
ಗ್ರಾಮೀಣ ಪ್ರದೇಶದ ಜನರ ಬೇಡಿಕೆಗಳನ್ನು ಈಡೇರಿಸುವುದು ಸವಾಲಿನ ಕೆಲಸ ಇದನ್ನು ಹಂತ ಹಂತವಾಗಿ ನಿಭಾಯಿಸಲಾಗುವುದು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.
ತಾಲ್ಲೂಕಿನ ರೂ.3.75 ಕೋಟಿ ವೆಚ್ಚದಲ್ಲಿ ನಡೆಸುತ್ತಿರುವ ಹುಣಸೇಕುಪ್ಪೆ ಪಿರಿಯಾಪಟ್ಟಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ತಾಲ್ಲೂಕಿನಲ್ಲಿರುವ 250ಕ್ಕೂ ಹೆಚ್ಚು ಹಳ್ಳಿಗಳಿಗೆ ಏಕಕಾಲದಲ್ಲಿ ಜನರ ಬೇಡಿಕೆ ಪೂರೈಸಲು ಸಾಧ್ಯವಿಲ್ಲ ಹುಣಸೇಕುಪ್ಪೆ ಗ್ರಾಮಕ್ಕೆ ಈಗಾಗಲೆ 5 ಕೋಟಿ ಅನುದಾನ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನಿತರ ಗ್ರಾಮಗಳತ್ತ ಗಮನ ಹರಿಸಲು ಅವಕಾಶ ಮಾಡಿಕೊಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಕ್ಕೆ ಕುಡಿಯುವ ನೀರಿ ಟ್ಯಾಂಕ್, ಗ್ರಾಮದ ಬೀದಿಗಳಿಗೆ ಸಿಮೆಂಟ್ ರಸ್ತೆ, ಮತ್ತು ಈಗ ಅಭಿವೃದ್ಧಿ ಪಡಿಸುತ್ತಿರುವ ರಸ್ತೆಯನ್ನು ಗೋಣಿಕೊಪ್ಪ ರಾಜ್ಯ ಹೆದ್ದಾರಿಯವರೆಗೆ ಮುಂದುವರಿಸುವಂತೆ ಗ್ರಾಮಸ್ಥರು ಈ ಸಂದರ್ಭದಲ್ಲಿ ಶಾಸಕರಿಗೆ ಮನವಿ ಮಾಡಿದರು.
ಸಮಾರಂಭದಲ್ಲಿ ಮೈಮುಲ್ ನಿರ್ದೆಶಕ ಪಿ.ಎಂ.ಪ್ರಸನ್ನ, ಜಿ.ಪಂ.ಸದಸ್ಯ ಕೆ.ಸಿ.ಜಯಕುಮಾರ್, ತಹಶೀಲ್ದಾರ್ ತಾ.ಪಂ. ಇಓ ಡಿ.ಸಿ.ಶೃತಿ, ತಾ.ಪಂ.ಅಧ್ಯಕ್ಷೆ ಕೆ.ಆರ್.ನಿರೂಪಾ, ಸದಸ್ಯರಾದ ಶ್ರೀನಿವಾಸ್, ಟಿ.ಈರಯ್ಯ, ಗ್ರಾ.ಪಂ.ಅಧ್ಯಕ್ಷೆ ಮುನಿರಾಜಾನ್, ಪಿಡಿಓ ಡಾ.ಆಶಾರಾಣಿ, ಎಪಿಎಂಸಿ ಉಪಾಧ್ಯಕ್ಷ ಮೋಹನ್, ಪಿಎಸಿಸಿಎಸ್ ಅಧ್ಯಕ್ಷ ಮಂಜುನಾಥ್, ಗ್ರಾ.ಪಂ.ಸದಸ್ಯರಾದ ಮಧು, ಫಾತಿಮಾವುನ್ನೀಸಾ, ತಾ.ಪಂ. ಮಾಜಿ ಸದಸ್ಯ ಪ್ರಕಾಶ್ ಸೇರಿದಂತೆ ಹಲವರು ಹಾಜರಿದ್ದರು.