ಪಿರಿಯಾಪಟ್ಟಣ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಶಾಸಕ ಕೆ.ಮಹದೇವ್ ಮಾತನಾಡಿದರು.

ಡಿ.22 ರಂದು ತಾಲ್ಲೂಕಿನ ಬೆಟ್ಟದಪುರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಸಾಪ ಜಿಲಾಧ್ಯಕ್ಷ ವೈ.ಡಿ.ರಾಜಣ್ಣ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಮತ್ತು ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿಗೆ ತನ್ನದೇ ಆದ ಪರಂಪರೆ ಇತಿಹಾಸವಿದ್ದು ಇದು ಸಾಹಿತ್ಯ ಸಮ್ಮೇಳದ ಮೂಲಕ ಯುವ ಪೀಳಿಗೆಗೆ ಅರಿಯುವಂತೆ ಮಾಡುವ ಪ್ರಯತ್ನವಾಗಬೇಕು ಎಂದರು. ತಾಲ್ಲೂಕಿನಲ್ಲಿ ನಡೆದ ಜಿಲ್ಲಾ ಸಮ್ಮೇಳನ ಶಾಸಕ ಕೆ.ಮಹದೇವ್ ನೇತೃತ್ವದಲ್ಲಿ ತಾಲೂಕಿನಲ್ಲಿ ಯಶಸ್ವಿಯಾಗಿದ್ದು ಈ ಬಾರಿ ತಾಲೂಕು ಸಮ್ಮೇಳನವನ್ನು ಬೆಟ್ಟದಪುರ ಹೋಬಳಿ ಕೇಂದ್ರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಮ್ಮೇಳನ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ.ವಿವಿಧ ಸಮಿತಿಗಳನ್ನು ರಚಿಸಿ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಮಕ್ಕಳಲ್ಲಿ ಕನ್ನಡ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಗೊರಳ್ಳಿ ಜಗದೀಶ್ ಮಾತನಾಡಿ ತಾಲೂಕಿನಲ್ಲಿ ನಡೆಯುವ ಸಮ್ಮೇಳನದಲ್ಲಿ ತಾಲೂಕಿನವರಿಗೆ ಮೊದಲ ಆದ್ಯತೆ ನೀಡಲಾಗುವುದು. ಕಲೆ ಸಾಹಿತ್ಯದಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ ಸನ್ಮಾನಿಸಲಾಗುವುದು. ತಾಲೂಕು ಸಮ್ಮೇಳನ ಬೆಟ್ಟದಪುರದಲ್ಲಿ ಒಂದುದಿನಗಳ ಕಾಲ ನಡೆಯಲಿದೆ ಎಂದು ಜಿಲ್ಲಾ ಸಮ್ಮೇಳನದ ಯಶಸ್ವಿಗೆ ಸಹಕಾರ ನೀಡಿದ ರೀತಿಯಲ್ಲಿಯೆ ತಾಲೂಕು ಸಮ್ಮೇಳನಕ್ಕು ಅಧಿಕಾರಿಗಳೂ ಸಾಹಿತ್ಯಾಸಕ್ತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡುವ ಸಂಬAಧ ಸಾಹಿತಿ ಬೇಗೋ ರಮೇಶ್ ಮತ್ತು ಶಿಕ್ಷಣ ತಜ್ಞ ವಸಂತರಾಜೇಅರಸ್ ಹೆಸರು ಚರ್ಚೆಗೆ ಬಂದಿದ್ದು ಇಬ್ಬರಲ್ಲಿ ಒಬ್ಬರ ಹೆಸರನ್ನು ಮುಂದಿನ ಸಭೆಯಲ್ಲಿ ಅಂತಿಮಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಡಿಸಂಬರ್ 22 ರಂದು ಸಮ್ಮೇಳನ ನಡೆಯಲಿದ್ದು ಕಸಾಪ ತಾಲೂಕು ಸಮ್ಮೇಳನವನ್ನು ಬೆಟ್ಟದಪುರದ ಸಲಿಲಾಖ್ಯ ಮತ್ತು ಕನ್ನಡ ಮಠದ ಆವರಣದಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಚಿವರಾದ ಸಿ.ಟಿ.ರವಿ, ಸೋಮಣ್ಣ, ಮತ್ತು ದಿವಂಗತ ಪುಟ್ಟಣ್ಣಕಣಗಾಲ್ ಕುಟುಂಬ ವರ್ಗದವರಿಂದ ಸಮ್ಮೇಳನ ಉದ್ಘಾಟಿಸಲು ತಿರ್ಮಾನಿಸಲಾಯಿತು.
ಶಾಸಕ ಕೆ.ಮಹದೇವ್ ಮಾತನಾಡಿ ಸಮ್ಮೇಳನದ ಯಶಸ್ವಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಸಮ್ಮೇಳನಕ್ಕೆ ಎಲ್ಲಾ ರೀತಿಯ ನೆರವು ನೀಡಬೇಕು. ತಾಲೂಕಿನಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಆಗಮಿಸುವ ಕವಿ,ಸಾಹಿತಿಗಳಿಗೆ ಯಾವುದೆ ರೀತಿಯ ಕೊರತೆ ಉಂಟಾಗದ ಹಾಗೆ ಅಚ್ಚುಕಟ್ಟಾಗಿ ಸಮ್ಮೇಳನ ನಡೆಯಲು ಎಲ್ಲಾ ರೀತಿಯ ಕ್ರಮವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ವೇತ ಎನ್.ರವೀಂದ್ರ, ಗೌರವಾಧ್ಯಕ್ಷ ಅಣ್ಣಯ್ಯಶೆಟ್ಟಿ, ಎಇಇಗಳಾದ ನಾಗರಾಜು, ಪ್ರಭು, ವೃತ್ತ ನಿರೀಕ್ಷಕ ಪ್ರದೀಪ್, ಬೆಟ್ಟದಪುರ ಹೋಬಳಿ ಅಧ್ಯಕ್ಷ ಕೆಂಪರಾಜು, ಮುಖಂಡರಾದ ಸಿ.ಎಸ್.ಜಗದೀಶ್, ಪಿ.ಮಹದೇವ್, ಸೀಗೂರವಿಜಯಕುಮಾರ್, ವಿದ್ಯಾಶಂಕರ್, ಕಪಾಲಿನಾಗರಾಜು, ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್, ಮೈಮೂಲ್ ನಿರ್ದೇಶಕ ಪಿ.ಎಂ.ಪ್ರಸನ್ನ. ಕೋಶಾಧ್ಯಕ್ಷ ಬಿ.ಆರ್.ಸತೀಶ್ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top