ಪಿರಿಯಾಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕನಕ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಹಾಗೂ ಕನಕದಾಸರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ಬದುಕಿರುವಾಗಲೇ ಭಗವಂತನನ್ನು ತನ್ನ ಕಣ್ಣಿನಿಂದ ಕಂಡAತಹ ಏಕೈಕ ವ್ಯಕ್ತಿ ಕನಕದಾಸರು ಎಂದರೆ ತಪ್ಪಾಗಲಾರದು ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕು ಕುರುಬರ ಸಂಘದ ವತಿಯಿಂದ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ 532 ನೇ ಕನಕ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದಾರ್ಶನಿಕರು ಹಾಗೂ ಮಹನೀಯರು ತೋರಿದಂತಹ ಮಾರ್ಗದಲ್ಲಿ ಕಿಂಚಿತ್ತಾದರೂ ನಡೆದಲ್ಲಿ ನಮ್ಮ ಬದುಕು ಹಸನಾಗಲಿದೆ ಎಂದ ಅವರು ಈ ನಾಡಿನ ಸಂತ ಶ್ರೇಷ್ಟರಲ್ಲಿ ಕ್ರಾಂತಿಕಾರಿ ಪುರುಷ ಕನಕ ದಾಸರಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಸಂತ ಕನಕದಾಸರ ಬಗ್ಗೆ ಉಪನ್ಯಾಸ ನೀಡಿದ ಚಿಂತಕ ನಿಖಿತ್ ರಾಜ್ ಮಾತನಾಡಿ ಯಾವ ರಾಜಾಶ್ರಯವೂ ಇಲ್ಲದ ತಳ ಸಮುದಾಯದ ವ್ಯಕ್ತಿಯಾಗಿದ್ದ ಕನಕದಾಸರು ಕ್ರಾಂತಿಕಾರಕ ತಮ್ಮ ದಾಸ ಸಾಹಿತ್ಯದ ಮೂಲಕ ಇಂದಿಗೂ ಜನಮಾನಸದಲ್ಲಿ ಜೀವಂತವಾಗಿದ್ದಾರೆ ಎಂದರು. ಕನ್ನಡ ಸಾಹಿತ್ಯ ಲೋಕದಲ್ಲಿ ಕನ್ನಡ ಭಾಷೆಯಲ್ಲಿಯೇ ದಾಸ ಸಾಹಿತ್ಯವನ್ನು ಹುಟ್ಟುಹಾಕಿದ ಕನಕದಾಸರು ಸಂಪ್ರದಾಯ ವಾದಿಗಳೊಂದಿಗೇ ಇದ್ದು ಅವರ ತಪ್ಪನ್ನು ಎತ್ತಿ ತೋರಿಸುವ ಎದೆಗಾರಿಕೆ ಹೊಂದಿದ್ದರು ಎಂದರು. ಕಾಲ್ನಡಿಗೆಯಲ್ಲಿಯೇ ದೇಶವನ್ನು ಸುತ್ತಿ ಜ್ಞಾನ ಪ್ರಸಾರವನ್ನು ಮಾಡಿದ ಕನಕದಾಸರು ಶೋಷಿತ ಸಮಾಜದ ಪರವಾಗಿ ದನಿ ಎತ್ತಿದ ನಾಯಕರಾಗಿದ್ದರು ಎಂದು ಅಭಿಪ್ರಾಯಪಟ್ಟರು.
