ರಾಜ್ಯಾದ್ಯಂತ ತಡೆ ಹಿಡಿದಿರುವ ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲು ಪ್ರಕಟಣೆ ಕೆಲಸವನ್ನು ಮುಖ್ಯಮಂತ್ರಿಗಳು ಉಪ ಸಮಿತಿ ರಚಿಸಿ ನನಗೆ ನೀಡಿದ್ದು ಕಳೆದೆರಡು ವರ್ಷಗಳಿಂದಿರುವ ಸಮಸ್ಯೆ ಶೀಘ್ರ ಬಗೆಹರಿಸುವುದಾಗಿ ಪೌರಾಡಳಿತ, ತೋಟಗಾರಿಕೆ, ರೇಷ್ಮೆ ಸಚಿವ ಕೆ.ಸಿ ನಾರಾಯಣಗೌಡ ಹೇಳಿದರು.

ಪಟ್ಟಣದಲ್ಲಿ ನೂತನವಾಗಿ ಎಸ್.ಎಫ್.ಸಿ ಮುಕ್ತ ನಿಧಿ ಮತ್ತು ವಿಶೇಷ ಅನುದಾನದಡಿ ರೂ.2.72 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಪುರಸಭಾ ಕಚೇರಿ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು, ಮೀಸಲಾತಿ ಸಂಬಂಧ ಎಲ್ಲರನ್ನು ಸಮಾಧಾನ ಪಡಿಸಲು ಸಾಧ್ಯವಿಲ್ಲ, ಇಲಾಖೆ ವತಿಯಿಂದ ಆದೇಶ ಹೊರಡಿಸಿದರೆ ಕೆಲವರು ಕೋರ್ಟ್ ನಿಂದ ತಡೆ ಆದೇಶ ತರುತ್ತಾರೆ ಇದಕ್ಕೆಲ್ಲಾ ಶೀಘ್ರ ಪರಿಹಾರ ದೊರಕಿಸಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಭರವಸೆ ನೀಡಿದರು, ಕೊರೊನಾ ಸಂದರ್ಭ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯ ಎಲ್ಲರಿಗೂ ಮಾದರಿ, ಕೊರೋನಾ ಸೋಂಕು ತಡೆಗಟ್ಟಲು ಶ್ರಮವಹಿಸಿದ ಜಿಲ್ಲಾಡಳಿತ, ತಾಲೂಕು ಮತ್ತು ಪುರಸಭೆ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ನನ್ನ ನಮನ ಎಂದರು. ಶಾಸಕ ಕೆ.ಮಹದೇವ್ ಅವರು ನನಗೆ ನೆಂಟರು, ಸ್ನೇಹಿತರು ಮತ್ತು ಒಂದೇ ಪಕ್ಷದಲ್ಲಿದ್ದವರು ಅವರೊಂದಿಗೆ 12ವರ್ಷದಿಂದ ಜೊತೆಗಿದ್ದೇನೆ, ತಾಲೂಕಿನ ಸಂಪೂರ್ಣ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದರು. ಸ್ವಕ್ಷೇತ್ರ ಕೆ.ಆರ್ ಪೇಟೆಯಲ್ಲಿ ಹಣವಿದ್ದರೂ ಕಟ್ಟಡ ನಿರ್ಮಾಣ ಸಾಧ್ಯವಾಗಿಲ್ಲ ಪಿರಿಯಾಪಟ್ಟಣದ ಶಾಸಕರು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಉತ್ತಮ ಕಟ್ಟಡ ನಿರ್ಮಾಣವಾಗಿರುವುದು ಶ್ಲಾಘನೀಯ, ಸಚಿವನಾದ ಮೇಲೆ ಇಲಾಖೆ ವತಿಯಿಂದ ಇದು ಮೊದಲ ಉದ್ಘಾಟನಾ ಕಾರ್ಯಕ್ರಮ ಎಂದು ಇಲಾಖೆ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.   

