
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಬಳಿ ಇಬ್ಬರು ವಿಕಲ ಚೇತನರಿಗೆ ಎರಡು ದ್ವಿಚಕ್ರ ವಾಹನವನ್ನು ವಿತರಿಸಿ ಮಾತಾಡಿದರು. ತಾಲೂಕಿನಲ್ಲಿ ಸುಮಾರು 80ಕ್ಕೂ ಹೆಚ್ಚು ಅಂಗವಿಕಲರಿದ್ದಾರೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಪಟ್ಟಿ ತಯಾರಿಸಿ ರ್ಕಾರಕ್ಕೆ ಕಳುಹಿಸಲಾಗಿದೆ ಅದರಂತೆ ಇಂದು ಎರಡು ದ್ವಿಚಕ್ರವಾಹನವನ್ನು ನೀಡಲಾಗಿದ್ದು ಮುಂದಿನ ದಿನಗಳಲ್ಲಿ ತಾಲ್ಲೂಕಿಗೆ ಇನ್ನು ಹೆಚ್ಚು ದ್ವಿಚಕ್ರವಾಹನವನ್ನು ತರಿಸಿ ಉಳಿದ ಅಂಗವಿಕಲರಿಗೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂರ್ಭ ತಾ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ. ರಂಗಸ್ವಾಮಿ, ತಾ. ಪಂ. ಕರ್ಯನರ್ವಹಣಾಧಿಕಾರಿ ಡಿ.ಸಿ. ಶೃತಿ ಪುರಸಭಾ ಸದಸ್ಯರಾದ ನಿರಂಜನ್. ಮುಖಂಡ ಪೆಪ್ಸಿ ಕುಮಾರ್. ಪಿಡಬ್ಲ್ಯುಡಿ ಎಇಇ ನಾಗರಾಜ್, ವಿಕಲಚೇತನರ ಸಬಲೀಕರಣ ಇಲಾಖೆ ತಾಲ್ಲೂಕು ಸಂಯೋಜಕಿ ಲಕ್ಷ್ಮಿ .ಪೂಜಾ. ಸತೀಶ್ ಮತ್ತಿತರರಿದ್ದರು.