ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಕನ್ನಡ ಮಠದ ಅಕ್ಕಮಹಾದೇವಿ ಕ್ರೀಡಾಂಗಣದಲ್ಲಿ ನಡೆದ ತಾಲೂಕಿನ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಸಾಹಿತಿ ಸಿ.ಪಿ ಕೃಷ್ಣಕುಮಾರ್ ಉದ್ಘಾಟಿಸಿದರು , ಸಮ್ಮೇಳನ ಸರ್ವಾಧ್ಯಕ್ಷ ಶಿಕ್ಷಣ ತಜ್ಞ ಟಿ.ಸಿ ವಸಂತ ರಾಜೇಅರಸ್ ಶಾಸಕ ಕೆ.ಮಹದೇವ್ ಸೇರಿದಂತೆ ಗಣ್ಯರು ಹಾಜರಿದ್ದರು.

ಬೆಟ್ಟದಪುರ: ಐತಿಹಾಸಿಕ ಹಿನ್ನಲೆ ಹೊಂದಿರುವ ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮೀ ಬೆಟ್ಟ ಮತ್ತು ದೇವಾಲಯವನ್ನು ಅಭಿವೃದ್ಧಿಪಡಿಸಿ ಸುಂದರ ಪ್ರವಾಸಿ ತಾಣವಾಗಿ ಮಾಡುವಂತೆ ತೃತೀಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಧ್ಯಾಕ್ಷರಾದ ಪದವಿ ಪೂರ್ವ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಮತ್ತು ಶಿಕ್ಷಣ ತಜ್ಞರಾದ ಟಿ.ಸಿ ವಸಂತರಾಜೇಅರಸ್ ಒತ್ತಾಯಿಸಿದರು. 

   ಅರೆಮಲೆನಾಡು ಪ್ರದೇಶ ಖ್ಯಾತಿಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಕನ್ನಡ ಮಠದ ಅಕ್ಕಮಹಾದೇವಿ ಕ್ರೀಡಾಂಗಣದಲ್ಲಿ ನಿರ್ಮಿಸಿದ ಭವ್ಯ ವೇದಿಕೆ ಕಗ್ಗುಂಡಿ ಪರಂಜ್ಯೋತಿ ಘನಶರಣ ಹರಳಯ್ಯ ವೇದಿಕೆಯಲ್ಲಿ ನಡೆದ ಪಿರಿಯಾಪಟ್ಟಣ ತಾಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು, ಕಳೆದ ಹದಿನೈದು ವರ್ಷಗಳ ಹಿಂದೆಯೇ ಇಲ್ಲಿನ ಸಿಡಿಲು ಮಲ್ಲಿಕಾರ್ಜನಸ್ವಾಮೀ ಬೆಟ್ಟದಲ್ಲಿ ನೀರಿನ ಸರಬರಾಜಿಗೆ ಕೊಳವೆ ಮಾರ್ಗ ನಿರ್ಮಿಸಲಾಗಿತ್ತು, ಆದರೆ ರಾಜಕೀಯ ಕಾರಣದಿಂದ ಅದರ ಬಗ್ಗೆ ಯಾರು ಗಮನಹರಿಸಲಿಲ್ಲ, ಅಲ್ಲದೇ ದೀಪಾವಳಿ ಹಬ್ಬದ ಸಂದರ್ಭ ನಡೆಯುವ ಗಿರಿ ಪ್ರದಕ್ಷಣೆ ಕುಡಕೂರುನಿಂದ ಬಾರಸೆ ಮಾರ್ಗದ ಮುಖಾಂತರ ಬೆಟ್ಟದಪುರ ತಲುಪುವ ರಸ್ತೆಯು ತುಂಬ ಹದಗೆಟ್ಟಿದ್ದು ಇಂತಹ ಸಾಕಷ್ಟು ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು.

