
ತಾಲ್ಲೂಕಿನ ಕಿತ್ತೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವು ಹೊಸದಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಹೈನುಗಾರಿಕೆಯಿಂದ ಗ್ರಾಮದ ಕೆಲವರು ಆರ್ಥಿಕವಾಗಿ ಸುಭದ್ರವಾಗಿದ್ದಾರೆ ಎಂಬುದು ಹೆಮ್ಮೆಯ ವಿಷಯ ಎಂದರು. ಸಹಕಾರ ಸಂಘಗಳು ಹಣ ದುರ್ಬಳಕೆಗೆ ಕೈಹಾಕದೆ ಪಾದರ್ಶಕ ಆಡಳಿತ ನಡೆಸುವ ಮೂಲಕ ಆರ್ಥಿಕವಾಗಿ ಸುಭದ್ರವಾಗಿದ್ದರೆ ಉತ್ತಮ ಪ್ರಗತಿ ಸಾಧಿಸ ಬಹುದು ಎನ್ನುವುದಕ್ಕೆ ಉತ್ತಮ ನಿದರ್ಶನ ಎಂದರು.
ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ ಮಾತನಾಡಿ ಕಿತ್ತೂರು ಗ್ರಾಮ ರಾಜಕೀಯದಲ್ಲಿ ಮಾತ್ರ ಮುಂದೆ ಇತ್ತು ಈಗ ಹಾಲು ಉತ್ಪಾದನೆಯಲ್ಲೂ ಮುಂದೆ ಇದೆ ಎನ್ನುವುದನ್ನು ಸಾಬೀತು ಪಡಿಸಿದೆ ಎಂದು ಪ್ರಶಂಸಿಸಿದರು. ಹಸುಗಳಿಗೆ, ಮತ್ತು ಷೇರುದಾರರಿಗೆ ಇನ್ಸುರೆನ್ಸ್ ಮಾಡಿಸಲಾಗುತ್ತಿದ್ದು ಅದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್ ಮಾತನಾಡಿ 40 ವರ್ಷದ ಹಿಂದೆ ಪ್ರಾರಂಭಿಸಲಾಗಿರುವ ಈ ಸಹಕಾರ ಸಂಘವು ಉತ್ತಮವಾಗಿ ಆಡಳಿತ ನಡೆಸಿದರೆ ಮಾತ್ರ ಸಂಘ ಅಸ್ತಿತ್ವ ಉಳಿಸಿಕೊಂಡು ಅಭಿವೃದ್ದಿ ಹೊಂದಲು ಸಾಧ್ಯ ಎಂದು ತೋರಿಸಿಕೊಟ್ಟಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಅಣ್ಣಯ್ಯಶೆಟ್ಟಿ, ಸಂಸದ ಪ್ರತಾಪ್ ಸಿಂಹ ಪತ್ನಿ ಅರ್ಪಿತಾಸಿಂಹ ಮಾತಾನಾಡಿದರು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಮುಂದೆ ಹಸು ಪ್ರತಿಮೆ ಅನಾವರಣ ಗೊಳಿಸಲಾಯಿತು.
ಸಮಾರಂಭದಲ್ಲಿ ಜಿ.ಪಂ.ಸದಸ್ಯ ಕೆ.ಎಸ್.ಮಂಜುನಾಥ್, ಮೈಮುಲ್ ಪ್ರಭಾರ ವ್ಯವಸ್ಥಾಪಕ ಡಾ.ಎನ್.ಕುಮಾರ್, ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಸಂದೇಶ್, ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ದಶರಥ, ಗ್ರಾ, ಪಂ.ಮಾಜಿ ಅಧ್ಯಕ್ಷ ಕೆ.ಸಿ.ಅಶ್ವಥ್, ಸಹಕಾರ ಸಂಘದ ನಿರ್ದೇಶಕರಾದ ಮಹದೇವ್, ಪ್ರಶಾಂತ್ ಬಾಲು, ಕೃಷ್ಣನಾಯಕ್, ತುಳಸಮ್ಮ, ಮೀನಾಕ್ಷಮ್ಮ, ಚಂದ್ರಪ್ಪ, ಚಂದ್ರೇಗೌಡ, ವೆಂಕಟೇಶ್, ಸಿಇಓ ಡಿ.ಆರ್.ಮನು, ಸಿಬ್ಬಂದಿಗಳಾದ ಡಿ.ಸಿ.ಮಂಜುನಾಥ, ಡಿ.ವಿ.ಮಹೇಶ, ಮುಖಂಡರಾದ ದಿನೇಶ್, ಕೃಷ್ಣೇಗೌಡ ಮತ್ತಿತರರು ಹಾಜರಿದ್ದರು.
