ಈ ವೇಳೆ ಶಾಸಕ ಕೆ.ಮಹದೇವ್ ಮಾತನಾಡಿ ಪ್ರತಿ ವರ್ಷ ದೀಪಾವಳಿ ಸಂದರ್ಭ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತಾದಿಗಳ ಸಮ್ಮುಖ ಮೂರು ದಿನಗಳ ಕಾಲ ಶ್ರೀ ಮಹದೇಶ್ವರ ಸ್ವಾಮಿ ಜಾತ್ರೆ ನಡೆಯುತ್ತದೆ, ಈ ಸಂದರ್ಭ ಭಕ್ತಾದಿಗಳಿಗೆ ಅನಾನುಕೂಲವಾಗಬಾರದು ಎಂಬ ದೃಷ್ಟಿಯಿಂದ ವಾರ್ಡ್-23 ರ ಮಹದೇಶ್ವರ ದೇವಾಲಯ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ ದೀರ್ಘಕಾಲ ಬಾಳಿಕೆ ಬರುವ ರಸ್ತೆ ನಿರ್ಮಿಸುವಂತೆ ಸೂಚಿಸಿ ಮುಂಬರುವ ದೀಪಾವಳಿ ಜಾತ್ರೆಯ ಸಂದರ್ಭದೊಳಗೆ ಕಾಮಗಾರಿ ಮುಗಿಸುವಂತೆ ತಿಳಿಸಿದರು.
ಈ ಸಂದರ್ಭ ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ, ಪುರಸಭೆ ಸದಸ್ಯರಾದ ನೂರ್ಜಾನ್ ಸೈಯದ್ ಇಲಿಯಾಸ್, ಪಿ.ಸಿ ಕೃಷ್ಣ, ಮಹೇಶ್, ನಿರಂಜನ್, ರವಿ, ಪ್ರಕಾಶ್ ಸಿಂಗ್, ತಾಲೂಕು ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಚಂದ್ರಶೇಖರಯ್ಯ, ಕಾರ್ಯದರ್ಶಿ ಮುಖೇಶ್ ಕುಮಾರ್, ಮುಖಂಡರಾದ ಶಾಂತಪ್ಪ, ನಾಗಣ್ಣ, ದುಂಡುಮಾದಪ್ಪ, ಪೆಪ್ಸಿ ಕುಮಾರ್, ರಾಜಣ್ಣ, ಇಲಿಯಾಸ್, ಪುರಸಭಾ ಮುಖ್ಯಾಧಿಕಾರಿ ಚಂದ್ರಕುಮಾರ್ ಹಾಗೂ ಸಿಬ್ಬಂದಿಗಳು, ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಹಾಜರಿದ್ದರು.