     ಬೆಟ್ಟದ ಮೇಲಿನ ಗಾಳಿ ಮಂಟಪದಲ್ಲಿ ಗಾಳಿ ಯಂತ್ರವನ್ನು ಅಳವಡಿಸಿ ಅದರ ಖರ್ಚುವೆಚ್ಚವನ್ನು ತಾವೇ ನೋಡಿಕೊಳ್ಳುವುದಾಗಿ ಬೆಟ್ಟದಪುರ ಮೂಲದ ಅಧಿಕಾರಿಯೊಬ್ಬರು ಮುಂದೆ ಬಂದಿದ್ದು ಇದರಿಂದ ವಿದ್ಯುತ್ ಉತ್ಪಾದಿಸಿ ಸುತ್ತಮುತ್ತಲ ಗ್ರಾಮಗಳಿಗೆ ವಿದ್ಯುತ್ ಸರಬಾರಜು ಮಾಡುವ ಅವಕಾಶ ಕೂಡ ದೊರೆಯುತ್ತದೆ ಇದಕ್ಕೆ ಸರ್ಕಾರ ಅನುಮತಿ ನೀಡಿದರೆ ಖಂಡಿತವಾಗಿಯು ಕೆಲಸವು ಪೂರ್ಣಗೊಳ್ಳುತ್ತದೆ ಎಂದು ಸಲಹೆ ನೀಡಿದರು.

    ಸಮ್ಮೇಳನದ ವೇದಿಕೆ ಕಾರ್ಯಕ್ರಮ

 ಉದ್ಘಾಟಿಸಿದ ಹಿರಿಯ ವಿದ್ವಾಂಸ ಡಾ ಸಿ.ಪಿ ಕೃಷ್ಣಕುಮಾರ್ ಮಾತನಾಡಿ ಸಚಿವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿಯಾದ ನನಗೆ ಸಚಿವ ಸ್ಥಾನ ಸಿಕ್ಕಿದ್ದು ಸಂತೋಷಕರ, ಆದರೆ ಇದು ಸಾಂಕೇತಿಕ ಮುಂದಿನ ದಿನಗಳಲ್ಲಿ ಅಂತಹ ಕಾಲ ಬರುವಂತಾಗಲಿ, ಕರ್ನಾಟಕದಲ್ಲಿ ಸಾಕಷ್ಟು ಮಠಗಳಿದ್ದು ಕನ್ನಡದ ಹೆಸರಿನಲ್ಲಿರುವ ಬೆಟ್ಟದಪುರದ ಕನ್ನಡ ಮಠ ಒಂದೇ ಎಂಬುದು ಶ್ಲಾಘನೀಯ, ಕಾರ್ಯಕ್ರಮದಲ್ಲಿ ಸಾಮಾಜಿಕ ಅನ್ಯಾಯಗಳ ಪಟ್ಟಿ ಮಾಡುತ್ತಾ ಹೋದರೆ ಅದು ರಾಜಕೀಯ ಬೆಳೆಸಿದಂತಾಗುತ್ತದೆ ಇಂತಹ ವಿಷಯಗಳನ್ನು ಸಾಹಿತ್ಯದಿಂದ ಮಾತ್ರ ಬಗೆಹರಿಸುವಂತಾಗಬೇಕು, ಇಂಗ್ಲಿಷ್ ಭಾಷೆ ಬೇಕು ಆದರೆ ಮಾಧ್ಯಮವಾಗುವುದು ಬೇಡ ಎಂದು ಆಗ್ರಹಿಸಿದರು.

