ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಗುರುವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ನಾಯಕ ಜನಾಂಗದ ಮುಖಂಡ ಪಿ.ಡಿ.ರಾಮಚಂದ್ರ ಮಾತನಾಡಿ ಅಧಿಕಾರಿಗಳ ನಿರ್ಲಕ್ಷತನದಿಂದಾಗಿ ಸಭೆಗಳಲ್ಲಿ ಚರ್ಚಿಸುವ ಸಮಸ್ಯೆಗಳಿಗೆ ಇಂದಿಗೂ ¥ರಿಹಾರÀ ದೊರತ್ತಿಲ್ಲ ಎಂದು ತಾಲ್ಲೂಕು ನಾಯಕ ಸಮುದಾಯದ ಮುಖಂಡ ಆರೋಪಿಸಿದರು. ಇದಕ್ಕೆ ಉಳಿದ ಸದಸ್ಯರು ದಿನಗೂಡಿಸಿದರು. ಈ ಹಿಂದೆ ಅನೇಕ ಗಂಭೀರ ವಿಷಯಗಳ ಬಗ್ಗೆ ಚರ್ಚಿಸಿ ಪರಿಹರಿಸುವಂತೆ ಮನವಿ ಮಾಡಿದ್ದÀರೂ ಅಧಿಕಾರಿಗಳ ನಿರ್ಲಕ್ಷö್ಯದಿಂದ ಯಾವುದೇ ಸಮಸ್ಯೆಗಳು ಪರಿಹರ ಸಿಕ್ಕಲ್ಲ ಎಂದು ಬಹುತೇಕ ಮುಖಂಡರು ದೂರಿದರು.
ಗಿರಿಜನ ಹಾಡಿಗಳಲ್ಲಿ ಮೃತ ದೇಹಗಳನ್ನು ಅಂತ್ಯ ಸಂಸ್ಕಾರ ಮಾಡಲು ಸ್ಮಶಾನಗಳಿಲ್ಲದೆ ಪರಿತಪಿಸುತ್ತಿರುವ ಬಗ್ಗೆ ವಲಯ ಅರಣ್ಯಾಧಿಕಾರಿ ಮತ್ತು ತಾಲ್ಲೂಕು ಆಡಳಿತಾಧಿಕಾರಿಗಳ ಗಮನಕ್ಕೆ ತಂದಿದ್ದೆನೆ.ಮೃತ ವ್ಯೆಕ್ತಿಗಳ ದೇಹವನ್ನು ದೂರದ ಊರುಗಳಿಗೆ ಕೊಂಡ್ಯೋದು ಅಂತ್ಯ ಸಂಸ್ಕಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ರಾಮಚಂದ್ರ ಆರೋಪಿಸಿದರು.
ತಾಲ್ಲೂಕಿನಲ್ಲಿರುವ ಕಂದಾಯ ಇಲಾಖೆಯು ನೆಪ ಮಾತ್ರಕ್ಕೆ ನೀರು ತುಂಬಿ ಹರಿಯುವ ಸ್ಥಳವೊಂದನ್ನು ಗುರುತಿಸಿರುವುದಷ್ಟೆ ಸರಿ ಇದಕ್ಕೆ ಯಾವುದೇ ರೀತಿಯ ದಾಖಲೆ ನೀಡಿಲ್ಲ ಜೊತೆಗೆ ಈ ಸ್ಥಳದಲ್ಲಿ ಅಂತ್ಯ ಸಂಸ್ಕಾರ ಮಾಡಲು ತೆರಳಿದರೆ ಆ ಭೂಮಿಯ ಅಕ್ಕಪಕ್ಕದ ವ್ಯಕ್ತಿಗಳು ಅಡ್ಡಿಪಡಿಸುತ್ತಾರೆ ಎಂದು ಆರೋಪಿಸಿದರು. ಈ ವಿಚಾರವಾಗಿ ಮರಳಕಟ್ಟೆ ಹಾಡಿಯ ಗಿರಿಜನ ಮುಖಂಡ ಮಧು ಕುಮಾರ್ ಕೂಡ ದನಿಗೂಡಿಸಿ ಈ ಭಾಗದಲ್ಲಿ ವಾಸವಿರುವ ಗಿರಿಜನರಿಗೆ ಜಿಲ್ಲಾಧಿಕಾರಿಗಳು ಕೈ ಪಂಪ್ ಬೋರ್‌ವೆಲ್ ಗಳಿಗೆ ಆದೇಶಿಸಿದ್ದರೂ ಅರಣ್ಯ ಇಲಾಖೆ ತಡೆಹಿಡಿದು ವಾಪಾಸ್ಸು ಕಳುಹಿಸಿ ಇಂದು ಕುಡಿಯುವ ನೀರಿಗೂ ತೊಂದರೆ ಅನುಭವಿಸುವಂತ್ತಾಗಿದೆ.ಇದಲ್ಲದೆ ಪರಿಶಿಷ್ಟ ವರ್ಗಗಳ ಸಮುದಾಯವು ವಾಸವಿರುವ ಕೆಲವು ಭಾಗಗಳಲ್ಲಿ ನಿರ್ಮಿಸಿರುವ ರಸ್ತೆ ಮತ್ತು ಚರಂಡಿಗಳು ಕಳಪೆ ಗುಣ ಮಟ್ಟದಾಗಿದೆ ಎಂದರು.
