ಪಟ್ಟಣದ ಹರವೆ ಮಲ್ಲರಾಜಪಟ್ಟಣ ಬಳಿಯ ತಾಲೂಕು ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಡಿಪಿಬಿಎಸ್ ಪದವಿಪೂರ್ವ ಕಾಲೇಜು ಪಿರಿಯಾಪಟ್ಟಣ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಕಣಗಾಲು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು, ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಬಹುದು, ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಲ್ಲರೂ ಗೆಲ್ಲಲೆಬೇಕೆಂಬ ಆಸೆ ಇದ್ದೆ ಇರುತ್ತದೆ, ಆದರೆ ಆಟೋಟಗಳಲ್ಲಿ ಚೆನ್ನಾಗಿ ಆಡಿದವರು ಮಾತ್ರ ಗೆಲ್ಲುತ್ತಾರೆ ಆದ್ದರಿಂದ ಸೋಲು ಗೆಲವುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆಯನ್ನು ಹೊಂದಿರಬೇಕು,ಇಂದಿನ ಸೋಲು ನಾಳಿನ ಗೆಲುವಿಗೆ ನಾಂದಿಯಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಮಾತನಾಡಿ ಕ್ರೀಡೆ ಯುವಜನರ ಚೇತನವಾಗಬೇಕು, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆಗಳು ಅತ್ಯಗತ್ಯ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಿ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸುತ್ತಿರುವುದು ಶ್ಲಾಘನೀಯ ಎಂದರು.
ಕ್ರೀಡಾಕೂಟದ ಉದ್ಘಾಟನೆ ದಿನ ನಡೆದ ಪಥಸಂಚಲನ ಕಾರ್ಯಕ್ರಮದಲ್ಲಿ ಪಟ್ಟಣದ ಆದಿಚುಂಚನಗಿರಿ ಸಂಸ್ಥೆ ಪ್ರಥಮ ಬಹುಮಾನ, ಬಸವೇಶ್ವರ ಸಂಸ್ಥೆ ದ್ವಿತೀಯ ಬಹುಮಾನ, ಭಾರತ್ ಮಾತಾ ಸಂಸ್ಥೆ ಕೊಪ್ಪ ತೃತೀಯ ಸ್ಥಾನ ಪಡೆದವು, ತಾಲೂಕಿನ ವಿವಿಧೆಡೆಯ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು, ಬಿಇಒ ಚಿಕ್ಕಸ್ವಾಮಿ ಕ್ರೀಡಾ ಜ್ಯೋತಿ ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಜಯಕುಮಾರ್, ರುದ್ರಮ್ಮನಾಗಯ್ಯ, ಪುರಸಭಾ ಸದಸ್ಯ ಪ್ರಕಾಶ್ ಸಿಂಗ್, ಕಣಗಾಲು ಗ್ರಾ.ಪಂ ಅಧ್ಯಕ್ಷ ಸುಂದರೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಯೋಗಿ, ಸಿಡಿಸಿ ಸದಸ್ಯರಾದ ಪಿ.ಬಿ ಸ್ವಾಮಿ, ಅಣ್ಣಯ್ಯ, ಪಿ.ಟಿ ಕುಮಾರಸ್ವಾಮಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಘುಪತಿ, ಪ್ರಾಂಶುಪಾಲರಾದ ವಿಜಯೇಂದ್ರ ಕುಮಾರ್, ಮಹದೇವ್, ವಿವಿದ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಜರಿದ್ದರು.