
ತಾಲೂಕಿನ ದೊಡ್ಡಬೇಲಾಳು ಗ್ರಾಮದ ಪಿಎಸಿಸಿಎಸ್ ನ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಶಿವಣ್ಣ ಆಯ್ಕೆಯಾದರು.
ಈ ಹಿಂದಿನ ಅಧ್ಯಕ್ಷರ ಆಯ್ಕೆಯನ್ನು ಕೋರ್ಟ್ ವಜಾಗೊಳಿಸಿ ಅನರ್ಹ ಮಾಡಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಶಿವಣ್ಣ ಒಂದು ಮತಗಳ ರೋಚಕ ಗೆಲುವಿನೊಂದಿಗೆ ಅಧ್ಯಕ್ಷ ಪದವಿ ಅಲಂಕರಿಸಿದರು, ಶಿವಣ್ಣ 6 ಮತಗಳನ್ನು ಪಡೆದರೆ ಪ್ರತಿಸ್ಪರ್ದಿ ಕುಮಾರ್ 5 ಮತಗಳನ್ನು ಪಡೆದು ಪರಾಭವಗೊಂಡರು.
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಪಟ್ಟಣದ ಶಾಸಕ ಕೆ.ಮಹದೇವ್ ರವರ ಮನೆಗೆ ಭೇಟಿ ನೀಡಿ ಶಾಸಕರು ಹಾಗೂ ಅವರ ಪುತ್ರ ಮೈಮೂಲ್ ನಿರ್ದೇಶಕ ಪಿ.ಎಂ.ಪ್ರಸನ್ನ ಅವರನ್ನು ಸನ್ಮಾನಿಸಿದರು. ನಂತರ ಶಾಸಕ ಕೆ.ಮಹದೇವ್ ಮಾತನಾಡಿ ಅಧಿಕಾರಾವಧಿಯಲ್ಲಿ ರೈತರ ಪರ ಕೆಲಸ ನಿರ್ವಹಿಸಿ ಶೇರುದಾರರು ಹಾಗು ನಿರ್ದೇಶಕರುಗಳೊಂದಿಗೆ ಉತ್ತಮ ಬಾಂದವ್ಯದಿAದ ಕೆಲಸ ನಿರ್ವಹಿಸುವಂತೆ ತಿಳಿಸಿ ಶಿವಣ್ಣ ಅವರನ್ನು ಅಭಿನಂದಿಸಿದರು.
ನೂತನ ಅಧ್ಯಕ್ಷ ಶಿವಣ್ಣ ಮಾತನಾಡಿ ಸಂಘದ ನಿರ್ದೇಶಕರುಗಳು ನನ್ನ ಮೇಲೆ ಇಟ್ಟ ನಂಬಿಕೆಗೆ ಚುತಿ ಬರದಂತೆ ಕರ್ತವ್ಯ ನಿರ್ವಹಿಸಿ ಸಂಘದ ಅಭಿವೃದ್ದಿಗೆ ಶ್ರಮಿಸುವ ಭರವಸೆ ನೀಡಿದರು.
ಈ ಸಂದರ್ಭ ಗ್ರಾ.ಪಂ.ಸದಸ್ಯ ನದೀಮ್, ಪಿಎಸಿಸಿಎಸ್ ಉಪಾಧ್ಯಕ್ಷ ಆರ್.ಬಿ.ಮಹೇಂದ್ರ, ನಿರ್ದೆಶಕರಾದ ಕನಕಮ್ಮ, ರುಕ್ಮಣಮ್ಮ, ಅಪ್ಪಾಜಿಗೌಡ, ಮುಖಂಡರಾದ ಜವರೇಗೌಡ, ಸೈಯದ್ಇಲಿಯಾಸ್, ಬಸವರಾಜೇಅರಸ್, ಮುತ್ತುರಾಜ್, ಪುಟ್ಟಸ್ವಾಮೇಗೌಡ, ಕಿರಣ್, ಈರಣ್ಣ, ಅಪೂರ್ವಮೋಹನ್ ಹಾಜರಿದ್ದರು.