
ಪಿರಿಯಾಪಟ್ಟಣ ತಾಲೂಕಿನ ಕಣಗಾಲು, ಕೊಪ್ಪ, ಮತ್ತು ದೊಡ್ಡಹರವೆ ಹಾಗು ಇತರೆ ಗ್ರಾಮಗಳಿಗೆ ಕಾವೇರಿ ನದಿ ಮೂಲದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಉದ್ಘಾಟನೆಯನ್ನು ಕಣಗಾಲು, ಚಿಕ್ಕಹೊಸೂರು ಮತ್ತು ಹತ್ತನೇ ಟಿಬೇಟ್ ಕ್ಯಾಂಪ್ ನಲ್ಲಿ ನೆರವೇರಿಸಿ ಅವರು ಮಾತನಾಡಿದರು, ಶಾಸಕರಾದವರಿಗೆ ಸರ್ಕಾರದ ಯೋಜನೆಗಳನ್ನು ತಮ್ಮ ಕ್ಷೇತ್ರಕ್ಕೆ ತರುವ ಅಭಿವೃದ್ಧಿಯ ಮನಸ್ಸಿದ್ದು ಪಾದರಸದಂತೆ ಓಡಾಡಿದರೆ ಮಾತ್ರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಸಾಧ್ಯ, ರಾಜ್ಯದಲ್ಲಿನ ತಂಬಾಕು ರೈತರ ಹಿತ ಕಾಪಾಡುವ ಉದ್ದೇಶದಿಂದ ಉಳಿಕೆ ತಂಬಾಕು ಖರೀದಿಸಲು ರಾಜ್ಯಕ್ಕೆ ಆಗಮಿಸುವ ಖರೀದಿದಾರರಿಗೆ ಸೋಂಕು ಇಲ್ಲದರ ಬಗ್ಗೆ ಖಚಿತಪಡಿಸಿದರೆ ಹೋಂ ಕ್ವಾರಂಟೈನ್ ಮಾಡದೇ ಖರೀದಿಗೆ ಅವಕಾಶ ನೀಡಿರುವುದರಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಪಾತ್ರ ದೊಡ್ಡದಿದೆ. ಕೋವಿಡ್-19 ಹೊರ ರಾಜ್ಯಗಳಿಂದ ಇಲ್ಲಿಗೆ ಬರುವುದನ್ನು ನಿಲ್ಲಿಸುವ ಯೋಜನೆ ಆಗಬೇಕಾಗಿದೆ,
ಅದರಲ್ಲಿಯೂ ಮುಂದಿನ ದಿನಗಳಲ್ಲಿ ದೇವಸ್ಥಾನ ಹೋಟೆಲ್ ಎಲ್ಲವೂ ತೆರೆಯುವ ಮುನ್ಸೂಚನೆ ನೀಡಿದ್ದು ಇನ್ನು ಹೆಚ್ಚು ಸೋಂಕಿತರು ಹೆಚ್ಚಾಗಬಹುದು ಎಂಬ ಆತಂಕ ಕೂಡ ಇದ್ದು ಮೇ.31ರ ನಂತರ ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯ ಸರ್ಕಾರ ಕೂಡ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ ಕೇಂದ್ರ ಸರ್ಕಾರ 40% ಹಾಗೂ ಹಿಂದೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಸರ್ಕಾರದ 60% ಅನುದಾನದೊಂದಿಗೆ ನಿರ್ಮಾಣವಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಯಾರೇ ಕೆಲಸ ಮಾಡಿರಲಿ ಅವರು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ ಅವರಿಗೆ ಶ್ರೇಯಸ್ಸು ಕೊಡಬೇಕಾಗುತ್ತದೆ ಎಂದರು.
ಶಾಸಕ ಕೆ.ಮಹದೇವ್ ಮಾತನಾಡಿ ಪಿರಿಯಾಪಟ್ಟಣ ತಾಲೂಕಿನಾದ್ಯಂತ ಕುಡಿಯುವ ನೀರಿನ ಅಭಾವ ಹೆಚ್ಚಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಸಚಿವರಾದ ಕೆ.ಎಸ್ ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿದ್ದು ಭರವಸೆ ಈಡೇರಿಸುವುದಾಗಿ ತಿಳಿಸಿದ್ದಾರೆ, ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ ಅಭಿವೃದ್ಧಿ ವಿಚಾರದಲ್ಲಿ ಉಸ್ತುವಾರಿ ಸಚಿವರ ಸಹಕಾರ ಶ್ಲಾಘನೀಯ ಎಂದರು.
ಇದೇ ವೇಳೆ ಕಣಗಾಲು ಗ್ರಾಮದಲ್ಲಿ 66/11ಕೆ.ವಿ ವಿದ್ಯುತ್ ಉಪಕೇಂದ್ರದ ಉದ್ಘಾಟನೆ ನಡೆಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಜಿ.ಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ,
ಜಿ.ಪಂ ಅಧ್ಯಕ್ಷೆ ಪರಿಮಳ ಶ್ಯಾಮ್, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಸದಸ್ಯರಾದ ರುದ್ರಮ್ಮ ನಾಗಯ್ಯ, ವಿ.ರಾಜೇಂದ್ರ, ಕೆ.ಎಸ್ ಮಂಜುನಾಥ್,
ತಾ.ಪಂ ಸದಸ್ಯರಾದ ಎಸ್.ರಾಮು, ಮೋಹನ್ ರಾಜ್, ಸುಮತಿ, ಸುಮಿತ್ರಾ, ಜಯಂತಿ ಸೋಮಶೇಖರ್, ಆರ್.ಎಸ್ ಮಹದೇವ್, ಮಲ್ಲಿಕಾರ್ಜುನ್, ಉಪ ವಿಭಾಗಾಧಿಕಾರಿ ವೀಣಾ , ತಹಶೀಲ್ದಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಇಒ ಡಿ.ಸಿ ಶ್ರುತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಎಂ.ಲಕ್ಷ್ಮೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಶಿವಕುಮಾರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಎಇಇ ಪ್ರಭು, ಪಿಡಬ್ಲುಡಿ ಎಇಇ ನಾಗರಾಜ್, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾಜರಿದ್ದರು.