
ತಾಲೂಕಿನ ಹಬಟೂರು ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಆತ್ಮ ಯೋಜನೆಯಡಿ ರೈತರಿಗೆ ನಡೆದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ರೈತರು ಕೃಷಿ ಇಲಾಖೆಯ ಮುಖಾಂತರ ಮಾಹಿತಿ ಪಡೆದು ವ್ಯವಸಾಯ ಮಾಡಿದರೆ ಹೆಚ್ಚು ಇಳುವರಿ ಮೂಲಕ ಲಾಭ ಗಳಿಸಬಹುದು, ರೈತರ ಬೆಳೆಗಳನ್ನು ಉತ್ತೇಜಿಸಲು ಸರ್ಕಾರ ಪ್ರೋತ್ಸಾಹಧನ ನೀಡುವುದರ ಜೊತೆಗೆ ಹಲವು ಸವಲತ್ತುಗಳನ್ನು ಉಚಿತವಾಗಿ ಮತ್ತು ಸಬ್ಸಿಡಿ ದರದಲ್ಲಿ ನೀಡುತ್ತಿದ್ದು ಅವುಗಳ ಸದ್ಬಳಕೆಯಾಗಬೇಕಿದೆ, ಕೃಷಿ ಇಲಾಖೆ ಅಧಿಕಾರಿಗಳು ಪಾರದರ್ಶಕ ಕರ್ತವ್ಯ ನಿರ್ವಹಿಸಿ ಸರ್ಕಾರದ ಯೋಜನೆಗಳ ಮಾಹಿತಿಗಳನ್ನು ರೈತರಿಗೆ ನೀಡಬೇಕು, ಇಲಾಖೆಯ ಕಾರ್ಯಕ್ರಮಗಳ ಮಾಹಿತಿಯನ್ನು ನನಗೆ ನೀಡಿದರೆ ನಾನೇ ಖುದ್ದು ಹಳ್ಳಿಗಳಿಗೆ ಧಾವಿಸಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸುವುದಾಗಿ ತಿಳಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಮಾತನಾಡಿ 2020-21ನೇ ಸಾಲಿನಲ್ಲಿ ತಾಲೂಕಿನ 448ಹೇಕ್ಟೆರ್ ಪ್ರದೇಶದಲ್ಲಿ ರಾಗಿ ಮತ್ತು 49ಹೆಕ್ಟೇರ್ ಪ್ರದೇಶದಲ್ಲಿ ಹಲಸಂದೆ ಬೆಳೆಯಲು ನಾಲ್ಕು ಹೋಬಳಿಗಳ ಆರು ಗ್ರಾಮಗಳಲ್ಲಿನ 775 ಮಂದಿ ರೈತರಿಗೆ ಪ್ಯಾಕೇಜ್ ರೂಪದಲ್ಲಿ ಕೃಷಿ ಪರಿಕರಗಳ ಜೊತೆಗೆ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ, ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಧನ ವಿತರಿಸುತ್ತಿದ್ದು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ವೇಳೆ ಕೃಷಿ ಇಲಾಖೆ ವತಿಯಿಂದ ರೈತರಿಗೆ ಉಚಿತವಾಗಿ ಬಿತ್ತನೆ ಬೀಜಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ, ಕೃಷಿ ಅಧಿಕಾರಿ ಮಹೇಶ್, ಗ್ರಾಮದ ಮುಖಂಡರಾದ ರವಿ, ಕರಿಗೌಡ, ಆಶಾ, ರಾಮಚಂದ್ರು, ಮಲ್ಲೇಗೌಡ, ರಮೇಶ್, ರಘು, ಶಿವರಾಜ್ ಮತ್ತು ರೈತರು ಹಾಜರಿದ್ದರು.