
ಈ ವೇಳೆ ಶಾಸಕ ಕೆ.ಮಹದೇವ್ ಮಾತನಾಡಿ ಹಿಂದಿನ ಕಾಲದಲ್ಲಿ ಆಚರಣೆಯಲ್ಲಿದ್ದ ಜಾತಿ ಪದ್ಧತಿ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ ಸಿಡಿದೆದ್ದು ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಬುನಾದಿ ಹಾಕಿ ಸಂವಿಧಾನ ರಚಿಸಿದ ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಧಾರಾವಾಹಿ ಮೂಲಕ ಪ್ರಸ್ತುತ ಸಮಾಜಕ್ಕೆ ತಿಳಿಸುತ್ತಿರುವುದು ಶ್ಲಾಘನೀಯ ಎಂದರು.
ತಾ.ಪಂ ಸದಸ್ಯ, ದಸಂಸ ಮುಖಂಡ ಎಸ್.ರಾಮು ಮಾತನಾಡಿ ತಾವು ಬಾಲ್ಯದಲ್ಲಿ ಅನುಭವಿಸಿದ ಕಷ್ಟ ನೋವುಗಳು ಇತರರಿಗೆ ಬಾರದಿರಲಿ ಎಂದು ಸರ್ವರಿಗೂ ಸರಿಸಮಾನ ಹಕ್ಕು ದೊರೆಯಲೆಂದು ಸಂವಿಧಾನ ರಚಿಸಿದ
ಡಾ.ಬಿ.ಆರ್ ಅಂಬೇಡ್ಕರ್ ಅವರ ಹೋರಾಟದ ಕಥಾ ಸಂಗ್ರಹವನ್ನು ಖಾಸಗಿ ವಾಹಿನಿಯೊಂದು ಪ್ರಸ್ತುತಪಡಿಸುತ್ತಿದ್ದು ಶುಭವಾಗಲಿ ಎಂದರು . ಈ ಸಂದರ್ಭ ಟಿಎಪಿಸಿಎಂಎಸ್ ಮಾಜಿ ಕಾರ್ಯದರ್ಶಿ ತಮಣ್ಣಯ, ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷ ಸಿ.ಕೆ ರಾಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಗಿರೀಶ್, ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲೂಕು ಅಧ್ಯಕ್ಷ ಸೋಮಣ್ಣ, ಜಿಲ್ಲಾ ಉಸ್ತುವಾರಿ ಕಾಂತರಾಜ್, ಮುಖಂಡರಾದ ಚನ್ನಪ್ಪ, ಗೋಪಾಲ್, ಹೊನ್ನೂರಯ, ಶಿವಣ್ಣ, ವಸಂತ್, ಧನರಾಜ್, ರಾಜಯ್ಯ, ಉಪನ್ಯಾಸಕ ಪುಟ್ಟಮಾದಪ್ಪ ಮತ್ತಿತರರಿದ್ದರು.