ಸಹಕಾರ ಸಂಘಗಳಲ್ಲಿ ರಾಜಕೀಯ ಬೇಡ ಆರ್ಥಿಕವಾಗಿ ಹಿಂದುಳಿದ ಷೇರುದಾರರಿಗೆ ಆರ್ಥಿಕ ಸಹಾಯ ನೀಡುವ ಕೆಲಸಗಳಾಗಲಿ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಬಳಿ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಶಾಖೆ ಉದ್ಘಾಟಿಸಿ ಸಾಯಿ ಸಮುದಾಯ ಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಸಹಕಾರ ಸಂಘಕ್ಕೆ ಹೆಚ್ಚು ಸಂಖ್ಯೆಯಲ್ಲಿ ಸದಸ್ಯರಾಗುವ ಮುಖಾಂತರ ಸಂಘದಿಂದ ಷೇರುದಾರರಿಗೆ ಸಿಗುವ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು, ಷೇರುದಾರರು ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿ ಸಂಘಕ್ಕೆ ರಾಜಕೀಯ ಬಣ್ಣ ಕಟ್ಟದೆ ಪ್ರತಿಯೊಬ್ಬರು ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ಹೇಳಿ ಸಂಘದ ಅಭಿವೃದ್ಧಿಗೆ ಅಗತ್ಯವಿರುವ ಸಹಕಾರ ನೀಡುವ ಭರವಸೆ ನೀಡಿದರು.

    ಸಂಘದ ರಾಜ್ಯಾಧ್ಯಕ್ಷ ತುಂಬಲ ರಾಮಣ್ಣ ಮಾತನಾಡಿ ವಿದ್ಯಾವಂತ ಯುವಕ ಯುವತಿಯರಿಗೆ ಸರ್ಕಾರದ ಸೌಲಭ್ಯವನ್ನು ಕೊಡಿಸುವ ನಿಟ್ಟಿನಲ್ಲಿ ತರಬೇತಿ ನೀಡಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸಾಲ ಪಡೆಯಲು ಹೋದರೆ ಇಲ್ಲಸಲ್ಲದ ಕಾರಣಗಳನ್ನು ನೀಡಿ ಸತಾಯಿಸಿ ವಿಳಂಬ ಮಾಡುತ್ತಿದ್ದರು, ಈ ನಿಟ್ಟಿನಲ್ಲಿ ಸಂಸ್ಥೆಯನ್ನು 2011 ರಲ್ಲಿ ಮೊದಲು 

ಟಿ.ನರಸೀಪುರ ಹಾಗೂ ಮೈಸೂರು ತಾಲೂಕುಗಳಲ್ಲಿ ಆರಂಭಿಸಿ ಆರ್ಥಿಕ ನೆರವು ನೀಡಲಾಗುತ್ತಿದೆ, ಸಂಸ್ಥೆ ಆರಂಭವಾದಾಗಿನಿಂದಲೂ ಲಾಭಾಂಶದಲ್ಲಿ ನಡೆಯುತ್ತಿದ್ದು ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ 20 ತಾಲ್ಲೂಕುಗಳಲ್ಲಿ ಶಾಖೆ ಆರಂಭಿಸುವ ಗುರಿ ಹೊಂದಿದ್ದು ಪಿರಿಯಾಪಟ್ಟಣ 14ನೇ ಶಾಖೆ ಆಗಿದ್ದು ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಷೇರುದಾರರಗುವ ಮುಖಾಂತರ ಸದ್ಬಳಕೆ ಮಾಡಿಕೊಳ್ಳುವಂತೆ ಹೇಳಿದರು.

  ಮೈಸೂರಿನ ಬಹುಜನ ಪೀಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಗಳು ಮಾತನಾಡಿ ಶೋಷಿತರು ಸ್ವಾರ್ಥದ ಕತ್ತಿಗಳಾಗುವ ಬದಲು ಸ್ವಾಭಿಮಾನದ ಸೂಜಿಗಳಾ ಗಬೇಕು, ಅಂಬೇಡ್ಕರ್ ಅವರನ್ನು ಜಾತಿಗೆ ಸೀಮಿತಗೊಳಿಸದೇ ಅವರ ಜಯಂತಿ ಆಚರಣೆಗಿಂತ ಅವರ ತತ್ವಗಳನ್ನು ಅನುಸರಿಸುವುದು ಮುಖ್ಯವಾಗಿದೆ, ಭಾರತ ದೇಶದಲ್ಲಿ ಗುಡಿ ಗೋಪುರಗಳ ನಿರ್ಮಾಣದ ಬದಲು ಅಶಕ್ತರ ನೋವಿಗೆ ಸ್ಪಂದಿಸುವುದು ಮುಖ್ಯವಾಗಿದೆ, ಸಹಕಾರ ಸಂಘಗಳಲ್ಲಿ ಸದಸ್ಯರಾದರೆ ಕಳೆದುಕೊಳ್ಳುವುದು ಏನೂ ಇಲ್ಲ ಹೆಚ್ಚಿನದಾಗಿ ಗಳಿಸಿಕೊಳ್ಳಬಹುದಾಗಿದೆ ಎಂದರು.

