ತಾಲೂಕಿನ ಹುಣಸವಾಡಿ ಗ್ರಾ.ಪಂ ನಲ್ಲಿ ನಡೆದ ವಿಶೇಷ ಗ್ರಾ.ಪಂ ಸಭೆಯಲ್ಲಿ ಮಾತನಾಡಿದರು, ಹಳ್ಳಿಗಳಲ್ಲಿ ನಿವೇಶನ ಹಾಗೂ ವಸತಿ ರಹಿತರ ಸಂಖ್ಯೆ ಹೆಚ್ಚಿದ್ದು ಅವರಿಗೆ ಸೂಕ್ತ ನಿವೇಶನಗಳನ್ನು ಹಾಗೂ ವಸತಿಗಳನ್ನು ವಿತರಿಸಲು ಗ್ರಾಮ ಠಾಣಾ ಒತ್ತುವರಿ ತೆರವುಗೊಳಿಸಲಾಗುತ್ತಿದೆ, ತಾಲೂಕಿನಲ್ಲಿ ಕೆಲ ಪಿಡಿಒಗಳು ನನ್ನ ಆಸಕ್ತಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಲು ಆಸಕ್ತಿ ಇಲ್ಲದಿದ್ದಲ್ಲಿ ಬೇರೆಡೆಗೆ ವರ್ಗ ಮಾಡಿಸಿಕೊಂಡು ಹೋಗುವಂತೆ ಸೂಚಿಸಿದರು, ಗ್ರಾಮೀಣ ಪ್ರದೇಶಗಳಲ್ಲಿ ಇ ಸ್ವತ್ತು ಮತ್ತು ಖಾತೆಯ ವಿಷಯದಲ್ಲಿ ಸಾರ್ವಜನಿಕರಿಗೆ ಅಧಿಕಾರಿಗಳು ತೊಂದರೆ ನೀಡಿದಲ್ಲಿ ಕೂಡಲೇ ದೂರು ನೀಡುವಂತೆ ಸಾರ್ವಜನಿಕರಿಗೆ ತಿಳಿಸಿ ಕುಡಿಯುವ ನೀರು ಪೂರೈಕೆ, ಚರಂಡಿ ಮತ್ತು ಬೀದಿ ದೀಪಗಳ ನಿರ್ವಹಣೆ ಬಗ್ಗೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸುವಂತೆ ತಿಳಿಸಿದರು.
ತಾ.ಪಂ ಸದಸ್ಯ ಎಸ್.ರಾಮು ಮಾತನಾಡಿ ನಂದಿನಾಥಪುರ ಗ್ರಾಮದಲ್ಲಿ ಸ್ಮಶಾನವಿಲ್ಲದೆ ಗದ್ದೆ ಹಳ್ಳಗಳಲ್ಲಿ ಮೃತದೇಹಗಳನ್ನು ಹುಾಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿ ಶೀಘ್ರ ಸ್ಮಶಾನ ಜಾಗ ಅಭಿವೃದ್ಧಿಪಡಿಸುವಂತೆ ಹಾಗೂ ಕಾಮನಹಳ್ಳಿ ಬಳಿ ಗ್ರಾಮಠಾಣಾ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ, ನರೇಗಾ ಸಹಾಯಕ ನಿರ್ದೇಶಕ ರಘುನಾಥ್, ಜಿ.ಪಂ ಎಇಇ ಪ್ರಭು, ಲೋಕೋಪಯೋಗಿ ಇಲಾಖೆಯ ಎಇಇ ನಾಗರಾಜು, ಎಡಿಎಲ್ಆರ್ ಚಿಕ್ಕಣ್ಣ, ಎಂ.ಕೆ.ಪ್ರಕಾಶ್, ಮುಖಂಡರಾದ ಗೋವಿಂದೇಗೌಡ, ಲೊಕೇಶ್, ಕೆಂಪಣ್ಣ, ಮಹದೇವ, ಕುಮಾರ್, ಪಿಡಿಒ ಚಿದಾನಂದ ಮತ್ತಿತರರು ಹಾಜರಿದ್ದರು.