ಪಟ್ಟಣದ ಹೊರವಲಯದಲ್ಲಿರುವ ರಾಜಾಪುರ ಗ್ರಾಮದಲ್ಲಿ ಕೆ.ಎಂ. ಬಡಾವಣೆಯಲ್ಲಿರುವ ಸಂಘದ ನಿವೇಶನದಲ್ಲಿ ತಾಲ್ಲೂಕು ಒಕ್ಕಲಿಗರ ಹಿತರಕ್ಷಣಾ ಸಮಿತಿ ಶನಿವಾರ ನಡೆಸಿದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಈ ಬಡಾವಣೆಯಲ್ಲಿ ರಸ್ತೆ ಚರಂಡಿ ವಿದ್ಯುತ್ ಸೌಲಭ್ಯ ಇಲ್ಲ ಎಂದು ಸಂಘದವರು ನನ್ನ ಗಮನಕ್ಕೆ ತಂದಿದ್ದಾರೆ ಇಲ್ಲಿ ಯಾರೊಬ್ಬರು ಮನೆಯನ್ನು ಕಟ್ಟಿಲ್ಲ ನಮ್ಮ ಜನಾಂಗದವರು ಇಲ್ಲಿ ಮನೆಗಳನ್ನು ನಿರ್ಮಿಸಲಿ ಎಂದು ಹಿಂದೆ ಕೇವಲ ಇಪ್ಪತ್ತೆರಡು ಸಾವಿರ ರೂಗಳಿಗೆ ನಿವೇಶನ ನೀಡಲಾಗಿತ್ತು ಜನ ಮನೆಗಳನ್ನು ಕಟ್ಟಲು ಮುಂದೆ ಬಂದಲ್ಲಿ ಸೌಲಭ್ಯ ಕೊಡಿಸಲು ಸಾಧ್ಯವಾಗಲಿದೆ ಎಂದರು. ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲು ಸಹ ಇದೇ ರೀತಿ ಮನೆಗಳಿಲ್ಲ ಎಂಬ ಕಾರಣ ನೀಡಿದ್ದಾರೆ ಎಂದರು.
ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ ಸಂಘವು ರಚನಾತ್ಮಕವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಮುನ್ನಡೆಯುವ ಮೂಲಕ ಇನ್ನೂ ಹೆಚ್ಚಿನ ಸಂಘಟನೆ ತೊಡಗಿಸಿಕೊಳ್ಳಲಿ ಎಂದು ಆದಿಚುಂಚನಗಿರಿ ತಿಳಿಸಿದರು. ನಮ್ಮಲ್ಲಿನ ವೈಯಕ್ತಿಕ ಭಿನ್ನಾಭಿಪ್ರಾಯ ಮರೆತು ಸಂಘವನ್ನು ಬಲವರ್ಧನೆಗೊಳಿಸಿ ಮಾತ್ರ ಯಾವುದೇ ಜನಾಂಗದ ಉಳಿವು ಸಾಧ್ಯ ಎಂದು ಸಂಘದ ನಿವೇಶನದ ಪಕ್ಕದಲ್ಲಿರುವ ನಿವೇಶನವನ್ನು ದಾನವಾಗಿ ನೀಡಲು ಸಂಘದ ಅಧ್ಯಕ್ಷ ರಾಜೇಗೌಡ ಮುಂದೆ ಬಂದಿದ್ದು ಅದೇ ರೀತಿ ಇತರ ದಾನಿಗಳು ಮುಂದೆ ಬಂದರೆ ಸಂಘಕ್ಕೆ ವಿಶಾಲ ಕಟ್ಟಡ ನಿರ್ಮಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಜೇಗೌಡ ಮಾತನಾಡಿ ಸಂಘಕ್ಕೆ ಉಚಿತ ನಿವೇಶನ ನೀಡಲು ಸಿದ್ದನಿದ್ದೇನೆ ಹಾಗೆ ಸಂಘವನ್ನು ಬಲಪಡಿಸಲು ಸಂಸದ ಹಾಗೂ ಶಾಸಕ ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದರು.
ಸಮಾರಂಭದಲ್ಲಿ ನಿರ್ದೇಶಕರಾದ ಪಿ.ಸಿ.ಕೃಷ್ಣ, ದೇವರಾಜ್, ಮಂಜುನಾಥ್, ಮುತ್ತುರಾಜ್, ರಾಜೇಗೌಡ, ರಾಮೇಗೌಡ, ಅಣ್ಣೇಗೌಡ, ಸಣ್ಣಮೊಗೆಗೌಡ, ಸುರೇಶ್, ಮುಖಂಡ ರಘುನಾಥ್ ಮತ್ತಿತರರು ಹಾಜರಿದ್ದರು.