   ಸಂಸದರ ವಿರುದ್ಧ ಆಕ್ರೋಶ: ತಾ.ಪಂ ಸದಸ್ಯ ಎಸ್.ರಾಮು ಮಾತನಾಡಿ ಸಂಸದ ಪ್ರತಾಪ್ ಸಿಂಹ ಅವರು ದಲಿತರ ವಿಚಾರಗಳಲ್ಲಿ ವಿನಾಕಾರಣ ಮಧ್ಯ ಪ್ರವೇಶಿಸಿ ತೊಂದರೆ ನೀಡುತ್ತಿರುವುದು ಸರಿಯಲ್ಲ,  ತಾಲೂಕಿನಾದ್ಯಂತ ಸಮಾಜದವರನ್ನು ಸಂಘಟನೆ ಮಾಡಿ ಷೇರು ಸಂಗ್ರಹಿಸಿ ಸಂಘ ಸ್ಥಾಪಿಸುವುದು ಸುಲಭದ ವಿಚಾರವಲ್ಲ ಹಾಗಿದ್ದರೂ ಎಲ್ಲರೊಟ್ಟಿಗೆ ಕಷ್ಟಪಟ್ಟು ಸಂಘ ಸ್ಥಾಪನೆಗೆ ತಾ.ಪಂ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟನೆಗೆ ಸ್ಥಳ ನಿಗದಿ ಮಾಡಿದಾಗ ಕೊನೆ ಕ್ಷಣದಲ್ಲಿ ಯಾರೊ ದೂರು ನೀಡಿದ್ದಾರೆ ಎಂದು ಸಭಾಂಗಣ ನೀಡಿಲ್ಲ ಆದರೂ ಸಹ ನಾವು ಕಾರ್ಯಕ್ರಮ ಮಾಡುತ್ತಿದ್ದೇವೆ ಬಿಟ್ಟಿಲ್ಲ ಇದರಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಕೈವಾಡವಿದ್ದು ಸಮಾಜದವರು ಇದನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

   ಕಾರ್ಯಕ್ರಮದಲ್ಲಿ ಹಲವರು ಸಂಘಕ್ಕೆ ಠೇವಣಿ ಹಣ ಪಾವತಿಸಿದರು ಮತ್ತು ಸಂಘದ ಕೆಲ ಷೇರುದಾರರಿಗೆ ಸಾಲ ವಿತರಿಸಲಾಯಿತು, ಟಿಎಪಿಟಿಎಂಎಸ್ ಮಾಜಿ ಕಾರ್ಯದರ್ಶಿ ಸಿ.ತಮ್ಮಣ್ಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಈ ಸಂದರ್ಭ ಜಿ.ಪಂ ಸದಸ್ಯ ಜಯಕುಮಾರ್, ತಾ.ಪಂ ಸದಸ್ಯರಾದ ಜಯಂತಿ ಸೋಮಶೇಖರ್, ಆರ್.ಎಸ್ ಮಹದೇವ್, ಎಪಿಎಂಸಿ ಅಧ್ಯಕ್ಷ ರಾಜಯ್ಯ, ಪುರಸಭೆ ಸದಸ್ಯ ಶ್ಯಾಮ್, ಮಾಜಿ ಅಧ್ಯಕ್ಷೆ ರತ್ನ ಬಿ. ಶಿವಣ್ಣ, ಆದಿ ಜಾಂಬವ ಸಂಘ ಅಧ್ಯಕ್ಷ ಸಿಗೂರು ವಿಜಯಕುಮಾರ್, ದಸಂಸ ಮುಖಂಡರಾದ ಚಾಮರಾಯನಕೋಟೆ ಜಗದೀಶ್, ಜೋಗನಹಳ್ಳಿ ದೇವರಾಜ್, ಹೇಮಂತ್ ಕುಮಾರ್, ಹಿಟ್ನಹಳ್ಳಿ ದೇವರಾಜ್, ಶೇಖರ್, ರಾಜಣ್ಣ, ಮಹದೇವ್, ವಸಂತ್, ಕುಮಾರಸ್ವಾಮಿ ಸೇರಿದಂತೆ ಸಂಘದ ಸದಸ್ಯರುಗಳು ಹಾಜರಿದ್ದರು. 

Leave a Comment

Your email address will not be published. Required fields are marked *

error: Content is protected !!
Scroll to Top