ಈ ಸಂದರ್ಭ ಶಾಸಕ ಕೆ.ಮಹದೇವ್ ಮಾತನಾಡಿ ಗ್ರಾಮಾಂತರ ಪ್ರದೇಶದಲ್ಲಿನ ಜನರು ಶುದ್ಧ ಕುಡಿಯುವ ನೀರನ್ನು ಬಳಸಿ ಆರೋಗ್ಯವಂತರಾಗಿ ಬಾಳಲು ಸರ್ಕಾರ ಪಂಚಾಯಿತಿ ವ್ಯಾಪ್ತಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದೆ, ತಾಲೂಕಿನ ವಿವಿಧ ಗ್ರಾಮಗಳಿಂದ ಘಟಕ ಸ್ಥಾಪನೆಗೆ ಮನವಿ ಬಂದಿದ್ದು ಜನಸಂಖ್ಯೆಗನುಗುಣವಾಗಿ ಮುಂದಿನ ದಿನಗಳಲ್ಲಿ ಘಟಕ ನಿರ್ಮಿಸುವ ಭರವಸೆ ನೀಡಿದರು, ನೀರಿನ ಘಟಕಗಳ ನಿರ್ವಹಣೆಯನ್ನು ಸಂಬಂಧಿಸಿದ ಪಂಚಾಯಿತಿಗಳು ಉತ್ತಮವಾಗಿ ನಡೆಸಿಕೊಂಡು ಹೋಗುವಂತೆ ತಿಳಿಸಿದರು.
ತಾಲೂಕಿನ ಕರಡಿಲಕ್ಕನಕೆರೆ ಕಾಲುವೆಗಳ ಆಧುನೀಕರಣಕ್ಕೆ ಸುಮಾರು 1 ಕೋಟಿ ರೂಗಳ ವೆಚ್ಚದಲ್ಲಿ ರಸ್ತೆ ಮತ್ತು ಮೆಟ್ಲಿಂಗ್ ಕಾರ್ಯವನ್ನು ಕೈಗೆತ್ತುಕೊಳ್ಳಲಾಗಿದ್ದು ಹಂತಹಂತವಾಗಿ ಎಲ್ಲಾ ಕಾಲುವೆಗಳ ಅಭಿವೃದ್ಧಿ ಮಾಡುವ ಮೂಲಕ ರೈತರಿಗೆ ನೀರನ್ನು ಒದಗಿಸುವ ಕೆಲಸ ಶೀಘ್ರದಲ್ಲಿ ಮುಗಿಸುವ ಭರವಸೆ ನೀಡಿದರು, ಈ ವೇಳೆ ಗ್ರಾಮಸ್ಥರು ಶಾಸಕರಿಗೆ ಕುಂದುಕೊರತೆಗಳ ಮನವಿ ನೀಡಿದರು.
ಈ ಸಂದರ್ಭ ಜಿ.ಪಂ ಮಾಜಿ ಸದಸ್ಯ ಶಿವಣ್ಣ, ಹಂಡಿತವಳ್ಳಿ ಗ್ರಾ.ಪಂ ಅಧ್ಯಕ್ಷೆ ವತ್ಸಲ ಮಂಜುನಾಥ್, ಸದಸ್ಯ ಜವರಾಯಿ, ಮುಖಂಡರಾದ ಪುಟ್ಟ ಸೋಮಾರಾಧ್ಯ ಮಂಜುನಾಥ್, ಭಾಸ್ಕರ್, ಮಲ್ಲೇಶ್, ಸ್ವಾಮೀಗೌಡ, ಮಹದೇವ್, ತಮ್ಮೇಗೌಡ, ಚಿಕ್ಕೇಗೌಡ, ಭಾಸ್ಕರ್, ಗ್ರಾಮೀಣ ಕುಡಿಯುವ ನೀರು ತಾಲೂಕು ಅಭಿಯಂತರ ಪ್ರಭು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.