
ದೇವಾಲಯಗಳು ಧರ್ಮ ಮತ್ತು ಸಂಸ್ಕೃತಿಯ ಪ್ರತೀಕಗಳು ಎಂದು ಶಾಸಕ ಕೆ.ಮಹದೇವ್ ಹೇಳಿದರು.
ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ 2ದಿನಗಳ ಕಾಲ ನಡೆದ ಗ್ರಾಮದೇವತೆ ಶ್ರೀ ಮಹೇಶ್ವರಿ ಆದಿಶಕ್ತಿ ಮೂರೂರಮ್ಮ ದೇವತೆಯ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು,
ಗ್ರಾಮದ ಹಳೆ ದೇವಾಲಯಗಳ ಜೀರ್ಣೋದ್ಧಾರ ಮಾಡುವುದು ಸುಲಭದ ಮಾತಲ್ಲ, ಗ್ರಾಮದ ಕೆಲಸಗಳನ್ನು ನಿರ್ವಹಿಸುವಾಗ ಹಲವಾರು ಟೀಕೆಗಳು ಬಂದರು ನಾವು ತಲುಪುವ ಗುರಿಯತ್ತ ನಮ್ಮ ಮನಸ್ಸನ್ನು ಕೇಂದ್ರಿಕರಿಸಿ ಯಶಸ್ಸು ಸಾಧಿಸುವುದು ಸುಲಭದ ಮಾತಲ್ಲ, ದೇವಾಲಯಕ್ಕೆ ಭೇಟಿ ನೀಡುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ, ಗ್ರಾಮದ ಸರ್ವ ಜನರೂ ಒಗ್ಗಟ್ಟಾಗಿ ಅಭಿವೃದ್ದಿಯತ್ತ ಗಮನ ಹರಿಸುವಂತೆ ತಿಳಿಸಿದರು.
ಮಾಜಿ ಸಂಸದ ಸಿ.ಹೆಚ್.ವಿಜಯ್ ಶಂಕರ್ ಮಾತನಾಡಿ ಭಾರತ ದೇಶದ ಸಂಸೃತಿ ಮತ್ತು ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ, ಭಾರತೀಯರು ಪುರಾತನ ಕಾಲದಿಂದಲೂ ದೈವ ಶಕ್ತಿಯ ಮೇಲೆ ನಂಬಿಕೆ ಇಟ್ಟು ಪೂಜಿಸುತ್ತಾ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಭಗವಂತನ ಮೇಲೆ ನಂಬಿಕೆ ಇಟ್ಟಿದ್ದಾರೆ. ದೇವಾಲಯಗಳ ನಿರ್ಮಾಣದಿಂದ ಗ್ರಾಮದಲ್ಲಿ ಶಾಂತಿ ಸಹಬಾಳ್ವೆಯ ಜೀವನ ನಡೆಸಲು ಸಹಕಾರಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲ 5 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ದೇವಾಲಯ ನಿರ್ಮಾಣಕ್ಕೆ ಸಹಕರಿಸಿದ ಮುಖಂಡರು ಹಾಗು ಗ್ರಾಮಸ್ಥರನ್ನು ಸನ್ಮಾನಿಸಲಾಯಿತು