲ ಬಾಳಿಕೆ ಬರುವಂತೆ ನಿರ್ವಹಣೆ ಮಾಡಿದಾಗ ಮಾತ್ರ ಸಾರ್ವಜನಿಕರಿಂದ ಪ್ರಶಂಸೆ ಪಡೆಯಬಹುದು, ಗುತ್ತಿಗೆದಾರರು ಸರ್ಕಾರದ ನಿಗದಿತ ದರಕ್ಕಿಂತ ಕಡಿಮೆಗೆ ಟೆಂಡರ್ ಪಡೆಯದೇ ಉತ್ತಮ ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡುವಂತೆ ಹೇಳಿದರು, ತಾಲೂಕಿನ ಕಿರನಲ್ಲಿ ಗ್ರಾಮದಲ್ಲಿ ಕೆಲ ತಿಂಗಳುಗಳ ಹಿಂದೆ ನೂತನವಾಗಿ ರಾಜೀವಗಾಂಧಿ ಸೇವಾ ಕೇಂದ್ರಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು ಸಹ ಪಕ್ಕದಲ್ಲಿನ ಕೋಡಿಹಳ್ಳ ಸೇತುವೆ ಕಾಮಗಾರಿ ಆರಂಭವಾಗದೇ ಕಟ್ಟಡ ಕಾಮಗಾರಿ ವಿಳಂಬವಾಗಿತ್ತು, ಮುಂದಿನ ದಿನಗಳಲ್ಲಿ ಕಾಮಗಾರಿಗಳು ಶೀಘ್ರ ಮುಗಿದು ಸಾರ್ವಜನಿಕರಿಗೆ ಅನುಕೂಲವಾಗುವ ಭರವಸೆ ನೀಡಿದರು.
ಈ ಸಂದರ್ಭ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಇಒ ಡಿ.ಸಿ ಶ್ರುತಿ, ಸದಸ್ಯ ಟಿ.ಈರಯ್ಯ, ಪುರಸಭೆ ಸದಸ್ಯರಾದ ರುಾಹಿಲ್ಲಾ ಖಾನ್, ಪಿ.ಸಿ ಕೃಷ್ಣ, ಮಹೇಶ್, ಪ್ರಕಾಶ್ ಸಿಂಗ್, ಕಿರನಲ್ಲಿ ಗ್ರಾ.ಪಂ ಅಧ್ಯಕ್ಷೆ ಸುಧಾ ಹಾಗು ಸದಸ್ಯರು, ಮುಖಂಡರಾದ ಸೋಮಣ್ಣ, ರಘುನಾಥ್, ಪ್ರೇಮಕುಮಾರ್, ಮುಷೀರ್ ಖಾನ್, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.