
ಈ ವೇಳೆ ಮಾತನಾಡಿದ ಶಾಸಕರು ಕರಡಿಲಕ್ಕನ ಕೆರೆ ಏತ ನೀರಾವರಿ ಯೋಜನೆಯಿಂದ ತಾಲೂಕಿನ 26 ಸಾವಿರ ಎಕರೆ ಕೃಷಿ ಪ್ರದೇಶ ಮತ್ತು ಅರಕಲಗೂಡು ತಾಲೂಕಿನ 4 ಸಾವಿರ ಎಕರೆ ಕೃಷಿ ಪ್ರದೇಶದ ರೈತರು ಬೆಳೆಗಳನ್ನು ಬೆಳೆಯಲು ಸಹಕಾರಿಯಾಗಲಿದ್ದು ನೀರನ್ನು ಹೆಚ್ಚಾಗಿ ಪೋಲು ಮಾಡದೇ ಕೃಷಿ ಚಟುವಟಿಕೆಗಳಿಗೆ ಬಳಸಿ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು, ಕರಡಿಲಕ್ಕನ ಕೆರೆ ಏತ ನೀರಾವರಿ ಯೋಜನೆಯಿಂದ ಚನ್ನಕೇಶವಪುರ, ಅಂಬ್ಲಾರೆ, ಚಪ್ಪರದಹಳ್ಳಿ, ಬೆಟ್ಟದಪುರ, ಹರದೂರು, ಬೆಟ್ಟದ ತುಂಗ ಸೇರಿದಂತೆ ಬೆಟ್ಟದಪುರ ಮತ್ತು ರಾವಂದೂರು ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳ ರೈತರಿಗೆ ಸಹಕಾರಿಯಾಗಲಿದೆ, ಈಚಿನ ದಿನಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಾವೇರಿ ನದಿ ಪಾತ್ರದ ತಾಲೂಕಿನ ಜನತೆ ಭತ್ತ ಬೆಳೆಯಲು ಸಹಕಾರಿಯಾಗಲಿದೆ, ಕೊರೊನಾ ಸೋಂಕಿನ ಕಾರಣ ಏತ ನೀರಾವರಿ ಯೋಜನೆಯ ಗ್ರಾಮಗಳ ಮುಖಂಡರುಗಳ ನೇತೃತ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಬಯಸಿದ್ದೆ ಆದರೆ ಈ ಭಾಗದ ಹೆಚ್ಚಿನ ರೈತರು ಆಗಮಿಸಿ ಸಮುದಾಯದ ಅಂತರ ಕಾಪಾಡಿಕೊಂಡು ಕಾರ್ಯಕ್ರಮಕ್ಕೆ ಹಾಜರಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ರುದ್ರಮ್ಮ ನಾಗಯ್ಯ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ, ಸದಸ್ಯರಾದ ಎಸ್.ರಾಮು, ಮೋಹನ್ ರಾಜ್, ಮಾಜಿ ಉಪಾಧ್ಯಕ್ಷ ರಘುನಾಥ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಹಾರಂಗಿ ಇಲಾಖೆ ಇಇ ರಾಜೇಗೌಡ, ಎಇಇ ಅನಂತ ಪ್ರಸಾದ್, ಎಇ ಬೆಕ್ಕರೆ ರಮೇಶ್, ಸತ್ಯ ಸೇರಿದಂತೆ ಹಲವರು ಹಾಜರಿದ್ದರು.