ಆಧುನಿಕತೆಯ ದೂರದೃಷ್ಟಿಯ ಉತ್ತಮ ಆಲೋಚನೆಗಳೊಂದಿಗೆ ಬೆಂಗಳೂರು ನಗರ ನಿರ್ಮಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಕೆ.ಮಹದೇವ್ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಇಂದು ಬೆಂಗಳೂರು ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಹೆಸರು ಗಳಿಸಲು ಅಂದಿನ ಕಾಲದಲ್ಲಿ ಬೆಂಗಳೂರು ನಗರ ನಿರ್ಮಾಣದ ಪ್ರಮುಖ ರೂವಾರಿ ಕೆಂಪೇಗೌಡರ ದೂರದೃಷ್ಟಿಯು ಪ್ರಮುಖ ಕಾರಣವಾಗಿದೆ, ವಿಜಯನಗರದ ಶ್ರೀಕೃಷ್ಣದೇವರಾಯ ರಾಜರ ಆಳ್ವಿಕೆ ಕಾಲದಲ್ಲಿ ಬೆಂಗಳೂರು ಪ್ರದೇಶದಲ್ಲಿ ಸಾಮಂತ ರಾಜರಾಗಿದ್ಧ ಕೆಂಪೇಗೌಡರು ಪ್ರಜೆಗಳ ಹಿತ ಕಾಯಲು ಬೆಂಗಳೂರಿನ ಗಡಿ ವಿಸ್ತರಿಸಿ ಪಾರಂಪರಿಕ ಸ್ಥಳವಾಗಿಸಿದರು. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಅಜರಾಮರ ಕೆಲಸವನ್ನು ಮನಗಂಡು ಸರ್ಕಾರ ಅವರ 108ಅಡಿಯ ಕಂಚಿನ ಪ್ರತಿಮೆ ಸ್ಥಾಪನೆಗೆ ಅವರ ಜಯಂತಿಯಂದು ಚಾಲನೆ ನೀಡುತ್ತಿರುವುದಕ್ಕೆ ಅಭಿನಂದನೆ ತಿಳಿಸಿದರು.

    ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ಗ್ರಾಮೀಣಾಭಿವೃದ್ಧಿ ಮತ್ತು ಶುದ್ಧ ಕುಡಿಯುವ ನೀರು ಇಲಾಖೆ ಎಇಇ ಶಿವಕುಮಾರ್, ಪಿಡಬ್ಲ್ಯುಡಿ ಇಲಾಖೆ ಎಇ ದಿನೇಶ್, ಕಂದಾಯ ನಿರೀಕ್ಷಕ ಪಾಂಡು, ವಿವಿಧೆಡೆಯ ಗ್ರಾಮ ಲೆಕ್ಕಿಗರು ಮತ್ತು ಆರಕ್ಷಕ ಸಿಬ್ಬಂದಿ ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top