ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ನ್ಯೂ ಸ್ಟಾರ್ ಡ್ಯಾನ್ ಅಕಾಡೆಮಿ ಹಾಗೂ ಯಶಸ್ವಿ ಟ್ಯುಟೋರಿಯಲ್ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲೆ ಎಂಬುದು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ ಎಂಬ ಮಾತು ಇಂದು ಬದಲಾಗಿದೆ. ಪ್ರತಿಯೊಬ್ಬರಲ್ಲೂ ತನ್ನದೆಯಾದ ಪ್ರತಿಭೆ ಇರುತ್ತದೆ. ಅದನ್ನು ಹೊರತರಲು ಸೂಕ್ತ ವೇದಿಕೆಗಳು ಅಗತ್ಯವಿದ್ದು, ಇಂಥಹ ಕೆಲಸವನ್ನು ಪಟ್ಟಣದ ನ್ಯೂ ಸ್ಟಾರ್ ಡ್ಯಾನ್ ಅಕಾಡೆಮಿ ಸಂಸ್ಥೆಯವರು ಮಾಡಿರುವುದು ಹೆಮ್ಮೆಯ ಸಂಗತಿ ಇವರ ಜೊತೆ ಸಾರ್ವಜನಿಕರು ಹಾಗೂ ಪೋಷಕರು ಕೈಜೋಡಿಸಬೇಕು, ಭಾರತ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮನ್ನಣೆ ಗಳಿಸಿದ್ದೂ ಇಂದಿನ ಯುವ ಪೀಳಿಗೆ ನಮ್ಮ ಸಂಪ್ರದಾಯ, ಸಂಸ್ಕೃತಿ ಬೀರುವ ಭರತನ್ಯಾಟ, ಸುಗಮ ಸಂಗೀತ, ಗೀತಗಾಯನ ಜಾನಪದ ಬಗ್ಗೆ ಆಸಕ್ತಿ ಮೂಡಿಸಲು ಈ ಶಾಲೆ ಮುಂದಾಗಿ ಈ ಶಾಲೆ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಪ್ರದೀಪಕುಮಾರ್ ಮಾತನಾಡಿ ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಹೊರತರಲು ಸಂಘ ಸಂಸ್ಥೆಗಳು ಮತ್ತು ಪೋಷಕರು ಶ್ರಮವಹಿಸಬೇಕು. ಗುರಿ ಮತ್ತು ಗುರು ಸರಿಯಾಗಿದ್ದಾರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಮಕ್ಕಳಲ್ಲಿರುವ ತುಡಿತ- ಮಿಡಿತಗಳನ್ನು ಅರ್ಥವಿಸಿಕೊಂಡು, ಅದಕ್ಕೊಂದು ಸಾಂಸ್ಥಿಕ ನೆಲೆಗಟ್ಟು ಕಲ್ಪಿಸುವ ನಿಟ್ಟಿನಲ್ಲಿ ಪೋಷಕರು ಮತ್ತು ಸಂಘಸಂಸ್ಥೆಗಳು ಮುಂದಾಗಬೇಕು. ಕೆಲವೇ ಕೆಲವು ಸಮುದಾಯ ಹಾಗೂ ವ್ಯಕ್ತಿಗಳಿಗೆ ಮೀಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಇಂದು ಎಲ್ಲರ ಬದುಕಿನಲ್ಲೂ ಹಾಸುಹೊಕ್ಕಾಗಿವೆ. ಪೋಷಕರು ತಮ್ಮ ಮಕ್ಕಳನ್ನು ಕೇವಲ ಓದಿಗೆ ಸೀಮಿತ ಗೊಳಿಸದೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು, ಈ ನಿಟ್ಟಿನಲ್ಲಿ ಮೊತ್ತಮೊದಲ ಬಾರಿಗೆ, ಈ ವಿಷಯವಾಗಿ ಪಟ್ಟಣದಲ್ಲಿರುವ ಈ ಸಂಸ್ಥೆ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಯೋಗಿ, ತಾ.ಪಂ.ಸದಸ್ಯ ಎಸ್.ರಾಮು ಸಂಸ್ಥೆಯ ಗೌರವಾಧ್ಯಕ್ಷ ಸಿ.ಎನ್.ರವಿ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ನಿರಂಜನ್, ಕೆ.ಮಹೇಶ್, ಪಿ.ಸಿ.ಕೃಷ್ಣ, ನಿವೃತ್ತ ಶಿಕ್ಷಕ ಎಂ.ಪಿ.ನಾಗರಾಜು, ಬಿ.ಇ.ಆರ್.ಟಿ ಪುಟ್ಟರಾಜು, ಮುಖಂಡರಾದ ನಾಗೇಶ್, ದೇವರಾಜ್, ಮುನಿಯಪ್ಪ, ಸಂಸ್ಥೆಯ ಪದಾಧಿಕಾರಿಗಳಾದ ಕೆ.ಜೆ.ಮಲ್ಲಿಕಾರ್ಜುನ್, ಹೆಚ್.ಎಸ್.ಕುಮಾರ್, ಪಿ.ಎನ್.ಮಣಿಕುಮಾರ್, ಟಿ.ಕೆ.ಕಿರಣ್ ಕುಮಾರ್, ಮನೇಶ್, ಪವನ್ ಕುಮಾರ್ ಸೇರಿದಂತೆ ಮತ್ತಿತರು ಹಾಜರಿದ್ದರು.