ಪ್ರತಿ ಮೂರು ತಿಂಗಳಿಗೊಮ್ಮೆ ತಾಲೂಕಿನ 34 ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡುವುದಾಗಿ ಶಾಸಕ ಕೆ ಮಹದೇವ್ ತಿಳಿಸಿದರು.

ತಾಲೂಕಿನ ಪಂಚವಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಾತನಾಡಿದರು ಈ ಹಿಂದೆ ಇದ್ದ ಗ್ರಾಮಪಂಚಾಯತಿಯ ಚುನಾಯಿತ ಪ್ರತಿನಿಧಿಗಳು ಅವಧಿ ಮುಗಿದಿದ್ದು ಅದರಂತೆ ಈಗಾಗಲೇ 34 ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಕೋವಿಡ್ 19 ಮಹಾಮಾರಿ ರೋಗ ಇಡೀ ದೇಶದ ಹಾಡುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವ ರೀತಿ ರೋಗ ನಿಯಂತ್ರಣಕ್ಕೆ ತಡೆಗಟ್ಟುವ ಕೆಲಸವನ್ನು ಹೀಗೆ ನಿಭಾಯಿಸಿದ್ದಾರೆ ಎಂಬುದು ಗೊತ್ತಾಗಬೇಕಾಗಿದೆ ಪಂಚವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳು ಇದು ಹಿಂದಿನ ಜನಪ್ರತಿನಿಧಿಗಳು ಗ್ರಾಮಗಳ ಅಭಿವೃದ್ಧಿ ಬಗ್ಗೆ ಯಾವ ರೀತಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದ ನಿರ್ವಹಿಸಿದ್ದಾರೆ ಎಂಬುದು ಜನರಿಗೆ ಅರ್ಥವಾಗಬೇಕಿದೆ ಕೋವಿಡ್ 19 ರೋಗದ ಗುಣಲಕ್ಷಣಗಳು ದಿನದಿನ ಹೆಚ್ಚಾಗುತ್ತಿದ್ದು ಪಟ್ಟಣ  ವ್ಯಾಪ್ತಿಯಲ್ಲಿ ಹಡುತ್ತಿದ್ದ ರೋಗ ಇದೀಗ ಗ್ರಾಮಾಂತರ ಪ್ರದೇಶಕ್ಕೂ  ಕಾಲಿಟ್ಟಿದೆ ಇದನ್ನು ತಡೆಗಟ್ಟುವಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪ್ರತಿ ಹಳ್ಳಿಗಳಲ್ಲಿ   ಸ್ಯಾನಿಟೇಜ್ ಮತ್ತು ಮಾಸ್ಕ್ ಪ್ರತಿ ಮನೆಗಳಿಗೂ ನೀಡಬೇಕು ಎಂದರು ಸತ್ಯಗಾಲ ಬಿ ಕವಲು ಗ್ರಾಮದಲ್ಲಿ ಕಳೆದ ಮೂರು ತಿಂಗಳಿನಿಂದ ಕುಡಿಯುವ ನೀರಿಗೆ ಭಾವವಾಗಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ ರಸ್ತೆ ಅಕ್ಕಪಕ್ಕ ಮಳೆ ನೀರು ನಿಂತು ಕಲುಷಿತ ನೀರು ಉದ್ಭವವಾಗಿದೆ ಪಂಚಾಯತಿ ವ್ಯಾಪ್ತಿಗೆ ಸೇರಿದ ಕುಡಿಯುವ ನೀರಿನ ಬೋರ್ವೆಲ್ ಪಕ್ಕದ ಜಮೀನು ಮಾಲಿಕ ನೀರನ್ನು ದುರುಪಯೋಗ  ಮಾಡಿಕೊಂಡಿದ್ದಾನೆಎಂದು ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು ಶಾಸಕರು ಕೂಡಲೇ ಸತ್ಯಗಾಲ ಬಿ ಕಾವಲ್ ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡಲೇ  ಮಾಡಬೇಕೆಂದುಮಾಡಬೇಕೆಂದು  ಪಿಡಿಓಗೆ ತಾಕೀತು ಮಾಡಿದರು ಪಂಚವಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ ಹಲವು ರಸ್ತೆಗಳು ಡಾಂಬರು ಕಾಣದೆ ನೆನೆಗುದಿಗೆ ಬಿದ್ದಿದೆ ಇದನ್ನು ಕೂಡಲೇ ಡಾಂಬರಿಕರಣ ಮಾಡಬೇಕೆಂದು ಆಗ್ರಹಿಸಿದರು ಪಂಚವಳ್ಳಿ ಗ್ರಾಮವು ಅತಿ ದೊಡ್ಡ ಗ್ರಾಮವಾಗಿದ್ದು ಗ್ರಾಮ ಪಂಚಾಯಿತಿಗೆ ಸುಮರ ಹಳ್ಳಿಗಳು