
ಪಟ್ಟಣದ ತಾ.ಪಂ ಕಚೇರಿ ಸಭಾಂಗಣದ ನವೀಕರಣ ಕಚೇರಿ ಉದ್ಘಾಟಿಸಿ ಅವರುಮಾತನಾಡಿದರು, ಗ್ರಾ.ಪಂ ಅಭಿವೃದ್ಧಿಗೆ ನೀಡುತ್ತಿರುವ ಅನುದಾನಕ್ಕೆ ಹೋಲಿಸಿದಲ್ಲಿ ತಾ.ಪಂ ಮತ್ತು ಜಿ.ಪಂ ಅನುದಾನ ಅತ್ಯಂತ ಕನಿಷ್ಠದ್ದಾಗಿದ್ದು ಸರ್ಕಾರವು ಅನುದಾನ ನೀಡಲು ಸಾಧ್ಯವಿಲ್ಲದಿದ್ದಲ್ಲಿ ತಾ.ಪಂ ಮತ್ತು ಜಿ.ಪಂ ಗಳನ್ನು ರದ್ದುಗೊಳಿಸಲಿ ಎಂದರು, ಗ್ರಾಮ ಸ್ವರಾಜ್ಯದ ಕನಸು ನನಸಾಗ ಬೇಕಿದ್ದಲ್ಲಿ ಸರ್ಕಾರವು ಈ ಕೂಡಲೇ ತಾ.ಪಂ ಮತ್ತು ಜಿ.ಪಂ ಗೆ ನಿಗದಿಗೊಳಿಸಿರುವ ಅನುದಾನದ ಹಣವನ್ನು ಹೆಚ್ಚಳ ಮಾಡುವಂತೆ ಮನವಿ ಮಾಡಿದರು. ಅನುದಾನದ ಕೊರತೆಯಿಂದಾಗಿ ಸದಸ್ಯರು ಮುಜುಗರ ಅನುಭವಿಸುವಂತಾಗಿದ್ದು ತಮ್ಮ ವ್ಯಾಪ್ತಿಯ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದರು.
ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ ಮಾತನಾಡಿ ಕೋವಿಡ್- 19 ಲಾಕ್ ಡೌನ್ ನಿಂದಾಗಿ ಸರ್ಕಾರದ ಕೆಲಸಗಳು ವಿಳಂಬವಾಗಿವೆ, ನವೀಕರಣಗೊಂಡಿರುವ ಕಚೇರಿಯು ಶೇ.100 ಪೂರ್ಣಗೊಂಡಿಲ್ಲವಾದರೂ ದಿನಾಂಕ ನಿಗದಿಯಾಗಿದ್ದರಿಂದ ಉದ್ಘಾಟನೆ ಗೊಳಿಸಲಾಗಿದೆ ಉಳಿದಿರುವ ಕಾಮಗಾರಿಗಳನ್ನು ಶೀಘ್ರವಾಗಿ ಸಂಪೂರ್ಣಗೊಳಿಸಿ ಸುಸಜ್ಜಿತ ಸಭಾಂಗಣವನ್ನು ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ ಇಒ ಡಿ.ಸಿ ಶ್ರುತಿ, ಸದಸ್ಯರಾದ ಎಸ್.ರಾಮು, ಟಿ.ಈರಯ್ಯ, ಆರ್.ಎಸ್ ಮಹದೇವ, ಕುಂಜಪ್ಪ ಕಾರ್ನಾಡ್, ಮೋಹನ್ ರಾಜ್, ಶಿವಮ್ಮ, ಎ.ಟಿ ರಂಗಸ್ವಾಮಿ, ಮಾನು, ಶ್ರೀನಿವಾಸ್ ಮತ್ತಿತರರು ಇದ್ದರು.