    ಪುಸ್ತಕಗಳ ನಿರಂತರ ಅಧ್ಯಾಯನವು ಮಾನವನ ಮಾನಸಿಕ ಬೌದ್ದಿಕತೆಯನ್ನು ಹೆಚ್ಚುಸುವಂತ್ತದಾಗಿದ್ದು. ಈ ಕಾರಣಕ್ಕಾಗಿ ರಾಷ್ಟಕವಿ ಕುವೆಂಪು, ದೇಜಗೌ ಸೇರಿದಂತೆ ಇತರರು ತಮ್ಮ ಸಾಹಿತ್ಯದ ಮೂಲಕ ಕನ್ನಡದ ಜಾಗೃತಿಯ ಕೆಲಸವನ್ನು ಮಾಡಿದ್ದಾರೆ, ಕುವೆಂಪು ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪ ವೃಕ್ಷವಾಗುತ್ತದೆ ಎಂದರು, ಆದರೆ ಪ್ರಸ್ತುತ ಯಾರು ಕೂಡ ಈ ಸಂದೇಶವನ್ನು ಸಾರ್ಥಕಗೊಳಿಸುತ್ತಿಲ್ಲವೆಂಬುದು ವಿಷಾದದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಶಾಸಕ ಕೆ. ಮಹದೇವ್ ಮಾತನಾಡಿ ಗ್ರಾಮೀಣಾ ಭಾಗದ ಜನತೆ ಕನ್ನಡ ಹಬ್ಬಗಳನ್ನು ಆಚರಣೆ ಮಾಡುವುದರ ಮೂಲಕ ಕನ್ನಡದ ಜಾಗೃತಿಯನ್ನು ಮೂಡಿಸುತ್ತಿದ್ದಾರೆ ಇದರಿಂದಲೆ ಕನ್ನಡದ ಪ್ರಸ್ತುತತೆ ಸಾಕ್ಷಿಯಾಗಿದೆ, ಕನ್ನಡ ಭಾಷೆ ಕೇವಲ ಆಡಳಿತ ಅಥವಾ ಶಿಕ್ಷಣ ಭಾಷೆಯಲ್ಲಾ ಇದು ಪ್ರತಿಯೊಬ್ಬರ ಜೀವನ ಶೈಲಿಯಾಗಿದೆ, ಅಲ್ಲದೆ ಸಾಹಿತ್ಯ ಸಮ್ಮೇಳಗಳ ಮೂಲಕ ಕೈಗೊಳ್ಳುವ ನಿರ್ಣಯಗಳು ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿಯೂ ಕೂಡ ಆಗಿದೆ, ನಾನು ನನ್ನ ಅಧಿಕಾರವದಿಯಲ್ಲಿ ತಾಲೂಕಿನ ಅಭಿವೃದ್ದಿಗೆ ಶ್ರಮಿಸುತ್ತೇನೆ ಮತ್ತು  ಬೆಟ್ಟದಪುರ ಹೋಬಳಿಯ ಮೂಲಬೂತ ಸಮಸ್ಯಗಳನ್ನು ಬಗೆಹರಿಸಲು ಸಹಕರಿಸುತ್ತೇನೆ ಎಂದರು.

   ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಿ.ಆರ್ ಜಯರಾಮರಾಜೇ ಅರಸ್, ತಾಲೂಕು ಕಸಾಪ ಅಧ್ಯಕ್ಷ ಗೊರಳ್ಳಿ ಜಗದೀಶ್ ಮಾತನಾಡಿದರು.

   ತಾ.ಪಂ.ಅಧ್ಯಕ್ಷೆ ನಿರೂಪ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು, ಎಸ್ಎಸ್ಎಲ್ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ  ಹಾಗೂ ತಾಲೂಕಿಗೆ ಕೀರ್ತಿ ತಂದ ಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ಮತ್ತು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. 

ಸಮ್ಮೇಳನದಲ್ಲಿ ಹಿರಿಯ ಲೇಖಕರಾದ ಕುಡುಕುಾರು ಲಕ್ಷ್ಮೀಕಾಂತರಾಜೇ ಅರಸ್ ಅವರು ರಚಿಸಿರುವ ಮೈಸೂರು ಸಂಸ್ಥಾನದ 25ನೇ ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಪುಸ್ತಕವನ್ನು ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಗಣ್ಯರು ಬಿಡುಗಡೆಗೊಳಿಸಿದರು.

