
ಕೊರೋನ ಎಂಬ ಮಾರಕ ರೋಗವನ್ನು ತಡೆಗಟ್ಟಬೇಕಾದರೆ ಪ್ರತಿಯೊಬ್ಬರೂ ಸಹ ಮಾಸ್ಕ್ನ್ನು ಧರಿಸಬೇಕು ಮತ್ತು ಸ್ಯಾನಿಟೇಜರ್ನ್ನು ಬಳಸಿದರೆ ರೋಗವನ್ನು ದೂರವಿಡಬಹುದು ಎಂದು ಶಾಸಕ ಕೆ,ಮಹದೇವ್ ತಿಳಿಸಿದರು.
ಅವರು ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ಗ್ರಾ.ಪಂ.ಯಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಮತ್ತು ಸ್ಯಾನಿಟೇಜರ್ನ್ನು ಉಚಿತವಾಗಿ ನೀಡುವ ಮೂಲಕ ಮಾತನಾಡಿದರು.
ಕೋವಿಡ್-19 ಎಂಬ ಮಾರಕ ರೋಗವು ವಿಶ್ವವ್ಯಾಪ್ತಿ ಹರಡಿದ್ದು ಬಲಿಷ್ಠ ರಾಷ್ಟçಗಳೇ ಈ ರೋಗವನ್ನು ಹೋಗಲಾಡಿಸಲು ಸತತ ಪ್ರಯತ್ನಿಸಿದ್ದರೂ ಸಹ ಹೆಚ್ಚಿನ ಸಾವುಗಳು ಸಂಭವಿಸುತ್ತಿದ್ದು, ಈ ನಿಟ್ಟಿನಲ್ಲಿ ನಮ್ಮ ದೇಶ ಹಾಗೂ ರಾಜ್ಯದ ಜನತೆ ಮುಂಜಾಗ್ರುತ ಕ್ರಮವಾಗಿ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ರೋಗದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದರು.
ಗ್ರಾ.ಪಂ.ಯಲ್ಲಿ ವಿತರಣೆ:
ತಾಲ್ಲೂಕಿನ 34 ಪಂಚಾಯಿತಿಗಳ ವತಿಯಿಂದ ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೇಜರ್ ನೀಡುವಂತೆ ತಾ.ಆಡಳಿತ ಕ್ರಮ ವಹಿಸಿದೆ ಹಾಗೂ ವಾರದಲ್ಲಿ 3 ದಿನ ಮಾತ್ರ ದಿನಸಿ ಅಂಗಡಿಗಳು ಬೆಳಿಗ್ಗೆ ಯಿಂದ 12 ಗಂಟೆಗಳ ತನಕ ತೆರೆಯುವುದರಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಆಹಾರ ಧಾನ್ಯಗಳು ತೆಗೆದುಕೊಳ್ಳಬೇಕೆಂದರು. ಮೋದಿ ಕಾರ್ಯ ದೂರದೃಷ್ಠಿಯ ಶ್ಲಾಘನೀಯ :
ಕೋವಿಡ್19 ವಿಶ್ವವ್ಯಾಪ್ತಿ ಬಲಿಷ್ಠ ರಾಷ್ಟçಗಳನ್ನೇ ತಲ್ಲನಗೊಳಿಸಿದ್ದು ಆದರೆ ಭಾರತದ ಪ್ರಧಾನಿ ಮೋದಿಯವರ ದೂರದೃಷ್ಠಿ ಶ್ಲಾಘನೀಯವಾದುದು, ಇಡೀ ಭಾರತದ ಜನತೆ ಮೋದಿಯವರಿಗೆ ಗೌರವ ಸಮರ್ಪಣೆ ಸಲ್ಲಿಸಬೇಕೆಂದರು.
ಪಿಡಿಒ ಕೆಂಚೇಗೌಡ ಮಾತನಾಡಿ ಸಾರ್ವಜನಿಕರು ಅಂತರವನ್ನು ಕಾಯ್ದುಕೊಳ್ಳಲು ಹಾಗೂ ಬಿಪಿಎಲ್ ಕಾರ್ಡ್ ಇದ್ದು ರೇಷನ್ ಕೊಡದಿದ್ದ ಪಕ್ಷದಲ್ಲಿ ಪಂಚಾಯಿತಿಗೆ ದೂರನ್ನು ನೀಡಿದರೆ ತಕ್ಷಣೆ ರೇಷನ್ ಕೊಡಿಸುವ ಕೆಲಸವನ್ನು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ವೇತಾ, ಕಾರ್ಯ ನಿರ್ವಹಣಾಧಿಕಾರಿ ಶೃತಿ, ತಾ.ಪಂ.ಅಧ್ಯಕ್ಷೆ ನಿರುಪಮಾ, ಪಂಚಾಯಿತಿ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ರಾಜೇಗೌಡ, ವರ್ತಕರ ಸಂಘದ ಅಧ್ಯಕ್ಷ ಆರ್.ಎಲ್.ಮಣಿ, ಮುಖಂಡ ಆರ್.ವಿ.ನಂದೀಶ್, ಆರ್.ಟಿ.ಸತೀಶ್, ಉಪತಹಶೀಲ್ದಾರ್ ಕೆಂಚಪ್ಪ, ಪಂಚಾಯಿತಿ ಸಿಬ್ಬಂದಿಗಳು ಸೇರಿದಂತೆ ಹಲವು ಮಂದಿ ಹಾಜರಿದ್ದರು.