
ತಾಲೂಕಿನ ಕೆ.ಹರಳಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು, ಗುಣಮಟ್ಟದ ಹಾಲನ್ನು ಸಂಘಕ್ಕೆ ಸರಬರಾಜು ಮಾಡುವ ಮೂಲಕ ಹೆಚ್ಚು ದರ ಪಡೆಯಬಹುದು, ತಾಲೂಕಿನಲ್ಲಿ ತಂಬಾಕು ಹೆಚ್ಚಾಗಿ ಬೆಳೆಯುತ್ತಾರೆ ಇದರ ಜೊತೆಗೆ ಹೈನುಗಾರಿಕೆಗೆ ಹೆಚ್ಚು ಗಮನಹರಿಸಿ ಆರ್ಥಿಕವಾಗಿ ಕುಟುಂಬದ ಸಮಸ್ಯೆ ನಿರ್ವಹಣೆ ಮಾಡಿಕೊಳ್ಳಬಹುದು, ತಾಲೂಕಿನ 177 ಸಂಘಗಳು ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ ನೇತೃತ್ವದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಸಂತಸಕರ ಎಂದರು.
ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ ಮಾತನಾಡಿ ಅಧಿಕಾರಾವಧಿಯಲ್ಲಿ ತಾಲೂಕಿನಾದ್ಯಂತ ಪಕ್ಷ ಬೇಧ ಮರೆತು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸರ್ಕಾರದಿಂದ ಸಿಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅತಿ ಹೆಚ್ಚು ಬಿಎಂಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ, ಜಿಲ್ಲೆಗೆ ಅತಿ ಹೆಚ್ಚು ಹಾಲು ಸರಬರಾಜು ಮಾಡುವ ತಾಲೂಕು ನಮ್ಮದಾಗಿರುವುದು ಉತ್ತಮ ಬೆಳವಣಿಗೆ ಎಂದರು. ಈ ಸಂದರ್ಭ ತಾ.ಪಂ ಸದಸ್ಯ ಆರ್.ಎಸ್ ಮಹಾದೇವ್, ಮಾಜಿ ಉಪಾಧ್ಯಕ್ಷ ರಘುನಾಥ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಸಂಘದ ಅಧ್ಯಕ್ಷ ಎಚ್.ಎಂ ಬಸವರಾಜ್, ಉಪಾಧ್ಯಕ್ಷ ಎಚ್.ಪಿ ವೃಷಭೇಂದ್ರ ಮತ್ತು ಸರ್ವ ನಿರ್ದೇಶಕರು, ವಿಸ್ತರಣಾಧಿಕಾರಿಗಳಾದ ಶ್ರೀಕಾಂತ್, ನಿಶ್ಚಿತ್ ಮತ್ತು ಸದಸ್ಯರು ಹಾಜರಿದ್ದರು.