
ಈ ವೇಳೆ ಸಚಿವರು ಸ್ವತಃ ಟ್ರ್ಯಾಕ್ಟರ್ ಏರಿ ಕುಳಿತುಕೊಳ್ಳುವ ಮೂಲಕ ಸಂಸದ ಪ್ರತಾಪ್ ಸಿಂಹ ಶಾಸಕ ಕೆ.ಮಹದೇವ್ ಅವರನ್ನು ಪಕ್ಕದಲ್ಲಿ ಕೂರಿಸಿ ಫೋಟೊ ತೆಗೆಸಿಕೊಂಡರು, ನಂತರ ಮಾತನಾಡಿದ ಅವರು ಸಹಕಾರ ಸಂಘಗಳಿಗೆ ಸರ್ಕಾರ ಹಲವು ಸವಲತ್ತುಗಳನ್ನು ನೀಡುತ್ತಿದ್ದು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಸಂಘದ ಅಧ್ಯಕ್ಷ ಕೆ.ಕುಮಾರ್ ಮಾತನಾಡಿ ಕಂಪಲಾಪುರ ಪಿಎಸಿಸಿಎಸ್ ಸ್ಥಾಪನೆಯಾಗಿ ಶತಮಾನದ ಹೊಸ್ತಿಲಲ್ಲಿದೆ ಗ್ರಾಮಾಂತರ ಪ್ರದೇಶದ ರೈತರ ಶ್ರೇಯೋಭಿವೃದ್ಧಿಗೆ ಸಂಘ ಕೆಲಸ ನಿರ್ವಹಿಸುತ್ತಿದೆ, ಇದರ ಸವಿ ನೆನಪಿಗಾಗಿ ಕಟ್ಟಡದ ಹಿಂಬಾಗ ಇರುವ ಜಾಗದಲ್ಲಿ ಶತಮಾನೋತ್ಸವ ಭವನ ನಿರ್ಮಿಸಲು ಗುರಿ ಹೊಂದಿದ್ದು ಸಹಕಾರ ಸಚಿವರು ಇಲಾಖೆ ಮುಖಾಂತರ ನೆರವು ನೀಡುವಂತೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಮಹದೇವ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಡಿ ಮಹೇಂದ್ರ , ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್.ರವಿ, ಉಪ ವಿಭಾಗಾಧಿಕಾರಿ ವೀಣಾ, ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಇಒ ಡಿ.ಸಿ ಶ್ರುತಿ, ಸರ್ಕಲ್ ಇನ್ಸ್ಪೆಕ್ಟರ್ ಬಿ.ಆರ್ ಪ್ರದೀಪ್, ಪಿಎಸಿಸಿಎಸ್ ಉಪಾಧ್ಯಕ್ಷ ಮಹೇಶ್ ಮತ್ತು ನಿರ್ದೇಶಕರು, ಸಿಇಒ ಮಂಜುಳಾ ಸಿಬ್ಬಂದಿ ಹಾಜರಿದ್ದರು.