
ತಾಲೂಕಿನ ಹುಣಸೇಕುಪ್ಪೆ, ಹಮ್ಮಿಗೆ ಹಾಗೂ ಹುಣಸವಾಡಿ ಗ್ರಾಮಗಳಲ್ಲಿ 5.30 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಈ ಹಿಂದೆ ತಾಲೂಕಿನ ಶಾಸಕರಾಗಿದ್ದವರನ್ನು ಸಾರ್ವಜನಿಕರು ತಮ್ಮ ತಮ್ಮ ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿ ಪ್ರಶ್ನಿಸದೆ ಇದ್ದಿದ್ದರಿಂದ ಯಾವ ಗ್ರಾಮಗಳಿದ್ದು ತಾಲೂಕು ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದೆ, ಶಾಸಕನಾಗಿ ಆಯ್ಕೆಯಾದ ಎರಡು ವರ್ಷದ ಅವಧಿಯಲ್ಲಿ ನೆರೆ ಪ್ರವಾಹ ಕೊರೊನಾದಂತಹ ಸಂಕಷ್ಟ ಸಮಯದಲ್ಲಿಯೂ ಶಕ್ತಿ ಮೀರಿ ಪ್ರಯತ್ನಿಸಿ ಸರ್ಕಾರದಿಂದ ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆ, ಅವಕಾಶ ನೀಡಿರುವ ತಾಲೂಕಿನ ಜನತೆಯ ಋಣ ತೀರಿಸುವ ಅಭಿಲಾಷೆಯೊಂದಿಗೆ ಜಾತ್ಯತೀತ ಪಕ್ಷಾತೀತವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡುತ್ತಿದ್ದು ವಿರೋಧಿಗಳ ಟೀಕೆಗಳಿಗೆ ಬಗ್ಗದೆ ಅಭಿವೃದ್ಧಿಯ ಮೂಲಕ ಉತ್ತರ ನೀಡುತ್ತಿದ್ದೇನೆ, ನನಗೆ ಅಧಿಕಾರದ ಸ್ಥಾನ ಮುಖ್ಯವಲ್ಲ ಆ ಸ್ಥಾನಕ್ಕೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸಿ ತಾಲೂಕಿನ ಜನತೆ ನೀಡಿದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದಾಗಿ ಹೇಳಿದರು.
ಈ ಸಂದರ್ಭ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ , ಸದಸ್ಯ ಶ್ರೀನಿವಾಸ್, ಮಾಜಿ ಉಪಾಧ್ಯಕ್ಷ ರಘುನಾಥ್, ಇಒ ಡಿ.ಸಿ ಶ್ರುತಿ, ಪಿಡಬ್ಲ್ಯುಡಿ ಎಇಇ ನಾಗರಾಜ್, ಪಂಚಾಯತ್ ಎಂಜಿನಿಯರಿಂಗ್ ಇಲಾಖೆ ಎಇಇ ಪ್ರಭು, ಬಿಇಒ ತಿಮ್ಮೇಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮಸ್ಥರು ಹಾಜರಿದ್ದರು.