ಸಂತ್ರಸ್ತರಿಗೆ ಸರ್ಕಾರ ನೀಡುವ ಪರಿಹಾರ ದನಗಳನ್ನು ಅನ್ಯ ಬಳಕೆ ಮಾಡದೆ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಕೆ. ಮಹದೇವ್ ಹೇಳಿದರು.

   ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬಾಕಿ ಉಳಿದಿದ್ದ ಕಳೆದ ವರ್ಷದ ನೆರೆ ಸಂತ್ರಸ್ತರ ಪರಿಹಾರ ಹಾಗೂ ಮುಖ್ಯಮಂತ್ರಿಗಳ ನಿಧಿ ಪರಿಹಾರದ ಚೆಕ್  ವಿತರಿಸಿ ಅವರು ಮಾತನಾಡಿದರು, ಕೆಲ ಕಾರಣಗಳಿಂದ ಸಂತ್ರಸ್ತರ ದಾಖಲಾತಿ ಸಲ್ಲಿಕೆ ಹಾಗೂ ಪರಿಶೀಲನೆ ಸಂಬಂಧ ಕಳೆದ ವರ್ಷದ ನೆರೆ ಪರಿಹಾರದ ಹಣ ಸರ್ಕಾರದಿಂದ ಮಂಜೂರಾಗುವುದು ತಡವಾಯಿತು,    ಈ ಬಾರಿಯೂ ಸಹ ಆಗಸ್ಟ್ ಮೊದಲ ವಾರದಲ್ಲಿ ಕೊಡಗು ಜಿಲ್ಲೆಯಲ್ಲಿ ಬಿದ್ದ ಅಪಾರ ಪ್ರಮಾಣದ ಮಳೆಯಿಂದಾಗಿ ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿದಿದ್ದರಿಂದ ತಾಲೂಕಿನ ಕಾವೇರಿ ನದಿ ಪಾತ್ರದ 14 ಗ್ರಾಮಗಳಲ್ಲಿ ನೆರೆ ಹಾವಳಿಯಿಂದ ನಷ್ಟ ಉಂಟಾಗಿದೆ, ನೆರೆ ಸಂತ್ರಸ್ತ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಕುಂದುಕೊರತೆ ಆಲಿಸಿದ ಸಂದರ್ಭದಲ್ಲಿ ಕೆಲವರು ಕಳೆದ ಸಾಲಿನ ಪರಿಹಾರದ ಹಣವೇ ಈವರೆಗೂ ನಮ್ಮ ಕೈಸೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಕಳೆದ ಸಾಲಿನಲ್ಲಿ ಬಾಕಿ ಉಳಿದಿದ್ದ ಪರಿಹಾರದ ಹಣವನ್ನು ಈಗ ವಿತರಿಸಲಾಗುತ್ತಿದೆ, ಈ ಬಾರಿಯ ನೆರೆ ಹಾವಳಿ ಸಂದರ್ಭ ತಹಸೀಲಾರ್ ಶ್ವೇತಾ ಎನ್. ರವೀಂದ್ರ ನೇತೃತ್ವದಲ್ಲಿ ತಾಲೂಕಿನ ಅಧಿಕಾರಿಗಳು ಸಂತ್ರಸ್ತರ ನೆರವಿಗೆ ಅಗತ್ಯ ಕ್ರಮಗಳನ್ನು ಶೀಘ್ರವಾಗಿ ಕೈಗೊಂಡಿದ್ದು ಶ್ಲಾಘನೀಯ, ಈ ಬಾರಿಯ ಪರಿಹಾರ ಹಣ ಆದಷ್ಟು ಬೇಗ ವಿತರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು, ಸರ್ಕಾರ ನೆರೆ ಸಂತ್ರಸ್ತರಿಗೆ ನೀಡಲಾಗುವ ಪರಿಹಾರದ ಮೊತ್ತವನ್ನು ಈ ವರ್ಷ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ ವಿಷಯವಾಗಿದೆ ಎಂದರು.

    ಈ ವೇಳೆ 30 ಕ್ಕೂ ಹೆಚ್ಚು ಮಂದಿಗೆ ನೆರೆ ಸಂತ್ರಸ್ತರ ಪರಿಹಾರ ನಿಧಿ ಚೆಕ್ ಹಾಗೂ 3 ಮಂದಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವೈದ್ಯಕೀಯ ಚಿಕಿತ್ಸಾ ವೆಚ್ಚದ ಪರಿಹಾರ ಚೆಕ್ ವಿತರಿಸಲಾಯಿತು.

     ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ವೇತಾ ಎನ್. ರವೀಂದ್ರ, ಶಿರಸ್ತೇದಾರ್ ಪ್ರಕಾಶ್, ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top