ಸೇರ್ಪಡೆಗೊಳ್ಳುತ್ತವೆ ಇಲ್ಲಿ ಸೂಕ್ತವಾದ ಆಸ್ಪತ್ರೆ ಇಲ್ಲ ಖಾಲಿ ನಿವೇಶನ ಇದ್ದು  ಆಸ್ಪತ್ರೆ ಅವಶ್ಯಕತೆ ಇದೆಯೆಂದು ಗ್ರಾಮಸ್ಥರು ಶಾಸಕರಿಗೆ ತಿಳಿಸಿದರು ಹಾಗೆ ಪಿಯುಸಿ ಕಾಲೇಜ್ ಕೂಡ ಗ್ರಾಮಕ್ಕೆ ಬೇಕೆಂದು ಶಾಸಕರಲ್ಲಿ ಮನವಿ ಮಾಡಿಕೊಂಡರು ಈ ಸಂದರ್ಭ ಹಿರಿಯ ನಾಗರಿಕರಿಗೆ ಪೆನ್ಷನ್ ಹಣ ಬರುವ ಮಂಜೂರಾತಿ ಪತ್ರವನ್ನು ಶಾಸಕರು ನೀಡಿದರು ಸರ್ಕಾರದಿಂದ ಬರುವ 14 ಮತ್ತು 15 ಹಣಕಾಸಿನ ಆಯೋಗದಲ್ಲಿ ಗ್ರಾಮ ಪಂಚಾಯ್ತಿಗೆ ಒಳಪಡುವ ಗ್ರಾಮಗಳ ಅಭಿವೃದ್ಧಿಗಾಗಿ ಹೆಚ್ಚು ಹಣ ಮೀಸಲಿಡಲಾಗಿದೆ ಅದರಂತೆ ಗ್ರಾಮಗಳಲ್ಲಿ ರಸ್ತೆ ಚರಂಡಿ ವಿದ್ಯುತ್ ಕುಡಿಯುವ ನೀರು ಹೀಗೆ ಅನೇಕ ಸಮಸ್ಯೆಗಳಿಗೆ  ಸ್ಪಂದಿಸಿ ಕೆಲಸ ಮಾಡಬೇಕು ಎಂದರು 34 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲ ಅಧಿಕಾರಿಗಳು ಅವರ ಜವಾಬ್ದಾರಿ ಕರ್ತವ್ಯ ನಿರ್ವಹಿಸಬೇಕು ಹಿಂದಿನ ಆಡಳಿತದ ಜನಪ್ರತಿಧಿಗಳು ಸರಿಯಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳ ಅಭಿವೃದ್ಧಿಯನ್ನು ಮಾಡಿದರೆ ಸಮಸ್ಯೆಗಳು ಹೆಚ್ಚಾಗಿ ಬರುತ್ತಿರಲಿಲ್ಲ ಸ್ವತಂತ್ರ ಬಂದು 75 ವರ್ಷಗಳಾದರೂ ಗ್ರಾಮಂತರ ಪ್ರದೇಶಗಳಲ್ಲಿ ಇನ್ನು ಸಮಸ್ಯೆಗಳು ಹೆಚ್ಚಾಗುತ್ತಿವೆ 14 15 ಹಣಕಾಸಿನಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ಸೇರುವ ಎಲ್ಲ ಹಳ್ಳಿಹಳ್ಳಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಯಾವ ಸಮಸ್ಯೆ ಕೂಡ ಬರದ ಹಾಗೆ ನೋಡಿಕೊಳ್ಳುವುದು ಗ್ರಾಮಪಂಚಾಯತಿ ಗೆ ಸೇರಿದ್ದು ಅದಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿಗೂ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಮುಂದಿನ ದಿನದಲ್ಲಿ ಯಾವುದೇ ಸಮಸ್ಯೆಗಳು ಉದ್ಭವ ಆಗದೆ ನೋಡಿಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಇಂಜಿನಿಯರ್ ಎ ಡಬಲ್ ಇ ಪ್ರಭು ನಿರವರಿ ಇಲಾಖೆ ಅಧಿಕಾರಿ ಶಿವಕುಮಾರ್ ಕೃಷಿ ಇಲಾಖೆ ಅಧಿಕಾರಿ ಶಿವಕುಮಾರ್ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಡಿಸಿಸಿಟಿ ಪಂಚಾಯತಿ ಅಧಿಕಾರಿಗಳಾದ ಆಶಾರಾಣಿ ತಾಲೂಕು ಪಂಚಾಯ್ತಿ ಸದಸ್ಯ ಈರಯ್ಯ ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ರಘುನಾಥ್ ಮುಖಂಡರಾದ ತಿಮ್ಮೇಗೌಡ ಸೈಯದ್ ನಜೀರ್. ಪಾಷಾ ಮತ್ತಿತರು ಹಾಜರಿದ್ದರು

Leave a Comment

Your email address will not be published. Required fields are marked *

error: Content is protected !!
Scroll to Top