
ಪಟ್ಟಣದ ಶಾಸಕರ ನಿವಾಸದಲ್ಲಿ ಬೆಕ್ಕರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಅವರು ಮಾತನಾಡಿದರು, ಸಂಘಕ್ಕೆ ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಷೇರುದಾರರ ಹಿತ ಕಾಪಾಡಿ ಸರ್ಕಾರದಿಂದ ಸದಸ್ಯರುಗಳಿಗೆ ಸಿಗುವ ಸವಲತ್ತನ್ನು ಪ್ರಾಮಾಣಿಕವಾಗಿ ತಲುಪಿಸಿ ಉತ್ತಮ ಕಾರ್ಯ ನಿರ್ವಹಿಸಿ ಎಂದು ಶುಭ ಕೋರಿದರು, ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯಂತಹ ಉಪ ಕಸುಬನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಕರೆ ನೀಡಿದರು.
ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆ: ಬೆಕ್ಕರೆ ಹಾಲು ಉತ್ಪಾದಕರ ಸಹಕಾರ ಸಂಘ ನಿರ್ಮಾಣಗೊಂಡು 30 ವರ್ಷಗಳ ನಂತರ ಪ್ರಥಮ ಬಾರಿಗೆ ನಡೆದ ಚುನಾವಣೆಯಲ್ಲಿ 12ಮಂದಿ ನಿರ್ದೇಶಕರು ಆಯ್ಕೆಯಾಗಿದ್ದರು, ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಬಿ.ಎಸ್ ಸುರೇಶ್ ಹಾಗೂ ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಆಯ್ಕೆಯಾದರು, ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ.ಎಸ್ ಸುರೇಶ್ ಹಾಗೂ ರುಕ್ಮಾಂಗದಾಚಾರ್ ನಾಮಪತ್ರ ಸಲ್ಲಿಸಿದ್ದರು ಚುನಾವಣೆಯಲ್ಲಿ ಸುರೇಶ್ 10ಮತ ಪಡೆಯುವುದರ ವಿಜಯಿಯಾದರು, ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು, ಚುನಾವಣಾಧಿಕಾರಿಯಾಗಿ ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ಸುರೇಶ್ ಮತ್ತು ನಿವೃತ್ತ ಅಧಿಕಾರಿ ಪುಟ್ಟಸೊಮೇಗೌಡ ಕರ್ತವ್ಯ ನಿರ್ವಹಿಸಿದರು.
ಈ ಸಂದರ್ಭ ನಿರ್ದೇಶಕರುಗಳಾದ ಬಿ.ಬಿ ರವಿ, ಬಿ.ಪಿ ನಾಗೇಶ್, ಬಿ.ಎ ರಮೇಶ್ ಗೌಡ, ಬಿ.ವಿ ಬಸವರಾಜು, ಬಿ.ಆರ್ ಸೋಮೇಗೌಡ, ಸೋಮಣ್ಣ, ರುಕ್ಮಿಣಿ, ಪ್ರೇಮ, ಮೋಹನ್ ರಾಜೇಅರಸ್, ಕಾರ್ಯದರ್ಶಿ ಬಿ.ಬಿ ಸುರೇಶ್, ಸಿಬ್ಬಂದಿ ರವಿ, ಮಾಧವ್ ರಾಜೇಅರಸ್ ಮುಖಂಡರಾದ ಸುಂದ್ರೇಗೌಡ, ನಾಗಭೂಷಣಾರಾಧ್ಯ, ಸತೀಶ್, ಚಂದ್ರಶೇಖರ್, ನಟರಾಜ, ಜಗದೀಶ್, ಮಹದೇವ್, ನಾರಾಯಣಗೌಡ, ಮಧು, ಮಂಜು ಗ್ರಾಮಸ್ಥರು ಹಾಜರಿದ್ದರು.