ಮೈಸೂರಿನ ಶ್ರೀ ಶಿವಯೋಗಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ ಕನಕದಾಸರಿಂದಾಗಿಯೇ ಉಡುಪಿಯ ಶ್ರೀಕೃಷ್ಣಮಠಕ್ಕೆ ಹೆಚ್ಚಿನ ಮಹತ್ವ ಬಂದಿದ್ದು ಶೋಷಿತ ಸಮಾಜದ ಒಳಿತಿಗಾಗಿ ದುಡಿದಂತಹ ಬಸವಣ್ಣ, ವಾಲ್ಮೀಕಿ, ಅಂಬೇಡ್ಕರ್, ಮಹಾತ್ಮಗಾಂಧಿ ಮತ್ತಿತರರು ಸಮಾಜದ ರತ್ನಗಳಾಗಿದ್ದರು ಎಂದರು. ನಾವೆಲ್ಲರೂ ಸ್ವಾರ್ಥದ ಕತ್ತರಿಗಳಾಗದೆ ಸ್ವಾಭಿಮಾನದ ಸೂಜಿಗಳಾದಲಿ ಮಾತ್ರ ಸಮಾಜವನ್ನು ಕಟ್ಟಲು ಸಾಧ್ಯ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕನಕದಾಸರ ಭಾವಚಿತ್ರ ಹಾಗೂ ಕನಕ ಗುರುಪೀಠದ ಕೆ.ಆರ್.ನಗರ ಶಾಖಾಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿಗಳನ್ನು ಪಟ್ಟಣದ ಎಪಿಎಂಸಿ ಬಳಿಯಿಂದ ವಿವಿಧ ಕಲಾತಂಡಗಳೊAದಿಗೆ ಹಾಗೂ ಪೂರ್ಣಕುಂಭದೊAದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಾಜಿ ಸಚಿವ ಎಚ್.ವಿಶ್ವನಾಥ್ ಮತ್ತು ಮಾಜಿ ಶಾಸಕ ಎಚ್.ಸಿ. ಬಸವರಾಜ್ ಮೆರವಣಿಗೆಯಲ್ಲಿ ಹಾಜರಿದ್ದು ಶುಭ ಕೋರಿ ಅಲ್ಲಿಂದ ತೆರಳಿದರು.
ಉಡುಪಿಯ ಶ್ರೀ ಪೇಜಾವರ ಶ್ರೀಗಳು ನಿಧನರಾದ ಹಿನ್ನೆಲೆಯಲ್ಲಿ ಇಂದು ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಗೈರಾಗಿದ್ದರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾರೋಗ್ಯದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಸಿ.ಎಚ್.ವಿಜಯಶಂಕರ್, ಕೆ.ವೆಂಕಟೇಶ್, ಶಾಸಕ ಕೆ.ಮಹದೇವ್ ಬೆಟ್ಟದಪುರ ಸಲೀಲಾಖ್ಯ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ವಿ.ಜಿ. ಅಪ್ಪಾಜಿ ಗೌಡ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ಕಗ್ಗುಂಡಿ ಶ್ರೀ ಹರಳಯ ಮಠದ ಸ್ವಾಮೀಜಿ, ಮುಡುಕುತೊರೆಯ ಸಿದ್ದರಾಮ ಸ್ವಾಮೀಜಿ, ಜಿ.ಪಂ. ಸದಸ್ಯರಾದ ಸಿ.ಮಣಿ, ಕೌಶಲ್ಯ ಲೋಕೇಶ್, ಮಾಜಿ ಸದಸ್ಯರಾದ ಹೇಮಾವತಿ ಶಿವಕುಮಾರ್, ಜವರಪ್ಪ, ಶಿವಣ್ಣ, ತಾಲ್ಲೂಕಿನ ವಿವಿಧ ಸಮಾಜಗಳ ಮುಖಂಡರಾದ ದೇವರಾಜು, ಜಯಶಂಕರ, ಪುಟ್ಟಯ್ಯ, ರಹಮತ್ ಜಾನ್ ಬಾಬು, ಶಿವಣ್ಣ ,ರವಿ ಪಾಳ್ಯ, ಕುಮಾರ್, ಪಿ.ವಿ.ನಾಗರಾಜ್, ವಸಂತ್ ಕುಮಾರ್, ಅಣ್ಣಯ್ಯ ಶೆಟ್ಟಿ, ಚಂದ್ರಶೇಖರಯ್ಯ, ಚಂದ್ರು, ಕೃಷ್ಣ, ರಾಮು, ಮಲ್ಲೇಶ್, ಎಸ್.ಕೆ. ಲಕ್ಷ್ಮಣೇಗೌಡ, ಮಹದೇಶ್ ಜಯಲಕ್ಷ್ಮಮ್ಮ, ತಾಲ್ಲೂಕು ಕುರುಬ ಸಮಾಜದ ಮುಖಂಡರಾದ ಎಂ.ಎA. ರಾಜೇಗೌಡ, ಡಿ.ಟಿ.ಸ್ವಾಮಿ, ಡಿ.ಎ.ನಾಗೇಂದ್ರ, ಪುಟ್ಟರಾಜು, ಜವರಪ್ಪ, ನಿಲಂಗಾಲ ಜಯಣ್ಣ, ಆರ್.ಎಸ್.ಮಹದೇವ್, ಮಲ್ಲಿಕಾರ್ಜುನ, ಎ.ಟಿ. ರಂಗಸ್ವಾಮಿ, ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top