  ಪುಸ್ತಕದಲ್ಲಿ ಒಡೆಯರ್ ಅವರ ಬದುಕು ಸಾಧನೆ ಕುರಿತ ಸಮಗ್ರ ಚಿತ್ರಣ ಅವರು ತುಮಕೂರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದ ಚಿತ್ರಣ ಸೇರಿದಂತೆ ಒಡೆಯರ್ ಅವರ ನೆನಪುಗಳ ಸಂಪೂರ್ಣ ಮಾಹಿತಿ ಇದೆ.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆಯ ರಾಷ್ಟ್ರಕವಿ ಕುವೆಂಪು ಅವರ ಪುತ್ಥಳಿಯನ್ನು ತಾಲೂಕಿನ ಚಪ್ಪರದಹಳ್ಳಿ ಹಾಗೂ ಬೆಟ್ಟದಪುರದಲ್ಲಿ ಅನಾವರಣ ಮಾಡಿ ವಿಶ್ವಮಾನವ ಸಂದೇಶವನ್ನು ಸಾರುತ್ತಿರುವ ತಾಲೂಕು ಕಸಾಪ ಘಟಕ ರಾಜ್ಯಕ್ಕೆ ಮಾದರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

       ಕಸಾಪ ತಾಲೂಕು ಅಧ್ಯಕ್ಷ ಗೊರಳ್ಳಿ ಜಗದೀಶ್ ನೇತೃತ್ವದಲ್ಲಿ ಶಾಸಕ ಕೆ.ಮಹದೇವ್, ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರದೊಂದಿಗೆ ಕಸಾಪ ರಾಜ್ಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಳೆದ ವರ್ಷ ತಾಲೂಕಿನ ಚಪ್ಪರದಹಳ್ಳಿಯಲ್ಲಿ ಪ್ರಥಮವಾಗಿ ಕುವೆಂಪು ಪುತ್ಥಳಿಯನ್ನು ಶಾಸಕ ಕೆ.ಮಹದೇವ್ ಅನಾವರಣಗೊಳಿಸಿದ್ದರು, ವರ್ಷ ತುಂಬುವ ಒಳಗೆ ಮತ್ತೊಂದು ಕುವೆಂಪು ಪುತ್ಥಳಿಯನ್ನು ತಾಲೂಕಿನ ಬೆಟ್ಟದಪುರದಲ್ಲಿ ಈಚೆಗೆ ನಡೆದ ತಾಲೂಕು ಸಾಹಿತ್ಯ ಸಮ್ಮೇಳನ ಸಂದರ್ಭ ಶಾಸಕ ಕೆ.ಮಹದೇವ್ ಅನಾವರಣಗೊಳಿಸಿ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಪಸರಿಸುವ ಕೆಲಸವನ್ನು ತಾಲೂಕು ಕಸಾಪ ಘಟಕ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

  ದಾನಿಗಳ ಸಹಕಾರ: ಚಪ್ಪರದಹಳ್ಳಿ ಗ್ರಾಮದಲ್ಲಿ ಕಸಾಪ ಗ್ರಾಮ ಘಟಕ ಉದ್ಘಾಟನೆ ಸಂದರ್ಭ ಗ್ರಾಮಸ್ಥರು ಮತ್ತು ಪದಾಧಿಕಾರಿಗಳು ಕುವೆಂಪು ಪುತ್ಥಳಿಯನ್ನು ನಿರ್ಮಾಣ ಮಾಡುವ ಅಭಿಲಾಷೆ ವ್ಯಕ್ತಪಡಿಸಿದರು ಅದರಂತೆ ಗ್ರಾಮಸ್ಥರಿಗೆ ಕೊಟ್ಟ ಮಾತಿಗೆ ತಪ್ಪದೆ ಕಸಾಪ ತಾಲೂಕು ಅಧ್ಯಕ್ಷ ಗೊರಳ್ಳಿ ಜಗದೀಶ್ ದಾನಿಗಳ ಸಹಕಾರದಿಂದ ಪುತ್ಥಳಿ ಸ್ಥಾಪನೆ  ಕಾರ್ಯ ಪೂರ್ಣಗೊಳಿಸಿದ್ದಾರೆ, ತಾಲೂಕಿನ ಚಪ್ಪರದಹಳ್ಳಿ ಹಾಗೂ ಬೆಟ್ಟದಪುರ ಎರಡು ಕಡೆ ಕುವೆಂಪು ಪುತ್ಥಳಿ ಸ್ಥಾಪಿಸಲು ಹಾರಂಗಿ ಇಲಾಖೆಯಲ್ಲಿ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬೆಕ್ಕರೆ ಗ್ರಾಮದ ಬಿ.ಎಚ್ ರಮೇಶ್ ಹಾಗೂ ಕುಟುಂಬದವರು ಮುಂದೆ ಬಂದು ಧನಸಹಾಯ ನೀಡಿ ಉದಾರತೆ ಮೆರೆದಿರುವುದಕ್ಕೆ ಕಸಾಪ ಪದಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