ಪುರಸಭೆಯ ವ್ಯಾಪ್ತಿಯಲ್ಲಿನ ಮಳಿಗೆಗಳನ್ನು ಹರಾಜು ಮಾಡುವಲ್ಲಿ ಮೀಸಲಾತಿ ಮಾನದಂಡ ಅನುಸರಿಸುವಂತೆ ಅನೇಕ ಸಭೆಗಳಲ್ಲಿ ಮನವಿ ಮಾಡಿದರು ಇಲ್ಲಿಯವರೆಗೂ ಯಾವ ಕ್ರಮ ಕೈಗೊಂಡಿಲ್ಲ.ಇದರಿAದಾಗಿ ದಲಿತ ವಿರೋಧಿ ನೀತಿ ಆಚರಣೆಯಲ್ಲಿರುವುದು ಮೇಲ್ನೋಟಕ್ಕೆ ಕಾಣಿತ್ತಿದೆ.ಈ ಬಗ್ಗೆ ಮುಂದಿನ ದಿನಗಳಲ್ಲಿ ಸಮುದಾಯದ ವತಿಯಿಂದ ಉಗ್ರ ಹೋರಾಟ ಮಡುವುದಾಗಿ ಕೃಷಪುರ ಗೋಪಾಲ ತಿಳಿಸಿದರು.ಮಾಜಿ ಪುರಸಭಾ ಸದಸ್ಯ ಪುಟ್ಟಯ್ಯ ಮಾತನಾಡಿ ವಾಲ್ಮೀಕಿ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ ರಾಮ್ ಭವನದ ನಿರ್ಮಾಣ ಹಲವು ದಿನಗಳ ಕನಸಾಗಿದೆ.ಇವುಗಳ ನಿರ್ಮಾಣಗಳನ್ನು ಕೈಗೆತ್ತಿಕೊಂಡ ಇಲಾಖೆಯು ಕಾಮಗಾರಿಗಳನ್ನು ಅಪೂರ್ಣಗೊಳಿಸಿದೆ ಇದು ಮಹಾನ್ ನಾಯಕರುಗಳಿಗೆ ಮಾಡಿದ ಅಪಮಾನವಾಗಿದೆ.ಈ ಕಟ್ಟಡಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅತೀ ಶೀಘ್ರದಲ್ಲಿ ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಕೊಡಬೇಕು ಎಂದು ಒತ್ತಾಯಿಸಿದರು.
ಕೊಪ್ಪದ ಮಿಳಿಂದ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಹಿತದೃಷ್ಟಿಯ ಕಾರಣ ಹೇಳಿ ಕೊಪ್ಪ ಗ್ರಾಮ ಪಂಚಾಯತಿಯ ಪಿಡಿಒ ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಪರವಾನಗಿ ಪಡೆದು ಶಾಲೆ ಸಮೀಪದ ಇತರೆ ಸ್ಥಳಗಳನ್ನು ಕಾನೂನು ಬಾಹಿರವಾಗಿ ದುರಸ್ಥಿ ಮಾಡಿದ್ದಾರೆ.ಈ ವಿಷಯವನ್ನು ಕ್ರಮಕೈಗೊಳ್ಳುವಂತ್ತೆ ಒತ್ತಾಯಿಸಿದರು ಕೂಡ ಬಂಡವಾಳಷಾಹಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ದೂರಿದರು. ಇದೇ ಸಂರ್ಭದಲ್ಲಿ ಬಾಳೆ ಕಟ್ಟೆ ರಾಜಯ್ಯ ದಲಿತ ಸಮುದಾಯದ ಹೋರಾಟಗಾರರ ಮೇಲೆ ವಿನಾ ಕಾರಣ ಬೆಟ್ಟದಪುರ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಲೊಕೇಶ್ ರವರು ರೌಡಿಶೀಟ್ ತೆಗೆದು ತೊಂದರೆ ನೀಡುತ್ತಿದ್ದಾರೆ ಎಂದರು.
