ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದಲ್ಲಿ ಪಟ್ಟಣದ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು ವತಿಯಿಂದ ನಡೆದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು, ವಿದ್ಯಾರ್ಥಿಗಳಿಗೆ ಶಿಕ್ಷಣದ ಕಲಿಕೆಯ ಜೊತೆಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಹಾಗೂ ಸಮಾಜ ಸೇವಾ ಮನೋಭಾವನೆ ತಿಳಿಸಿಕೊಡುವಲ್ಲಿ ಎನ್ಎಸ್ಎಸ್ ಪಾತ್ರ ಮಹತ್ವದ್ದಾಗಿದೆ, ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬದುಕುವಂತೆ ತಿಳಿಸಿದರು.
ಬಿಇಒ ರಾಮಾರಾಧ್ಯ ಮಾತನಾಡಿ ಒಂದು ವಾರಗಳ ಕಾಲ ನಡೆದ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಹಲವು ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸಗಳ ಮೂಲಕ ಅರಿವು ಮೂಡಿಸಿ ಗ್ರಾಮಸ್ಥರಿಗೆ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸಿರುವುದು ಶ್ಲಾಘನೀಯ ಎಂದರು.
ಇಲಾಖೆಯ ಮೈಸೂರಿನ ಸಹಾಯಕ ಸಂಯೋಜನಾಧಿಕಾರಿ ರವಿ ಮಾತನಾಡಿ ಶಿಬಿರಾರ್ಥಿಗಳಿಗೆ ಸಮಯಪ್ರಜ್ಞೆ ಹಾಗೂ ಶಿಸ್ತು ಅಳವಡಿಸಿಕೊಳ್ಳಲು ಎನ್ಎಸ್ಎಸ್ ಶಿಬಿರಗಳು ಸಹಕಾರಿಯಾಗಿದ್ದು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯ ಅಗತ್ಯತೆ ಹೆಚ್ಚಬೇಕು ಎಂದರು.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಆಶೀರ್ವಚನ ನೀಡಿದರು, ಶಿಬಿರಾಧಿಕಾರಿ ಆನಂದ್ ಬಸಲಾಪುರ ವರದಿ ಮಂಡಿಸಿದರು, ಪ್ರಾಂಶುಪಾಲ ಗೋವಿಂದೇಗೌಡ, ಉಪನ್ಯಾಸಕ ಸ್ವಾಮಿಗೌಡ ಮಾತನಾಡಿದರು, ಶಿಬಿರಾರ್ಥಿಗಳು ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮಕ್ಕೂ ಮೊದಲು ಶ್ರೀ ಸೋಮೆಶ್ವರನಾಥ ಸ್ವಾಮೀಜಿಗಳನ್ನು ಗ್ರಾಮಸ್ಥರು ಹಾಗೂ ಸಂಸ್ಥೆಯ ವತಿಯಿಂದ ಪೂರ್ಣಕುಂಭ ಸ್ವಾಗತ, ವಿಶೇಷ ವಾದ್ಯಗಳು ಹಾಗೂ ಕಂಸಾಳೆ ನೃತ್ಯದ ಮೂಲಕ ಮೆರವಣಿಗೆಯಲ್ಲಿ ಕರೆತರಲಾಯಿತು, ಶಿಬಿರಾರ್ಥಿಗಳು ಹಾಗೂ ಗಣ್ಯರನ್ನು ಗ್ರಾಮಸ್ಥರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು, ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಸುಧಾಕರ್, ಗ್ರಾ.ಪಂ ಅಧ್ಯಕ್ಷ ರಾಜಶೇಖರ್, ಸದಸ್ಯರಾದ ಕಾಮರಾಜ್, ಮೀನಾಕ್ಷಮ್ಮ, ಕುಮಾರಿ ಮಹದೇವ್, ಯಜಮಾನ್ ಜೈಶಂಕರ್, ತಾ.ಪಂ ಮಾಜಿ ಉಪಾಧ್ಯಕ್ಷ ರಘುನಾಥ್, ಶಾಂತ, ಜಯಮ್ಮ ಶ್ರೀಪಾಲ, ಯಶೋದಮ್ಮ ಬಸವಣ್ಣ, ಕುಮಾರ್, ಸಣ್ಣಜವರ, ಮಾಧು, ಮಹದೇವ, ಜವರೇಗೌಡ, ವೀರಭದ್ರ, ಜಗಪಾಲ್, ಕರಿಯಪ್ಪ, ಸಂಸ್ಥೆಯ ಉಪನ್ಯಾಸಕರು, ಶಿಬಿರಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.