
ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಹಿಂದಿನ ಕಾಲದಲ್ಲಿ ಸಮಾಜದಲ್ಲಿ ಆಚರಣೆಯಲ್ಲಿದ್ದ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಮಾಚಿದೇವರು ಕಾಯಕದ ಮೂಲಕ ಅರಿವು ಮೂಡಿಸುತ್ತಿದ್ದರು, ಮಹನೀಯರ ಜಯಂತಿಗಳು ಕೇವಲ ಒಂದು ವರ್ಗಕ್ಕೆ ಸೀಮಿತವಾಗದೇ ಎಲ್ಲರೂ ಒಗ್ಗಟ್ಟಾಗಿ ಆಚರಿಸುವಂತಾಗಬೇಕು ಎಂದರು.
ಬಿಜೆಪಿ ರಾಜ್ಯ ಮುಖಂಡ ಕೌಟಿಲ್ಯ ರಘು ಮಾತನಾಡಿ ಮಡಿವಾಳ ಸಮಾಜದವರು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು ಶಿಕ್ಷಣದ ಮೂಲಕ ಸಮಾಜದ ಅಭಿವೃದ್ಧಿಯಾಗಬೇಕಿದೆ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಮಾಜದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿ ಸವಲತ್ತುಗಳನ್ನು ನೀಡುವ ಭರವಸೆ ನೀಡಿದ್ದು ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದರು.
ಸಾಹಿತಿ ಪಿ.ಕೆ ರಾಜಶೇಖರ್ ಮಾತನಾಡಿ 12ನೇ ಶತಮಾನದಲ್ಲಿ ಸಮಾಜದಲ್ಲಿ ಆಚರಣೆಯಲ್ಲಿದ್ದ ಸಾಮಾಜಿಕ ಪಿಡುಗುಗಳ ವಿರುದ್ಧ ತಮ್ಮ ಕಾಯಕದ ಮೂಲಕ ಹೋರಾಟ ನಡೆಸಿ ಸಂದೇಶ ನೀಡಿದ ಮಹಾನ್ ಕಾಯಕ ಯೋಗಿ ಮಡಿವಾಳ ಮಾಚಿದೇವರು, ಅವರ ತತ್ವ ಆದರ್ಶಗಳು ಇಂದಿನ ಯುವಪೀಳಿಗೆಗೆ ಮಾದರಿಯಾಗಬೇಕು, ಮಡಿವಾಳ ಎಂದರೆ ಕೇವಲ ಬಟ್ಟೆಗಳನ್ನು ಸ್ವಚ್ಛಗೊಳಿಸುವುದಲ್ಲದೆ ಮನಸ್ಸಿನಲ್ಲಿದ್ದ ಕಲ್ಮಶಗಳನ್ನು ದೂರ ಮಾಡಿದವರು ಎಂದರು.
ಈ ಸಂದರ್ಭ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಮುಖಂಡರನ್ನು ಸನ್ಮಾನಿಸಲಾಯಿತು, ಕಾರ್ಯಕ್ರಮ ಅಂಗವಾಗಿ ಪಟ್ಟಣದ ಬಿ.ಎಂ ರಸ್ತೆಯಲ್ಲಿ ಅಲಂಕೃತ ಬೆಳ್ಳಿ ರಥದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರವನ್ನು ಮಹಿಳೆಯರ ಪೂರ್ಣಕುಂಭ, ಜಾನಪದ ಕಲಾ ತಂಡ, ಕೋಲಾಟ ತಂಡಗಳ ನೃತ್ಯ ಪ್ರದರ್ಶನ, ವಿಶೇಷ ವಾದ್ಯಗಳ ಮೂಲಕ ಮೆರವಣಿಗೆ ನಡೆಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಸಿ ಬಸವರಾಜು, ಜಿ.ಪಂ ಸದಸ್ಯ ಕೆ.ಎಸ್ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ ವಿಜಯ್ ಕುಮಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಪಿ.ಪ್ರಶಾಂತ್ ಗೌಡ, ಉದ್ಯಮಿ ಗಗನ್, ಜಿಲ್ಲಾ ಮಡಿವಾಳ ಸಮಾಜದ ಹನೂರು ನಾಗರಾಜ್, ತಾಲೂಕು ಗೌರವಾಧ್ಯಕ್ಷ ಕೃಷ್ಣಶೆಟ್ಟಿ, ಅಧ್ಯಕ್ಷ ಮಾದೇಶ್, ಉಪಾಧ್ಯಕ್ಷರಾದ ರಾಮು, ಗೊರಳ್ಳಿ ವಸಂತ್, ಕಾರ್ಯದರ್ಶಿ ಬಿ.ಎಂ ಶಿವಸ್ವಾಮಿ, ಸತೀಶ್, ಖಜಾಂಚಿ ರಾಜಶೆಟ್ಟಿ, ಮಂಜೇಶ್, ರಾಮಚಂದ್ರಶೆಟ್ಟಿ, ಕೆ.ಆರ್ ನಗರ ತಾಲೂಕು ಅಧ್ಯಕ್ಷ ಕುಮಾರ್ ಸೇರಿದಂತೆ ತಾಲೂಕಿನ ವಿವಿಧೆಡೆಯ ಮಡಿವಾಳ ಸಮಾಜದವರು ಹಾಜರಿದ್ದರು.