ತಾಲ್ಲೂಕು ಆಡಳಿತ ಭವನದಲ್ಲಿರುವ ವಿವಿಧ ಕಚೇರಿಗಳಿಗೆ ಆಗಮಿಸಿದ ಅವರು ಈ ಸಂದರ್ಭದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಾರ್ವಜನಿಕರ ಯಾವುದೇ ಅರ್ಜಿಗಳನ್ನು ತಡೆಯಿಡಿಯದೆ ಅತೀ ಶೀಘ್ರದಲ್ಲಿ ವಿಲೆವಾರಿ ಮಾಡಿ ಕಚೇರಿಗೆ ಅಲೆಸುವುದನ್ನು ತಪ್ಪಿಸಲು ಕ್ರಮಕೈಗೊಳ್ಳಲು ಸೂಚಿಸಿದರು. ನೌಕರರು ನಿಗದಿತ ಸಮಯಕ್ಕೆ ಕಚೆÃರಿಗೆ ಆಗಮಿಸದೆ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಾದು ಬಹಳ ತೊಂದರೆ ಅನುಭವಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು ಮುಂದಿನ ದಿನಗಳಲ್ಲಿ ಇದು ಮರುಕಳಿಸಿದರೆ ಅಂತಹ ನೌಕರರ ವಿರುದ್ದ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಎಚ್ಚರಿಸಿದರು.
ಸಮಾಜ ಕಲ್ಯಾಣ ಇಲಾಖೆಗೆ ಬುಡಕಟ್ಟು ಸಮುದಾಯ,ದಲಿತ ಸಮುದಾಯ ಸೇರಿದಂತ್ತೆ ವಿದ್ಯಾರ್ಥಿಗಳ ವೇತನ ವಿಚಾರವಾಗಿ ವಿದ್ಯಾರ್ಥಿಗಳು ಹಾಗೂ ಬಹಳಷ್ಟು ವಿದ್ಯಾರ್ಥಿ ನಿಲಯಗಳ ಕಾರ್ಯಗಳಿಗೆ ಹೆಚ್ಚಿನ ಜನಸಂಖ್ಯೆ ಕಚÉÃರಿಗೆ ಆಗಮಿಸುತ್ತಿದು,ನಿಮ್ಮ ಕೇಂದ್ರ ಇಲಾಖೆಯಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಲಭ್ಯವಿದ್ದರೆ ಪ್ರಸ್ತಾವನೆ ಸಲ್ಲಿಸಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮೆಗೌಡರಿಗೆ ತಿಳಿಸಿದರು.
ಆಡಳಿತ ಭವನದಲ್ಲಿರುವ ಭೂ ಮಾಪನ ಇಲಾಖೆ, ಚುನಾವಣಾ ಶಾಖೆ,ಆಹಾರ ಇಲಾಖೆ,ಇಂಜಿನಿಯರ್ ಕಛೇರಿ,ಅಭಿಲೇಖಾಲಯ,ಉಪ ಖಜಾನೆ, ಅರ್.ಆರ್.ಟಿ ವಿಭಾಗ, ಉಪ ನೋಂದಾಣಾಧಿಕಾರಿಗಳ ಕಛೇರಿ,ಕಂದಾಯ ಇಲಾಖೆ ಸೇರಿದಂತ್ತೆ ಇತರೆ ಇಲಾಖೆಗಳ ಕಛೇರಿಗೆ ಭೆಟಿ ನೀಡಿದರು.
ಈ ಸಂದರ್ಭದಲ್ಲಿ ತಾ ಪಂ ಸದಸ್ಯ ಎ.ಟಿ.ರಂಗಸ್ವಾಮಿ,ಮಾಜಿ ಸದಸ್ಯ ಆವರ್ತಿ ಸೋಮಶೇಖರ್,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಯೋಗಿ ಸೇರಿದಂತೆ ಇತರರು ಹಾಜರಿದ್ದರು.