
ತಾಲೂಕಿನ ಪುನಾಡಹಳ್ಳಿ ಗ್ರಾಮದಲ್ಲಿ ಪಟ್ಟಣದ ಬಿಜಿಎಸ್ ಪ್ರಥಮದರ್ಜೆ ಕಾಲೇಜಿನಿಂದ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಅವರು ಮಾತನಾಡಿದರು, ಎನ್ಎಸ್ಎಸ್ ಯಿಂದ ವಿದ್ಯಾರ್ಥಿಗಳಿಗೆ ಸೇವಾ ಮನೋಭಾವದ ಹೆಚ್ಚಿನ ಅರಿವು ಮೂಡಲಿದ್ದು ಸಂಘಟನೆ ಮತ್ತು ನಾಯಕತ್ವದ ಗುಣ ಸಹ ಬೆಳೆಯಲಿದೆ, ಅದನ್ನು ಉಳಿಸಿ ಬೆಳೆಸಲು ಬೇಕಾದ ಅಗತ್ಯ ಕ್ರಮಗಳನ್ನು ಸರ್ಕಾರಗಳು ಕೈಗೊಳ್ಳಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ ವಿಜಯ ಕುಮಾರ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯ ಜೊತೆಗೆ ಎನ್ಎಸ್ಎಸ್ ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ಜ್ಞಾನದ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು ಎಂದರು. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಆಶೀರ್ವಚನ ನೀಡಿದರು, ಪ್ರಾಂಶುಪಾಲ ಕೆ.ಆರ್ ಪ್ರವೀಣ್ ಪ್ರಾಸ್ತಾವಿಕ ಭಾಷಣ ಮಾಡಿ ಎನ್ಎಸ್ಎಸ್ ಮಹತ್ವದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ರಾಜೇಂದ್ರ, ಗ್ರಾ. ಪಂ ಅಧ್ಯಕ್ಷ ರವಿ, ಕರವೇ ಗೌರವಾಧ್ಯಕ್ಷ ಎನ್.ಎಲ್ ಗಿರೀಶ್, ಮುಖಂಡರಾದ ರಘುನಾಥ್, ಹೊನ್ನೇಗೌಡ, ರಾಮಮೂರ್ತಿ, ಅಶೋಕ, ಜಲೇಂದ್ರ, ಯೋಗಾನಂದ, ಸಂಸ್ಥೆಯ ಆಡಳಿತ ಮಂಡಳಿ ವ್ಯವಸ್ಥಾಪಕ ಸುಧಾಕರ್, ಉಪನ್ಯಾಸಕರಾದ ಕಿರಣ್, ಶ್ರೀನಿವಾಸ್, ಗೋವಿಂದೇಗೌಡ, ಮಹದೇವ್, ಪ್ರತಾಪ್, ಮನೋಜ್, ಶ್ವೇತಾ, ಅಶ್ವಿನಿ ಮತ್ತು ಶಿಬಿರಾರ್ಥಿಗಳು ಹಾಜರಿದ್ದರು.