ಈ ವೇಳೆ ಶಾಸಕರು ಮಾತನಾಡಿ ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸದೆ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯರು ಶ್ರಮಿಸುವಂತೆ ಕರೆ ನೀಡಿ ರೈತರು ಕೃಷಿಯ ಜತೆಗೆ ಹೈನುಗಾರಿಕೆಯನ್ನು ಉಪಕಸುಬಾಗಿ ಅವಲಂಬಿಸಿ ಆರ್ಥಿಕವಾಗಿ ಪ್ರಗತಿ ಹೊಂದುವಂತೆ ತಿಳಿಸಿದರು. ನನ್ನ ಮಗ ಪಿ.ಎಂ ಪ್ರಸನ್ನ ಮೈಮುಲ್ ನಿರ್ದೇಶಕನಾಗಿ ಆಯ್ಕೆಯಾದ ನಂತರ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಮುಂದಿನ ದಿನಗಳಲ್ಲಿಯೂ ತಮ್ಮೆಲ್ಲರ ಬೆಂಬಲವಿರಲಿ ಎಂದರು.
ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಎನ್.ಕುಮಾರ್ ಮಾತನಾಡಿ ಮೈಸೂರು ಜಿಲ್ಲೆಯಲ್ಲಿ ಪಿರಿಯಾಪಟ್ಟಣ ತಾಲೂಕು ಉತ್ತಮ ಗುಣಮಟ್ಟದ ಹಾಲು ಸರಬರಾಜಿಗೆ ಹೆಸರುವಾಸಿಯಾಗಿದ್ದು ಗುಣಮಟ್ಟದ ಹಾಲು ಪೂರೈಕೆಯಿಂದ ಹೆಚ್ಚು ಲಾಭ ಪಡೆದು ಸಂಘದ ಸವಲತ್ತುಗಳನ್ನು ಸದಸ್ಯರು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ ಮಾತನಾಡಿ ಮೈಮುಲ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಿಂತ ಸಂದರ್ಭ ವಿರೋಧಿಗಳ ವದಂತಿಗಳಿಗೆ ಕಿವಿಕೊಡದೆ ನನ್ನನ್ನು ಆಯ್ಕೆ ಮಾಡಿದಿರಿ ನಿಮ್ಮಗಳ ಭರವಸೆಗೆ ಚ್ಯುತಿ ಬರದಂತೆ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಿದ್ದು ಮುಂಬರುವ ಚುನಾವಣೆಯಲ್ಲೂ ಸ್ಪರ್ಧಿಸುವುದಾಗಿ ತಿಳಿಸಿ ತಾಲೂಕಿನ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಡುವಂತೆ ಕೋರಿದರು.
ಈ ಸಂದರ್ಭ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಜಿ.ಎನ್ ಸಂತೋಷ್,
ಡಾ.ಸಣ್ಣತಮ್ಮೇಗೌಡ, ವಿಸ್ತರಣಾಧಿಕಾರಿಗಳಾದ ನಿಶ್ಚಿತ್, ಶ್ರೀಕಾಂತ್, ಸಚಿನ್, ತುಳಸಿಕುಮಾರ್, ಸುಂಡವಾಳು ಸಂಘದ ಅಧ್ಯಕ್ಷ ಜಯಣ್ಣ, ಉಪಾಧ್ಯಕ್ಷೆ ಸುನಂದಮ್ಮ, ಸಿಇಒ ಸ್ವಾಮಿಗೌಡ, ಸಿಬ್ಬಂದಿ ಗಣೇಶ್, ಹರೀಶ್, ಮಣಿ ರಂಜನ್, ಚೇತನ್, ನಂದಿಪುರ ಸಂಘದ ಅಧ್ಯಕ್ಷ ಜಯಣ್ಣ, ಉಪಾಧ್ಯಕ್ಷ ನಾಗೇಶ್ ಆರಾಧ್ಯ, ಸಿಇಒ ಚಿಕ್ಕೇಗೌಡ, ಸಿಬ್ಬಂದಿ ಕೆಂದೆಗೌಡ, ಕಾರ್ಯಕಾರಿ ಮಂಡಳಿ ಸರ್ವ ನಿರ್ದೇಶಕರು, ಗ್ರಾಮದ ಯಜಮಾನರು, ಮುಖಂಡರು, ಸಂಘದ ಸದಸ್ಯರು ಹಾಜರಿದ್ದರು.