
ತಾಲೂಕಿನ ಭಾರತಿನಗರ ಹಾಗೂ ಗಾಂಧಿನಗರ ಗ್ರಾಮಗಳಲ್ಲಿ ಸೀತಾಕೊಲ್ಲಿ ಹಳ್ಳಕ್ಕೆ ಚೆಕ್ ಡ್ಯಾಂ ಕಾಮಗಾರಿಯ ರೂ.1.70 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ತಾಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನವನ್ನು ತರಲಾಗುತ್ತಿದ್ದು ಆ ಹಣವು ದುರುಪಯೋಗವಾಗದಂತೆ ತಡೆಯುವುದು ಅಧಿಕಾರಿಗಳ ಕರ್ತವ್ಯವಾಗಿದೆ, ಕಾಮಗಾರಿಗಳನ್ನು ಪಡೆಯುವ ಗುತ್ತಿಗೆದಾರರು ಪ್ರಾಮಾಣಿಕವಾಗಿ ಗುಣಮಟ್ಟದ ಕಾಮಗಾರಿಗಳನ್ನು ನಡೆಸುವಂತೆ ಸೂಚಿಸಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸಾರ್ವಜನಿಕರಿಂದ ಮನವಿಗಳು ಬರುತ್ತಿದ್ದು ಹಂತ ಹಂತವಾಗಿ ಆದ್ಯತೆಯ ಮೇರೆಗೆ ಎಲ್ಲ ಗ್ರಾಮಗಳಲ್ಲೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಜಿಪಂ ಸದಸ್ಯ ಪಿ.ರಾಜೇಂದ್ರ, ಮೈಮುಲ್ ನಿರ್ದೇಶಕ ಪಿ.ಎಂ. ಪ್ರಸನ್ನ, ತಾ.ಪಂ ಇಒ ಡಿ.ಸಿ ಶ್ರುತಿ, ಪಿಡಿಒ ಶಿವಯೋಗ, ಗ್ರಾ.ಪಂ ಸದಸ್ಯರುಗಳು, ಮುಖಂಡರಾದ ಅಶೋಕ್, ಜಲೇಂದ್ರ, ರಘುನಾಥ್, ಅಪೂರ್ವ ಮೋಹನ್, ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್, ಬೋರೇಗೌಡ, ಇಸಿಒ ಹರೀಶ್, ಘಟಕ ವ್ಯವಸ್ಥಾಪಕ ದರ್ಶನ್, ಜೆಸ್ಕಾಂ ಎಇಇ ಕಲೀಂ, ಎಸ್ಐ ಸಿಯು ಸವಿ, ಭೂಸೇನಾ ಇಲಾಖೆ ರಮೇಶ್, ರಘು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು ಹಾಜರಿದ್ದರು.