
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಕಟ್ಟಡದಲ್ಲಿ ನವೀಕರಿಸಿದ ಕಚೇರಿ ಸಿಬ್ಬಂದಿ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು ನೂತನ ಕೊಠಡಿಯ ನವೀಕರಣ ಕಾರ್ಯಕ್ಕೆ ಸರ್ಕಾರ ವತಿಯಿಂದ ಅಂದಾಜು 4ಲಕ್ಷ ರೂ ವೆಚ್ಚವಾಗಿದ್ದು ಸಿಬ್ಬಂದಿಗಳು ಸುಸ್ಥಿತಿ ಕಾಪಾಡಿಕೊಂಡು ದೀರ್ಘಕಾಲ ಉತ್ತಮ ನಿರ್ವಹಣೆ ಬರುವಂತೆ ಕಾಪಾಡಿಕೊಳ್ಳಬೇಕು, ನೂತನ ಕೊಠಡಿಯಲ್ಲಿ ಎಲ್ಲ ಸಿಬ್ಬಂದಿಗಳು ಒಂದೆಡೆ ಕುಳಿತು ಕೆಲಸ ತಮ್ಮ ತಮ್ಮ ಕೆಲಸ ನಿರ್ವಹಿಸುವ ಸದಾವಕಾಶ ದೊರೆತಿದ್ದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಿ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ
ಡಾ.ಜೆ. ಶ್ರೀನಿವಾಸ್ ಮಾತನಾಡಿ ಲಾಕ್ ಡೌನ್ ಸಡಿಲಿಕೆಯ ನಂತರ ಆಸ್ಪತ್ರೆಯಲ್ಲಿ ಹೊರರೋಗಿಗಳ ಚಿಕಿತ್ಸೆಗೆ ಅನುವು ಮಾಡಿಕೊಡಲಾಗಿದ್ದು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಉತ್ತಮ ಕರ್ತವ್ಯ ನಿರ್ವಹಿಸಲಾಗುತ್ತಿದೆ ಎಂದರು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಶ್, ತಾ.ಪಂ ಅಧ್ಯಕ್ಷೆ ನಿರೂಪ, ಇಒ ಡಿ.ಸಿ ಶ್ರುತಿ, ಸರ್ಕಲ್ ಇಸ್ಪೆಕ್ಟರ್ ಬಿ.ಆರ್ ಪ್ರದೀಪ್, ಪುರಸಭಾ ಮುಖ್ಯಾಧಿಕಾರಿ ಚಂದ್ರಕುಮಾರ್ ಸೇರಿದಂತೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.