
ತಾಲೂಕಿನ ಮುತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಬಿಎಂಸಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು, ಹೈನುಗಾರಿಕೆ ಪ್ರೋತ್ಸಾಹಿಸಲು ಒಕ್ಕೂಟ ವತಿಯಿಂದ ಸಬ್ಸಿಡಿ ದರದಲ್ಲಿ ಹಲವು ಸವಲತ್ತುಗಳ ಜೊತೆಗೆ ವಿಮಾ ಸೌಲಭ್ಯ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರ ನೀಡಲಾಗುತ್ತಿದ್ದು ಸದಸ್ಯರು ಸದ್ಬಳಕೆ ಮಾಡಿಕೊಳ್ಳಬೇಕು, ಸಂಘದ ನಿರ್ದೇಶಕರೆಲ್ಲರೂ ಒಗ್ಗಟ್ಟಾಗಿ ಅಭಿವೃದ್ಧಿಗೆ ಶ್ರಮಿಸುವಂತೆ ಕೋರಿದರು.
ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ ಮಾತನಾಡಿ ಜಿಲ್ಲೆಯಲ್ಲಿ ಪಿರಿಯಾಪಟ್ಟಣ ತಾಲೂಕು ಉತ್ತಮ ಗುಣಮಟ್ಟದ ಹಾಲು ಸರಬರಾಜಿಗೆ ಹೆಸರುವಾಸಿಯಾಗಿದ್ದು ಗುಣಮಟ್ಟದ ಹಾಲು ಪೂರೈಕೆಯಿಂದ ಹೆಚ್ಚು ಲಾಭ ಪಡೆದು ಸಂಘದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ ಮಾತನಾಡಿ ಅಧಿಕಾರಾವಧಿಯಲ್ಲಿ ಸಹಕಾರ ಸಂಘಗಳ ಅಭಿವೃದ್ಧಿಗೆ ಹೆಚ್ಚು ಶ್ರಮಿಸಿದ್ದೇನೆ, ವಿರೋಧಿಗಳ ವದಂತಿಗಳಿಗೆ ಕಿವಿಕೊಡದೆ ನನ್ನನ್ನು ಆಯ್ಕೆ ಮಾಡಿದಿರಿ ನಿಮ್ಮಗಳ ಭರವಸೆಗೆ ಚ್ಯುತಿ ಬರದಂತೆ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಿದ್ದು ಮುಂಬರುವ ಚುನಾವಣೆಯಲ್ಲೂ ಸ್ಪರ್ಧಿಸುವುದಾಗಿ ತಿಳಿಸಿ ತಾಲೂಕಿನ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಡುವಂತೆ ಕೋರಿದರು. ಈ ಸಂದರ್ಭ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ.ಎನ್ ಕುಮಾರ್, ಸಂಘದ ಅಧ್ಯಕ್ಷ ಪಿ.ಎಲ್ ವಸಂತ್ ಕುಮಾರ್, ಉಪಾಧ್ಯಕ್ಷ ಮಣಿಯಯ್ಯ ಮಾತನಾಡಿದರು, ವಿಸ್ತರಣಾಧಿಕಾರಿಗಳಾದ ನಿಶ್ಚಿತ್, ಸಚಿನ್, ಸರ್ವ ನಿರ್ದೇಶಕರು, ಸಿಇಒ ಸತೀಶ್, ಸಿಬ್ಬಂದಿ ಮಂಜುನಾಥ್, ಮಂಜು ಮತ್ತು ಸದಸ್ಯರು ಹಾಜರಿದ್ದರು.