
ಗ್ರಾಮೀಣ ಪ್ರದೇಶದ ಜನರು ಕೇವಲ ಕೃಷಿ ಮಾತ್ರ ನಂಬಿಕೊಳ್ಳದೆ ತಮ್ಮ ಆರ್ಥಿಕಾಭಿವೃದ್ಧಿಗಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಶಾಸಕ ಕೆ.ಮಹದೇವ್ ಕರೆ ನೀಡಿದರು.
ತಾಲ್ಲೂಕಿನ ಬೆಳತೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಮತ್ತು ಮಾರಮ್ಮ ದೇವಾಲಯದ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಹೈನುಗಾರಿಕೆಯಿಂದ ಬರುವ ಆದಾಯದಲ್ಲಿ ರೈತ ಮಹಿಳೆಯರು ಹಣ ಕೂಡಿಟ್ಟು ಕಷ್ಟಕಾಲದಲ್ಲಿ ತಮ್ಮ ಕುಟುಂಬಕ್ಕೆ ನೆರವಾಗಲಿದ್ದಾರೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಸಮಾರಂಭ ನಡೆಸುವ ಮೂಲಕ ಗ್ರಾಮದ ಸಂಕಷ್ಟ ನಿವಾರಣೆಗೆ ಮತ್ತು ಗ್ರಾಮಸ್ಥರ ಒಳಿತಿಗೆ ಪ್ರಾರ್ಥಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಈ ಗ್ರಾಮದಲ್ಲಿ ವಿವಿಧ ಜಾತಿ ಜನಾಂಗದವರಿದ್ದರೂ ಶಾಂತಿ ಸಹಬಾಳ್ವೆಯಿಂದ ಒಗ್ಗಟ್ಟಿನಿಂದ ಜೀವನ ನಡೆಸುತ್ತಿರುವುದು ಇತರ ಗ್ರಾಮಗಳಿಗೆ ಮಾದರಿಯಾಗಿದೆ ಎಂದರು. ಗ್ರಾಮದಲ್ಲಿ ವಿವಿಧ ಬೀದಿಗಳಿಗೆ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ರೂ.78 ಲಕ್ಷ ಅನುದಾನ ನೀಡಿದ್ದು ಅದನ್ನು ಅಗತ್ಯವಿರುವ ಕಡೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮಾರಮ್ಮ ದೇವಾಲಯ ನಿರ್ಮಿಸಲು ಆರ್ಥಿಕ ನೆರವು ನೀಡಿದ ಗ್ರಾಮಸ್ಥರನ್ನು ಡೇರಿವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮೈಮುಲ್ ನಿರ್ದೇಶಕರಾದ ಪಿ.ಎಂ.ಪ್ರಸನ್ನ, ದಾಕ್ಷಾಯಿಣಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್.ರವಿ, ಜಿ.ಪಂ.ಸದಸ್ಯ ಕೆ.ಸಿ.ಜಯಕುಮಾರ್, ತಾ.ಪಂ.ಸದಸ್ಯ ಎ.ಟಿ.ರಂಗಸ್ವಾಮಿ, ಡೇರಿ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷೆ ಜ್ಯೋತಿ, ಗ್ರಾ.ಪಂ.ಅಧ್ಯಕ್ಷೆ ಮಮತ, ಪಿಡಿಓ ನರಸಿಂಹಮೂರ್ತಿ, ಗ್ರಾಮದ ಮುಖಂಡರಾದ ಹನುಮೇಗೌಡ, ತಿಮ್ಮೇಗೌಡ, ಡೇರಿ ನಿರ್ದೇಶಕರಾದ ಸಾವಿತ್ರಮ್ಮ, ಶೋಭಾ, ಪ್ರತಿಮಾ, ಜಯಲಕ್ಷ್ಮಿ, ಕುಸುಮಾ, ಗಾಯಿತ್ರಿ, ನಾಗರತ್ನಮ್ಮಣ್ಣಿ,ನಾಗಮ್ಮ, ಪವಿತ್ರಾ, ಅನುಸೂಯ, ಸಿಈಒ ಮೀನಾಕ್ಷಿ, ಸಿಬ್ಬಂದಿ ವಸಂತ ಹಾಜರಿದ್ದರು.