    ಸಂಸದ ಪ್ರತಾಪ್ ಸಿಂಹ ಮಾತನಾಡಿ ಜಿಲ್ಲೆಯಾದ್ಯಂತ ನಗರ ಪ್ರದೇಶಗಳಲ್ಲಿನ ಒಳಚರಂಡಿ ಮತ್ತು ಘನತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸಲು ಸಚಿವರು ಒಪ್ಪಿಗೆ ಸೂಚಿಸಿ ಮೈಸೂರು ಜಿಲ್ಲೆ ಅಭಿವೃದ್ಧಿಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳಿಗೆ ಹೆಚ್ಚು ಅನುದಾನ ನೀಡುವುದಾಗಿ ತಿಳಿಸಿದ್ದಾರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆರೆ ಪ್ರವಾಹ ಹಾಗೂ ಕೊರೊನಾ ಸಂದರ್ಭ ನಿರ್ವಹಿಸಿದ ಕಾರ್ಯ ದೇಶಕ್ಕೆ ಮಾದರಿ, ಪಿರಿಯಾಪಟ್ಟಣದ ಸಮಗ್ರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.

    ಶಾಸಕ ಕೆ.ಮಹದೇವ್ ಮಾತನಾಡಿ ಎಸ್.ಎಫ್.ಸಿ ಅನುದಾನದಡಿ ಹಿಂದಿನಿಂದಲೂ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಅನುದಾನಗಳನ್ನು ನೀಡಿದ್ದರೂ ಸಹ ಜನಸಂಖ್ಯೆ ಬೆಳೆದಂತೆ ನಾಗರಿಕರ ಸಮಸ್ಯೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ, ಪಟ್ಟಣದ ಅಭಿವೃದ್ಧಿಗೆ ಪೌರಾಡಳಿತ ಇಲಾಖೆ ವತಿಯಿಂದ ಹೆಚ್ಚಿನ ಅನುದಾನ ನೀಡುವಂತೆ ಸಚಿವರನ್ನು ಕೋರಿದರು. ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಜೋಡೆತ್ತಿನಂತೆ ಕೆಲಸ ನಿರ್ವಹಿಸಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದರು.            ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹೆಚ್.ಸಿ ಬಸವರಾಜು, ಜಿ.ಪಂ ಸದಸ್ಯ ಕೆ.ಎಸ್ ಮಂಜುನಾಥ್, ತಾ.ಪಂ ಅಧ್ಯಕ್ಷೆ ಕೆ.ಆರ್ ನಿರೂಪ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ ರಂಗಸ್ವಾಮಿ, ಮಂಡ್ಯ ಜಿಲ್ಲೆ ಮೂಡ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಆರ್.ಲೋಕನಾಥ್, ಕಾರ್ಯಪಾಲಕ ಅಭಿಯಂತರ ಶ್ರೀಕಂಠಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಪಾರ್ವತಿ ದೇವಿ, ಉಪ ವಿಭಾಗಾಧಿಕಾರಿ ಬಿ.ಎನ್ ವೀಣಾ, ತಹಶೀಲ್ದಾರ್ ಶ್ವೇತಾ ಎನ್ ರವೀಂದ್ರ, ಪುರಸಭಾ ಮುಖ್ಯಾಧಿಕಾರಿ ಎ.ಚಂದ್ರಕುಮಾರ್, ಕಿರಿಯ ಅಭಿಯಂತರ ಜಿ.ಎಸ್ ಸದಾಶಿವಪ್ಪ, 23 ವಾರ್ಡ್ ಪುರಸಭಾ ಸದಸ್ಯರುಗಳು ಮತ್ತು ಸಿಬ್ಬಂದಿ, ಮೈಮುಲ್ ನಿರ್ದೇಶಕ ಪಿ.ಎಂ ಪ್ರಸನ್ನ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು. 

Leave a Comment

Your email address will not be published. Required fields are marked *

error: Content is protected !!
Scroll to Top