
ತಾಲೂಕಿನ ವಿವಿಧೆಡೆ ರೂ.40ಲಕ್ಷ ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿ ಅಬ್ಬಳತಿ ಹಾಡಿಯಲ್ಲಿ ಅವರು ಮಾತನಾಡಿದರು, ಪಕ್ಷದ ಕಾರ್ಯಕರ್ತರುಗಳು ತಮ್ಮೂರಿನ ಜನರೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಾಗ ಅವುಗಳನ್ನು ಬಗೆಹರಿಸಲು ಪಕ್ಷಾತೀತವಾಗಿ ಸಂಬಂಧಿಸಿದ ಇಲಾಖೆಗಳ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು, ಅಧಿಕಾರಿಗಳಿಗೆ ಹಾಡಿ ನಿವಾಸಿಗಳು ಸಮಸ್ಯೆಗಳ ಬಗ್ಗೆ ದೂರಿದಾಗ ಅವುಗಳನ್ನು ನಿರ್ಲಕ್ಷಿಸದೆ ಕೂಡಲೇ ಪರಿಹಾರ ಕೈಗೊಳ್ಳುವಂತೆ ಆದೇಶಿಸಿದರು, ತಾಲೂಕಿನ ಹಾಡಿಗಳ ಸಮಸ್ಯೆ ಪರಿಹರಿಸುವ ಸಂಬಂಧ ಈಗಾಗಲೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಂಬಂಧಿಸಿದ ಇಲಾಖೆ ಹಾಗೂ ಸಚಿವರೊಂದಿಗೆ ಮಾತನಾಡಿದ್ದು ಮುಂದಿನ ದಿನಗಳಲ್ಲಿ ಭರವಸೆ ಈಡೇರಿಸುವುದಾಗಿ ತಿಳಿಸಿದರು.
ಈ ವೇಳೆ ಹಾಡಿ ನಿವಾಸಿಗಳು ಸಾರಿಗೆ, ಜಮೀನು ಪೋಡಿ, ಶುದ್ಧ ಕುಡಿಯುವ ನೀರು, ರಸ್ತೆ ಸೌಲಭ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶುವೈದ್ಯ ಕೇಂದ್ರ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಶಾಸಕರಿಗೆ ಮನವಿ ಪತ್ರ ನೀಡಿದರು, ಶಾಸಕರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಶೀಘ್ರ ಸಮಸ್ಯೆ ಬಗೆಹರಿಸಲು ಆದೇಶಿಸಿದರು.
ಈ ಸಂದರ್ಭ ತಾಲೂಕಿನ ಮಾಲಂಗಿ ಗೋಮಾಳ, ಹಳಲುಾರು ಗ್ರಾಮಗಳಲ್ಲಿಯೂ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಾ.ಪಂ ಇಒ ಡಿ.ಸಿ ಶ್ರುತಿ, ಅಧ್ಯಕ್ಷೆ ಕೆ.ಆರ್ ನಿರೂಪ, ಸದಸ್ಯರಾದ ಟಿ.ಈರಯ್ಯ, ಶ್ರೀನಿವಾಸ್, ಮಾಲಂಗಿ ಗ್ರಾ.ಪಂ ಅಧ್ಯಕ್ಷೆ ಮುನಿರಾ ಬಾನು ಹಾಗೂ ಸದಸ್ಯರುಗಳು, ಹಾಡಿ ಮುಖಂಡೆ ಹಾಗೂ ಗ್ರಾ.ಪಂ ಸದಸ್ಯೆ ಜಾನಕಮ್ಮ, ಪಿಡಿಒ ಡಾ.ಆಶಾ, ಲೋಕೋಪಯೋಗಿ ಎಇಇ ನಾಗರಾಜ್, ಬಿಇಒ ರಾಮಾರಾಧ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ, ಮುಖಂಡರಾದ ರಫೀಕ್, ಗಣೇಶ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.