
ತಾಲೂಕಿನ ವಿವಿಧೆಡೆ 3.88 ಕೋಟಿ ವೆಚ್ಚದ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು, ಶಾಸಕನಾಗಿ ಆಯ್ಕೆಯಾದ ತಕ್ಷಣ ಬೆಕ್ಕರೆ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಅನುದಾನ ಮಂಜೂರು ಮಾಡಲಾಗಿತ್ತು ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸರ್ಕಾರ ಬದಲಾದ್ದರಿಂದ ಅನುದಾನ ಹಿಂಪಡೆದ ಕಾರಣ ಅಭಿವೃದ್ಧಿ ಕುಂಠಿತವಾಯಿತು, ಪ್ರಸ್ತುತ ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ಪಶುವೈದ್ಯಕೀಯ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ್ದು ಮುಂದಿನ ದಿನಗಳಲ್ಲಿ ಗ್ರಾಮ ಪರಿಮಿತಿಯ ಎಲ್ಲ ರಸ್ತೆ ಮತ್ತು ಪರಿಶಿಷ್ಟ ಕಾಲೊನಿ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರು ಸೇರಿದಂತೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.
ಬೆಕ್ಕರೆ ಗ್ರಾಮದವರು ನಾನು ಕಳೆದೆರಡು ಚುನಾವಣೆಯಲ್ಲಿ ಸೋತ ಸಂದರ್ಭ ಹಾಗೂ ಗೆದ್ದಾಗಲೂ ಅತಿ ಹೆಚ್ಚು ಮತ ನೀಡಿದ್ದೀರಿ ಮತದಾರರ ಭಾವನೆಗಳಿಗೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸಿ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ಭುವನಹಳ್ಳಿ, ಬೆಕ್ಕರೆ ಹಾಗೂ ಕೋಮಲಾಪುರ ಗ್ರಾಮಗಳಲ್ಲಿ ನೂತನ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ, ಬೆಕ್ಕರೆಯಲ್ಲಿ ನೂತನ ಪಶು ವೈದ್ಯಕೀಯ ಕಟ್ಟಡ ನಿರ್ಮಾಣ ಚಾಲನೆ ಸೇರಿದಂತೆ ಕುಾರ್ಗಲ್ಲು-ಜೋಗನಹಳ್ಳಿ-ಕೊಣಸೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭ ತಹಸೀಲಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಇಒ ಡಿ.ಸಿ ಶ್ರುತಿ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ, ಮಾಜಿ ಉಪಾಧ್ಯಕ್ಷ ರಘುನಾಥ್, ಪಿಡಬ್ಲ್ಯುಡಿ ಎಇಇ ನಾಗರಾಜ್, ಎಇ ಕುಮಾರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಎಇಇ ಪ್ರಭು, ಬಿಇಒ ತಿಮ್ಮೇಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಂದೇಶ್, ಗ್ರಾಮೀಣಾಭಿವೃದ್ಧಿ ಮತ್ತು ಶುದ್ಧ ಕುಡಿಯುವ ನೀರು ಇಲಾಖೆ ಎಇಇ ಶಿವಕುಮಾರ್, ಸಿಆರ್ಪಿ ಚೇತನ್, ಮುಖ್ಯಶಿಕ್ಷಕ ವಿಶುಕುಮಾರ್, ಯಜಮಾನರಾದ ಹುಚ್ಚೇಗೌಡ, ನಿಕಟಪೂರ್ವ ಗ್ರಾ.ಪಂ ಸದಸ್ಯ ಲೋಕೇಶ್ ಸೇರಿದಂತೆ ಬೆಕ್ಕರೆ ಗ್ರಾಮದ ಮುಖಂಡರುಗಳು, ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಸವೇಗೌಡ ಮತ್ತು ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಾಜರಿದ್ದರು.