ಹಿಂದಿನ ಸರ್ಕಾರ ನೀಡಿದ್ದ ಅನುದಾನಗಳನ್ನು ಹಿಂಪಡೆದಿರುವ ವಿರುದ್ಧ ಮುಂಬರುವ ಅಧಿವೇಶನದಲ್ಲಿ ಎಲ್ಲರೂ ಒಗ್ಗೂಡಿ ಹೋರಾಟ ನಡೆಸುವುದಾಗಿ ಶಾಸಕ ಕೆ.ಮಹದೇವ್ ಎಚ್ಚರಿಕೆ ನೀಡಿದರು.

ಪಿರಿಯಾಪಟ್ಟಣ ತಾಲೂಕಿನ ವಿವಿಧೆಡೆ ರೂ.1.13ಕೋಟಿ ವೆಚ್ಚದ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಭೂತನಹಳ್ಳಿ ಗ್ರಾಮದಲ್ಲಿ ಅವರು ಮಾತನಾಡಿದರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗಾಗಿ ರಾಜ್ಯದಾದ್ಯಂತ ಎಲ್ಲ ಕ್ಷೇತ್ರಗಳಿಗೆ ಕಾಂಗ್ರೆಸ್, ಜೆಡಿಎಸ್ ಬಿಜೆಪಿ ಶಾಸಕರು ಎಂಬ ಪಕ್ಷ ಭೇದ ಭಾವ ಮರೆತು ಹೆಚ್ಚು ಅನುದಾನ ನೀಡಿದ್ದರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಹಿಂದಿನ ಅನುದಾನಗಳನ್ನು ತಡೆಹಿಡಿದಿರುವುದರಿಂದ ನಮಗೂ ಸಹ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ನಿರಾಸಕ್ತಿ ಮೂಡಲಾರಂಭಿಸಿದೆ, ಬಿಜೆಪಿ ಸರ್ಕಾರ ರಾಜ್ಯದಾದ್ಯಂತ ತಡೆ ಹಿಡಿದಿರುವ ಅನುದಾನಗಳನ್ನು ಮುಂದಿನ ಅಧಿವೇಶನದೊಳಗೆ ಬಿಡುಗಡೆಗೊಳಿಸಬೇಕು ಇಲ್ಲವಾದರೆ ಎಲ್ಲರೂ ಒಗ್ಗಟ್ಟಾಗಿ ಹೋರಾಡುವ ಎಚ್ಚರಿಕೆ ನೀಡಿದರು, ಬಡ ಜನರ ಹಿತಾಸಕ್ತಿ ಕಾಯುವ ನೆಪದಲ್ಲಿ ಅಧಿಕಾರಕ್ಕೆ ಬಂದು ಅವರನ್ನು ನಿರ್ಲಕ್ಷಿಸಿ ಅಧಿಕಾರ ನಡೆಸುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದರು. 

    ಅಭಿವೃದ್ಧಿ ಕಾಮಗಾರಿಗಳಿಗೆಂದು ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಗ್ರಾಮಸ್ಥರು ನಮ್ಮೂರಿಗೆ ಹೆಚ್ಚು ಅನುದಾನ ನೀಡಿಲ್ಲ ಎಂದು ಪ್ರಶ್ನಿಸುತ್ತಾರೆ, ಸರ್ಕಾರದಿಂದ ಹೆಚ್ಚು ಅನುದಾನ ತಂದು ತಾಲೂಕನ್ನು ಅಭಿವೃದ್ಧಿ ಪಡಿಸುವುದೇ ಗುರಿ ಎಂದರು.

   ಈ ವೇಳೆ ಮಲ್ಲಿನಾಥಪುರ, ಭೂತನಹಳ್ಳಿ, ಐಲಾಪುರ ಹಾಗೂ ಕೊಗಲವಾಡಿ ಗ್ರಾಮಗಳ ಪರಿಶಿಷ್ಟ ಜಾತಿ ಕಾಲೊನಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

    ಈ ಸಂದರ್ಭ ತಾ.ಪಂ ಸದಸ್ಯರಾದ ಎಸ್.ರಾಮು, ಎ.ಟಿ ರಂಗಸ್ವಾಮಿ, ಮಾಜಿ ಸದಸ್ಯ ರಘುನಾಥ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಗ್ರಾ.ಪಂ ಸದಸ್ಯರಾದ ಲೋಕೇಶ್, ಭೂತನಹಳ್ಳಿ ರವಿ, ರಾಜೇಗೌಡ, ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್, ಬೋರೇಗೌಡ, ಬಿಸಿಎಂ ಅಧಿಕಾರಿ ಮೋಹನ್, ಮುಖಂಡರಾದ ಸುರೇಶ್, ಯ.ರಾಜೇಗೌಡ, ಸಿದ್ದೇಗೌಡ, ವಿಶ್ವನಾಥ್, ಸ್ವಾಮಿ,

ಯ.ರಮೇಶ್, ಕೃಷ್ಣೇಗೌಡ, ರಾಜೇಂದ್ರ, ಗಣೇಶ್,  ಮುತ್ತೆಗೌಡ, ಶಶಿ, ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top