ಸಭೆಯಲ್ಲಿ ಸಮಸ್ಯೆಗಳನ್ನು ಆಲಿಸಿದ ಶಾಸಕ ಕೆ.ಮಹದೇವ ಮಾತನಾಡಿ ಅಧಿಕಾರಿಗಳು ಪ್ರತಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಬದ್ದರಾಗಿರಬೇಕು.ಇಂದಿಗೂ ಕೂಡ ಇತರೆ ಸಮುದಾಯಗಳು ಇಷ್ಟೊಂದು ಸಂಕಷ್ಟಕ್ಕೆ ಒಳಗಾಗಿದೆ ಎಂದರೆ ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ.ತಳ ಸಮುದಾಯಗಳ ಅಭಿವೃದ್ದಿಗೆ ಸಹಕಾರ ನೀಡದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.ಅಲ್ಲದೆ ಪಟ್ಟಣದ ಮಾರುಕಟ್ಟೆಯನ್ನು ಪುನರ್ ನವೀಕರಣ ಮಾಡಲು ತಿರ್ಮಾನಿಸಿದ್ದು ನಂತರ ರೋಸ್ಟಾರ್ ಅಳವಡಿಸಿ ಮಳಿಗೆಗಳ ಹಂಚಿಕೆ ಮಾಡಲಾಗುವುದು ಮತ್ತು ತಾಲ್ಲೂಕಿನ ಮೂಲಭೂತ ಸಮಸ್ಯಗಳನ್ನು ಬಗೆಹರಿಸಲು ಪ್ರಮಾಣಿಕವಾಗಿ ಶ್ರಮಿಸುತ್ತೆನೆ ಮತ್ತು ಕಾನೂನು ರಕ್ಷಣೆಗೂ ಕೂಡ ಸಹಕರಿಸುತ್ತೆನೆ ಎಂದರು.
ಈ ಸಂದರ್ಭದಲ್ಲಿ ತಾ ಪಂ ಸದಸ್ಯರಾದ ರಾಮು ಐಲಾಪುರ,ಟ.ಈರಯ್ಯ,ತಾ ಪಂ ಕಾರ್ಯ ನಿರ್ವಾಹಕಾಧಿಕಾರಿ ಶೃತಿ,ತಹಸಿಲ್ದಾರ್ ಶ್ವೇತ ಎನ್ ರವೀಂದ್ರ,ಸಮಾಜ ಕಲ್ಯಾಣಾಧಿಕಾರಿ ರಾಮೇಗೌಡ,ಚೆಸ್ಕಾಂ ಅಧಿಕಾರಿ ಕಲೀಂ,ತೋಟಾಗಾರಿಕೆ ಇಲಾಖಾದಿಕಾರಿ ಸೋಮಯ್ಯ,ವೃತ್ತ ನಿರೀಕ್ಷಕ ಪ್ರದೀಪ್,ತಾಲ್ಲೂಕು ಆರೋಗ್ಯಧಿಕಾರಿ ಡಾ.ನಾಗೇಶ್,ಎಇಇ ಪ್ರಭು,ನಾಗರಾಜು,ಜಯರಾಮ್,ಮುಖಂಡರಾದ ಶಿವಣ್ಣ ಬೂತನಹಳ್ಳಿ,ಸಿ.ಎಸ್.ಜಗದೀಶ್,ಈರಾಜ್,ಅರ,ಡಿ.ಮಹದೇವ್,ಬಸಪ್ಪ,ಮೋಹನ್,ಜಾನಕಮ್ಮ,ರವಿ ಚಪ್ಪರದಳ್ಳಿ,ಆರ್.ಎಸ್.ದೊಡ್ಡಣ್ಣ,ಮಾಕೊಡು ಜವರಪ್ಪ,ಆರ್.ವೆಂಕಟೇಶ್,ಚೌತಿ ಮಲ್ಲಣ್ಣ ಸೇರಿದಂತ್ತೆ ಇತರರು ಹಾಜರಿದ್ದರು.