ತಾಲೂಕಿನ ದೊಡ್ಡಹರವೆ ಬಳಿಯ ಟಿಬೆಟಿಯನ್ ಲಾಮ ಕ್ಯಾಂಪ್ ಸೆರ್ಪ ಮೊನಾಸ್ಟ್ರಿಕ್ ವಿಶ್ವವಿದ್ಯಾನಿಲಯ ವತಿಯಿಂದ ರಾಣಿಗೇಟ್ ಹಾಗೂ ಗೌಡನಕಟ್ಟೆಯ ಸುಮಾರು 250ಕ್ಕೂ ಅಧಿಕ ಗಿರಿಜನ ಕುಟುಂಬಗಳಿಗೆ ಶಾಸಕ ಕೆ.ಮಹದೇವ್ ರವರು ಆಹಾರ ಸಾಮಗ್ರಿಗಳ ಪರಿಹಾರದ ಕಿಟ್ ವಿತರಿಸಿದರು.

ಶಾಸಕ ಕೆ.ಮಹದೇವ್ ಮಾತನಾಡಿ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಕಾಡಂಚಿನ ನಿವಾಸಿಗಳು ಮತ್ತು ಗಿರಿಜನರು ಕೆಲಸವಿಲ್ಲದೆ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿಯೊಬ್ಬ ಬಿಪಿಎಲ್ ಪಡಿತರದಾರರಿಗೆ ಎರಡು ತಿಂಗಳಿಗಾಗುವಷ್ಟು ಅಕ್ಕಿ ಹಾಗೂ ಗೋಧಿ ಯನ್ನು ವಿತರಿಸಿದ್ದು ಇನ್ನುಳಿದ ತರಕಾರಿ ಹಾಗೂ ಪಡಿತರ ಸಾಮಗ್ರಿ ಗಳಿಗಾಗಿ ಜನರೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ, ನಿರಾಶ್ರಿತರಾಗಿ ದೇಶಕ್ಕೆ ಆಗಮಿಸಿರುವ ಟಿಬೆಟಿಯನ್ನರು ಇಂತಹ ಸಂಕಷ್ಟ ಕಾಲದಲ್ಲಿ ಸಾರ್ವಜನಿಕರಿಗೆ ಸಹಾಯ ನೀಡುತ್ತಿರುವುದು ಶ್ಲಾಘನೀಯ ಎಂದರು.

    ಈ ಸಂದರ್ಭ ವಿಶ್ವವಿದ್ಯಾನಿಲಯದ ಪ್ರಮುಖ ಜಂಪಲ್, ತಾ.ಪಂ ಸದಸ್ಯ ಜೆ.ಕೆ ಮುತ್ತ, ಮಾಜಿ ತಾ.ಪಂ ಸದಸ್ಯ ಸೋಮಶೇಖರ್, ಕೊಪ್ಪ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಶಫಿವುಲ್ಲಾ ಖಾನ್, ಮುಖಂಡರಾದ  ಶೋಭಾ ಶ್ರೀನಿವಾಸ್, ಪ್ರತಾಪ್, ಡಿ.ಕೆ ಗಿರೀಶ್,  ರಾಮಚಂದ್ರ,  ಬೈಲುಕೊಪ್ಪ ಸಬ್ ಇನ್ಸ್ ಪೆಕ್ಟರ್  ಸವಿ, ವಿವಿಧ ಇಲಾಖೆ ಅಧಿಕಾರಿಗಳು, ಹಾಜರಿದ್ದರು

Leave a Comment

Your email address will not be published. Required fields are marked *

error: Content is protected !!
Scroll to Top