     ಒಟ್ಟಾರೆ ರಾಜ್ಯದ ಕಸಾಪ ಇತಿಹಾಸದಲ್ಲೇ ತಾಲೂಕಿನಲ್ಲಿ ಎರಡು ಸ್ಥಳಗಳಲ್ಲಿ ಕುವೆಂಪು ಪ್ರತಿಮೆ ಅನಾವರಣಗೊಳಿಸುವ ಮೂಲಕ ಕಸಾಪ ತಾಲೂಕು ಘಟಕ ರಾಜ್ಯಕ್ಕೆ ಮಾದರಿಯಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

   ಈ ಸಂದರ್ಭದ ಸಾಹಿತಿ ರಾಜಶೇಕರ್ ಕದಂಬ, ಬೇ.ಗು ರಮೇಶ್,  ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ ರಾಜಣ್ಣ, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಡ್ಡಿಗೆರೆ ಗೋಪಲ್, ಚಂದ್ರಶೇಖರ್, ವಿದ್ವಾನ್ ಶ್ರೀಪತಿ ಜೋಯಿಸರು, ಜಿ.ಪಂ ಸದಸ್ಯ ಕೆ.ಎಸ್ ಮಂಜುನಾಥ್, ತಾ.ಪಂ ಸದಸ್ಯರಾದ ಸುಮಿತ್ರ ನಾಗರಾಜು, ಮಲ್ಲಿಕಾರ್ಜುನ್, ಟಿ. ಈರಯ್ಯ, ಪಂಕಜ, ಐಲಾಪುರ ರಾಮು, ಕುಂಜ್ಜಪ್ಪ ಕಾರ್ನಾಡ್, ಮೋಹನ್ ರಾಜ್, ಜಯಂತಿ, ಎ.ಟಿ. ರಂಗಸ್ವಾಮಿ, ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ, ಗ್ರಾ.ಪಂ ಅಧ್ಯಕ್ಷೆ ಯಶೋಧ, ಉಪಾಧ್ಯಕ್ಷೆ ಗೀತಾ ಕೃಷ್ಣಮೂರ್ತಿ, ಸದಸ್ಯರುಗಳಾದ ಸುರಗಳ್ಳಿ ವಿದ್ಯಾಶಂಕರ್, ರಾಜಶೇಖರ್, ಗಿರೀಶ್, ತಹಸೀಲ್ದಾರ್ ಶ್ವೇತಾ ಎನ್. ರವೀಂದ್ರ, ತಾ.ಪಂ ಇಒ ಶೃತಿ, ಬಿಇಒ ರಾಮಾರಾದ್ಯ, ವೃತ್ತ ನಿರೀಕ್ಷಕ ಪ್ರದೀಪ್, , ಎಸ್ಐ ಗಳಾದ ಲೋಕೇಶ್, ಸವಿ, ಗಣೇಶ್, ಲೋಕೋಪಯೋಗಿ ಇಲಾಖೆ ಎಇಇ  ಡಿ.ನಾಗರಾಜು, ನಿವೃತ್ತ ದೈ.ಶಿ. ಪರಿವೀಕ್ಷಕ ಎನ್.ಟಿ. ರವಿಕುಮಾರ್, ಮಹದೇವ್, ಆಲನಹಳ್ಳಿ ಕೆಂಪರಾಜು ಸೇರಿದಂತೆ ತಾಲೂಕಿನ ವಿವಿಧೆಡೆಯ ಸಾಹಿತ್ಯಾಸಕ್ತರು ಶಾಲಾ ವಿದ್ಯಾರ್ಥಿಗಳು ಸಾವಿರಾರು ಮಂದಿ  ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top